ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ: 6 ಟನ್ ತ್ಯಾಜ್ಯ ಸಂಗ್ರಹ

ಮೈಸೂರು: ಮೈಸೂ ರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನು ವಾರ ಸಾರ್ವಜನಿಕರೊಂದಿಗೆ 9 ಸಂಘ -ಸಂಸ್ಥೆಗಳ ಕಾರ್ಯಕರ್ತರು ನಡೆಸಿದ ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 6 ಟನ್‍ನಷ್ಟು ತ್ಯಾಜ್ಯ ಸಂಗ್ರಹವಾಯಿತು.

ಕುಕ್ಕರಹಳ್ಳಿ ಕೆರೆ ಉಳಿಸಿ ಹಾಗೂ ಕ್ಲೀನ್ ಮೈಸೂರು ಫೌಂಡೇಷನ್ ಸಂಸ್ಥೆಯೊಂದಿಗೆ ವಿವಿಧ ಸಂಘಟನೆಗಳ ಸುಮಾರು 250ಕ್ಕೂ ಹೆಚ್ಚು ಸದಸ್ಯರು ಇಂದು ಬೆಳಿಗ್ಗೆ 6ಕ್ಕೆ ಕುಕ್ಕರಹಳ್ಳಿ ಕೆರೆಗೆ ಆಗಮಿಸಿದರು. ಬಳಿಕ ವಿವಿಧ ತಂಡಗಳ ರಚಿಸಿಕೊಂಡು ಕೆರೆಯ ಆವರಣದಲ್ಲಿ ಹರಡಿದ್ದ ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಪರಸರಕ್ಕೆ ಮಾರಕವಾಗುವ ತ್ಯಾಜ್ಯವನ್ನು ಬೆಳಿಗ್ಗೆ 9ಗಂಟೆವರೆಗೂ ಸಂಗ್ರಹಿಸಿದರು.

ಮಳೆಗಾಲಕ್ಕೂ ಮುನ್ನಾವೇ ಕೆರೆ ಆವರಣದಲ್ಲಿರುವ ತ್ಯಾಜ್ಯವನ್ನು ಸ್ವಚ್ಛ ಗೊಳಿಸದಿದ್ದರೆ, ಮಳೆಯ ನೀರಿನೊಂದಿಗೆ ಕೆರೆಯೊಳಗೆ ಸೇರಿ ಅಲ್ಲಿನ ಜಲಚರ, ಜೀವ ವೈವಿಧ್ಯಕ್ಕೆ ಹಾನಿಯಾಗುವ ಸಾಧ್ಯತೆ ಯಿದೆ. ಭಾನುವಾರ ರಜೆಯ ದಿನವಾದ ಕಾರಣ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳ ಲಾಯಿತು. ಸುಮಾರು 150 ಚೀಲಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಕೆರೆಯ ಆವರಣವನ್ನು ಸ್ವಚ್ಛಗೊಳಿಸ ಲಾಯಿತು ಎಂದು ಕ್ಲೀನ್ ಮೈಸೂರು ಫೌಂಡೇ ಷನ್ ಖಜಾಂಚಿ ವೆಂಕಟೇಶ್ ತಿಳಿಸಿದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್ ಮಾತನಾಡಿ, ಇಂದು ನಡೆದ ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸಿದ್ದು ವಿಶೇಷ. ಕೆರೆ ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ವಾಯು ವಿಹಾರಕ್ಕೆ ಬರುವ ಅನೇಕರು ಕೆರೆ ವಾತಾ ವರಣ ಉತ್ತಮವಾಗಿರಲೆಂದು ಬಯಸು ತ್ತಾರೆ. ಆದರೆ ಕೆಲವರು ಪ್ಲಾಸ್ಟಿಕ್ ಸೇರಿ ದಂತೆ ತ್ಯಾಜ್ಯ ವಸ್ತುಗಳನ್ನು ಎಸೆದು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ನಗರದ ಹೃದಯ ಭಾಗದಲ್ಲಿರುವ ಕುಕ್ಕರ ಹಳ್ಳಿ ಕೆರೆ ಸೇರಿದಂತೆ ಎಲ್ಲಾ ಕೆರೆ ಹಾಗೂ ಸುತ್ತಮುತ್ತಲಿನ ಪರಿಸರ ಕಾಪಾಡುವ ಜವಾಬ್ದಾರಿ ಎಲ್ಲರದ್ದಾಗಿದೆ. ಇದನ್ನು ಕೇವಲ ನಗರ ಪಾಲಿಕೆ, ಸಂಘ-ಸಂಸ್ಥೆ ಗಳು ಮಾಡುತ್ತವೆ ಎನ್ನುವ ಮನಸ್ಥಿತಿಯಿಂದ ದೂರ ಬರಬೇಕು. ಇಂದು ನಡೆದ ಅಭಿಯಾನ ದಲ್ಲಿ ವಿವಿಧ ಸಂಘ,ಸಂಸ್ಥೆಗಳ ಸದಸ್ಯರು ಪಾಲ್ಗೊಂಡು ಕೆರೆ ಆವರಣದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಸಂಗ್ರಹಿಸಿದ್ದಾರೆ ಎಂದರು.