70 ವರ್ಷದ ಬಳಿಕ ಸ್ವಚ್ಛತೆಯ ಪಾಠ

ಮೈಸೂರು, ಆ.24(ಎಸ್‍ಪಿಎನ್)- ಭಾರತ ಶ್ರೀಮಂತ ದೇಶ. ಆದರೆ, ಇಲ್ಲಿನ ಪ್ರಜೆಗಳು ಮಾತ್ರ ಏನೂ ಇಲ್ಲದಂತೆ ಬದುಕು ತ್ತಿರುವುದು ಸೋಜಿಗವೇ ಸರಿ ಎಂದು ರಾಜ್ಯ ಸರ್ಕಾರದ ಜವಳಿ ಅಭಿವೃದ್ಧಿ ಆಯುಕ್ತ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.

ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀರಾಜೇಂದ್ರ ಭವನದಲ್ಲಿ `ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಬಳಗ’ದ ಪ್ರಥಮ ವಾರ್ಷಿಕೋತ್ಸವದಲ್ಲಿ ಮೂವರು ಸಾಧಕ ಮಹಿಳೆಯರಿಗೆ `ಆದರ್ಶ ಗೃಹಿಣಿ ಪ್ರಶಸ್ತಿ’ ವಿತರಿಸಿ ಮಾತನಾಡಿದ ಅವರು, ನಮ್ಮ ದೇಶ ದಲ್ಲಿ ಇರುವಷ್ಟು ಮಹಾಪುರುಷರ ಇತಿ ಹಾಸ ಹಾಗೂ ಅಧ್ಯಾತ್ಮದ ಬೇರುಗಳು ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಈ ಸಾಲಿನಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕೊಡುಗೆಯೂ ಇದೆ ಎಂದರು.

ನಾವು ಬೇರೆಯವರ ಪ್ರಗತಿಯನ್ನು ಬಲು ಬೇಗ ವಿಮರ್ಶೆ ಮಾಡುತ್ತೇವೆ. ಆದರೆ, ನಮ್ಮ ಕೆಲಸವನ್ನು ಎಂದಿಗೂ ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಇದರಿಂದ ಸಾಮಾ ಜಿಕ ಅಸಮತೋಲನ, ಜೀವನ ಪ್ರಗತಿ ಮತ್ತು ಕ್ರಮ, ಹೊಸತನಕ್ಕೆ ತೆರೆದುಕೊಳ್ಳುವ ಆಲೋ ಚನಾ ಲಹರಿಗೆ ತೆರೆದುಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದ ಮೇಲೆ `ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ’ ಎಂದು ಪ್ರಧಾನಿ ಮೋದಿ ಹೇಳಬೇಕಾಗಿ ಬಂತು. ಈ ಪರಿಸ್ಥಿತಿ ಸೃಷ್ಟಿಸಿಕೊಂಡಿರುವುದು ನಮ್ಮ ದೌರ್ಬ ಲ್ಯವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುವಾಗ ಹೊಸಹೊಸ ಯೋಜನೆ ಗಳನ್ನು ಪರಿಚಯಿಸಿ, ಅನುಷ್ಠಾನಗೊಳಿಸಲು ಮುಂದಾದಾಗ ಜನತೆ ತಿರಸ್ಕರಿಸಿದ ಪ್ರಸಂಗ ಕಂಡಿದ್ದೇನೆ. ಇದಕ್ಕೆಲ್ಲಾ ಕಾರಣ ಹುಡು ಕುತ್ತಾ ಹೋದರೆ, ನಮ್ಮ ಪೂರ್ವಜರ ಚಿಂತನೆ ಹಾಗೂ ಜೀವನಕ್ರಮಗಳನ್ನು ಇನ್ನೂ ಜೀವಂತ ವಾಗಿಟ್ಟು ಪೋಷಿಸುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ವ್ಯಾಖ್ಯಾನಿಸಿದರು.

ನಾವೆಲ್ಲಾ ಗೌತಮ ಬುದ್ದ ಹಾಗೂ ಅಕ್ಕ ಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ ಸೇರಿ ದಂತೆ ಅನೇಕ ಶಿವಶರಣರು ಜೀವಿಸಿದ ನೆಲ ದಲ್ಲಿ ಬದುಕುತ್ತಿದ್ದೇವೆ. ಆದರೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿಲ್ಲ. ಪಾಶ್ಚಿ ಮಾತ್ಯ ದೇಶದಲ್ಲಿ ಸ್ತ್ರೀಯರಿಗೆ ಎಲ್ಲಾ ರಂಗದಲ್ಲೂ ಸ್ವಾತಂತ್ರ್ಯ ಲಭಿಸಿದೆ. ಆದರೆ ಅಮೇರಿಕಾದಂಥ ಮುಂದುವರೆದ ದೇಶ ದಲ್ಲಿ ಇಂದಿಗೂ ಮಹಿಳಾ ರಾಷ್ಟ್ರಾಧ್ಯಕ್ಷರನ್ನು ಅಲ್ಲಿನ ಜನತೆ ಆಯ್ಕೆ ಮಾಡಿಲ್ಲ. ಆದರೆ, ನಮ್ಮ ದೇಶದಲ್ಲಿ ಈಗಾಗಲೇ ಮಹಿಳಾ ಪ್ರಧಾನಿಯನ್ನು ಆಯ್ಕೆ ಮಾಡಿದ್ದೇವೆ. ಇದು ನಮ್ಮಲ್ಲಿನ ವಿಶೇಷ ಎಂದರು.

