ಮೊಬೈಲ್, ಟ್ಯಾಬ್, ಟಿವಿ ವೀಕ್ಷಣೆಯಿಂದ ಮಕ್ಕಳ ಮೆದುಳಿನ ಮೇಲೆ ದುಷ್ಪರಿಣಾಮ

ಮೈಸೂರು: ಮಕ್ಕಳು ಮೊಬೈಲ್, ಟ್ಯಾಬ್ ಮತ್ತು ಟಿವಿಯನ್ನು ಹೆಚ್ಚಾಗಿ ನೋಡುವುದರಿಂದ ಮೆದುಳಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವಾಕ್ ಮತ್ತು ಶ್ರವಣ ತಜ್ಞೆ, ರಂಗಕಲಾವಿದೆ ಇಂದಿರಾ ನಾಯರ್ ಹೇಳಿದರು.

ನಗರದ ಸರಸ್ವತಿಪುರಂನಲ್ಲಿ ಜೆಎಸ್‍ಎಸ್ ಮಹಿಳಾ ಕಾಲೇಜಿ ನಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠ, ಜೆಎಸ್‍ಎಸ್ ಕಲಾ ಮಂಟಪದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಳೆಯರ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಹಾಗೂ ಅವರೊಡನೆ ಸಮಯ ಹೇಗೆ ಕಳೆಯಬೇಕೆಂದು ತಿಳಿಯದ ಪೆÇೀಷಕರು ಮಕ್ಕಳಿಗೆ ಮೊಬೈಲ್, ಟ್ಯಾಬ್ ನೋಡುವ ಚಟ ಹೇಳಿಕೊಟ್ಟಿ ದ್ದಾರೆ. ಮಕ್ಕಳ ಮುಂದೆಯೇ ಕೆಟ್ಟ ಧಾರಾವಾಹಿ ನೋಡುವು ದರಿಂದ ಬೇಡದ ವಿಚಾರಗಳು ಚಿಣ್ಣರ ತಲೆಗೆ ಹೋಗುತ್ತಿವೆ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪೋಷಕರು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ರಂಗಕರ್ಮಿ ಮೈಮ್ ರಮೇಶ್ ಮಾತನಾಡಿ, ಪೆÇೀಷಕರು ತಮ್ಮ ಕನಸನ್ನು ಮಕ್ಕಳ ಮೇಲೆ ಹೇರಬಾರದು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಬೇಕೆಂದು ಮಕ್ಕಳಿಗೆ ಒತ್ತಡ ಹೇರುವುದು ಹಾಗೂ ಕಡಿಮೆ ಅಂಕ ಪಡೆದರೆ ಬೈಯ್ಯುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಪೆÇೀಷಕರು ಮಕ್ಕಳ ಸಾಧನೆಗೆ ಅಡ್ಡಿಯಾಗದೆ ಅವರ ಪಾಡಿಗೆ ಅವರನ್ನು ಸ್ವತಂತ್ರವಾಗಿ ಬೀಡಿ. ಅವರೇ ಸ್ವತಂತ್ರ ಕನಸು ಕಂಡು ಸಾಧಕರಾಗುತ್ತಾರೆ ಎಂದು ತಿಳಿಸಿದರು.

ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸಬೇಕು. ರಂಗ ಭೂಮಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ಪ್ರತಿಯೊಂದು ಶಾಲೆಯಲ್ಲಿಯೂ ರಂಗ ಶಿಬಿರಗಳನ್ನು ಆಯೋಜಿಸಬೇಕು ಎಂದು ಹೇಳಿದರು.

ಕುಣಿದು ಕುಪ್ಪಳಿಸಿದ ಎಳೆಯರು: 21 ದಿನಗಳ ಎಳೆಯರ ಮೇಳದಲ್ಲಿ ಕಲಿತಿರುವುದನ್ನು ಪುಟಾಣಿಗಳು ವೇದಿಕೆಯ ಮೇಲೆ ಪ್ರದರ್ಶನ ನೀಡಿದರು. ಮೊದಲಿಗೆ ವಿವಿಧ ವೇಷ ಭೂಷಣಗಳನ್ನು ತೊಟ್ಟ ಚಿಣ್ಣರು ‘ಸೋಲಿಸಬೇಡ ಗೆಲ್ಲಿಸಯ್ಯ’ ಹಾಡನ್ನು ಹಾಡುವ ಮೂಲಕ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಹಾಡು, ನೃತ್ಯ, ನಾಟಕಗಳನ್ನು ಮಾಡಿ ಕುಣಿದು ಕುಪ್ಪಳಿಸಿದರು. ವೇದಿಕೆಯಲ್ಲಿ ಶಿಬಿರದ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.