ಮೈಸೂರಲ್ಲಿ ನಾಳೆ ಛತ್ರಪತಿ ಶಿವಾಜಿ ಪುತ್ಥಳಿ ಮೆರವಣಿಗೆ

ಮೈಸೂರು, ಫೆ.17(ಆರ್‍ಕೆಬಿ)- ಛತ್ರಪತಿ ಶಿವಾಜಿ ಮಹಾ ರಾಜರ 393ನೇ ಜಯಂತ್ಯೋತ್ಸವದÀ ಅಂಗವಾಗಿ ಫೆ.19 ರಂದು ಮೈಸೂರಿನಲ್ಲಿ ಬೃಹತ್ ಮೆರವಣಿಗೆ, ಉಪನ್ಯಾಸ, ನಾಟಕ ಆಯೋಜಿಸಲಾಗಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್.ಗೋಪಾಲರಾವ್ ಜಾಧವ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಯಂತ್ಯೋತ್ಸವ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಶಿವಾಜಿ ಮಹಾರಾಜರ ಪುತ್ಥಳಿಯ ಮೆರವಣಿಗೆ ಮೈಸೂರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಹೊರಡಲಿದೆ. ದೇವ ರಾಜ ಅರಸು ರಸ್ತೆ ಮೂಲಕ ಮೆರವಣಿಗೆ ಕಲಾಮಂದಿರ ತಲುಪಲಿದೆ. ಮೆರವಣಿಗೆಯಲ್ಲಿ ವಿವಿದ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದರು. ಮೆರವಣಿಗೆ ಕಲಾ ಮಂದಿರ ತಲುಪಿದ ಬಳಿಕ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸು ವರು. ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಡಿ.ಬನುಮಯ್ಯ ಕಾಲೇಜಿನ ನಿವೃತ್ತ ಪ್ರಾಂಶು ಪಾಲ ಶಿವಾಜಿ ಜೋಯಿಸ್ ವಿಶೇಷ ಉಪನ್ಯಾಸ ನೀಡು ವರು. ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ಶಿವಾಜಿ ಪುತ್ಥಳಿ ಸ್ಥಾಪಿಸುವಂತೆ ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಆರ್.ವಿ. ಶಿವಾಜಿರಾವ್ ರಂಪೂರೆ, ಜಯಂತ್ಯೋ ತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೆ. ನಾಗೇಂದ್ರ ರಾವ್ ಅವತಾಡೆ, ಎಂ.ಜೆ.ಕೃಷ್ಣಾಜೀರಾವ್ ಗಾರ್ಗೆ, ಕೆಕೆಎಂಪಿ ಅಧ್ಯಕ್ಷ ಕೇಶವನಾಥ್ ಜಾಧವ್, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.