ಚಿಕ್ಕ ವಯಸ್ಸಿನಲ್ಲೇ ಹೇಮರೆಡ್ಡಿ ಮಲ್ಲಮ್ಮ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವಾಗಿಸಿಕೊಂಡಿದ್ದರು. ಈಕೆ ಬೆಳದಂತೆ ಸಮೀಪದ ಸಿದ್ದಾಪುರ ಮೇವರೆಡ್ಡಿಯ ಮಗ ಭರಮರೆಡ್ಡಿ ಜೊತೆ ಗುರು-ಹಿರಿಯರ ಸಮ್ಮುಖ ದಲ್ಲಿ ಮದುವೆಯಾಗುತ್ತಾಳೆ. ಊರ ಜನ ರೆಲ್ಲಾ ಭರಮರೆಡ್ಡಿಯನ್ನು ಹುಚ್ಚನೆಂದು ಪರಿಗಣಿಸಿರುತ್ತಾರೆ. ಆದರೆ, ಮಲ್ಲಮ್ಮ ಮಾತ್ರ ತನ್ನ ಗಂಡನಲ್ಲಿದ್ದ ಮುಗ್ಧತೆ, ಸಾಧು ಸ್ವಭಾವ ವನ್ನು ಕಂಡು ಜೀವನ ಸಾಗಿಸುವ ಪ್ರಸಂಗ ಎಲ್ಲರಿಗೂ ತಿಳಿದ ವಿಷಯ ಎಂದರು.

ದಿನಕಳೆದಂತೆ ಮಲ್ಲಮ್ಮಳ ಗಂಡನ ಮನೆ ಯಲ್ಲಿ ಅತ್ತೆಯ ಕಿರುಕುಳ ಹೆಚ್ಚಾಗುತ್ತದೆ. ಇದರ ಜೊತೆಗೆ ಮೈದುನನ ಕಿರುಕುಳವನ್ನೂ ಸಹಿಸಿಕೊಳ್ಳುವ ಪ್ರಸಂಗ ಇದೆ. ಒಮ್ಮೆ ಮಲ್ಲ ಮ್ಮಳ ಮೈದುನ ವೇಶ್ಯೆಯ ವ್ಯಾಮೋಹ ದಿಂದ ಮಲ್ಲಮ್ಮಳ ಮೂಗುತಿಯನ್ನು ನೀಡುವಂತೆ ಒತ್ತಾಯಿಸುತ್ತಾನೆ. ಮೈದು ನನ ಆಸೆಯಂತೆ ತನ್ನ ಮೂಗುತಿಯನ್ನು ನೀಡುತ್ತಾಳೆ. ಇದನ್ನು ಧರಿಸಿದ ವೇಶ್ಯೆಗೆ ಮನಪರಿವರ್ತನೆಯಾದ ಪ್ರಸಂಗ ಇಂದಿನ ಕೌಟುಂಬಿಕ ಸಮಸ್ಯೆಗಳ ಸುಧಾರಣೆಗೂ ಮಾದರಿ ಎಂದು ತಿಳಿಸಿದರಲ್ಲದೆ, ಈ ನಿಟ್ಟಿ ನಲ್ಲಿ ಹೇಮರೆಡ್ಡಿ ಮಲ್ಲಮ್ಮ ಬಳಗದ ಪದಾಧಿಕಾರಿಗಳು ಒಂದೆಡೆ ಸೇರಿ, ಮಲ್ಲ ಮ್ಮಳ ಚರಿತ್ರೆಯನ್ನು ಸ್ಮರಿಸುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ಎಂದರು. ಈ ವೇಳೆ ಲಿಂಗಮ್ಮ ಬಸವರಾಜಪ್ಪ, ಡಾ. ಜ್ಯೋತಿ ಶಂಕರ್, ಕಮಲ ಗಿರೀಶ್ ಅವರಿಗೆ ಆದರ್ಶ ಗೃಹಿಣಿ ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ವೇದಿಕೆಯಲ್ಲಿ ವಿರಾಜಪೇಟೆ ತಾಲೂಕಿನ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ವಿಶ್ರಾಂತ ಕುಲ ಪತಿ ಇಂದುಮತಿ, ಮಹಾಲಕ್ಷ್ಮಿ ಸ್ವೀಟ್ಸ್ ಅಂಡ್ ಪ್ರಾಪರ್ಟೀಸ್‍ನ ಶಿವಕುಮಾರ್, ಹೇಮರೆಡ್ಡಿ ಮಲ್ಲಮ್ಮ ಬಳಗದ ಅಧ್ಯಕ್ಷ ಜಿ.ಎಂ. ವಾಮ ದೇವ, ಗೌರವಾಧ್ಯಕ್ಷ ಗೊ.ರು.ಪರಮೇ ಶ್ವರಪ್ಪ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಡಾ.ದಯಾನಂದ, ವೆಂಕಟೇಶಯ್ಯ, ವೀರ ಭದ್ರಯ್ಯ ಹಿರೇಮಠ್, ಸವಿತಾ ಹಿರೇ ಮಠ್ ಭಾವಗೀತೆ ಮತ್ತು ಜನಪದ ಗೀತೆ ಗಳ ಗಾಯನ ನಡೆಸಿಕೊಟ್ಟರು.