ತಿ.ನರಸೀಪುರ, ಜೂ. 30-ವಿವಿಧ ಸಂಘಟನೆಗಳಿಂದ ಪಟ್ಟಣದ ತ್ರಿವೇಣಿ ಸಂಗಮ ದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಪಟ್ಟಣದಲ್ಲಿನ ಶ್ರೀ ಗುಂಜಾ ನರಸಿಂಹಸ್ವಾಮಿ ಮತ್ತು ಅಗಸ್ತ್ಯೇಶ್ವರ ದೇವಾಲಯ ಗಳ ಮಧ್ಯೆಭಾಗದಲ್ಲಿ ಹರಿ ಯುವ ಕಾವೇರಿ, ಕಬಿನಿ ಹಾಗೂ ಸ್ಪಟಿಕ ಸರೋವರದ ಸಂಗಮದ ಸ್ಥಳದಲ್ಲಿ ಬೆಂಗಳೂರಿನ ಪೂರ್ಣ ಪ್ರಮತಿ ಶಾಲೆ, ತಿ.ನರಸೀಪುರ ಪುರಸಭೆ, ಯುವ ಬಿಗ್ರೇಡ್, ಶ್ರೀವೀರಾಂಜನೇಯ ಧರ್ಮ ಜಾಗೃತಿ ಬಳಗ ಹಾಗೂ ಜ್ವಾಲಾಮುಖಿ ಗ್ರೂಪ್ ಸದಸ್ಯರು ಒಟ್ಟಾಗಿ ನದಿ ಪಾತ್ರ ಸ್ವಚ್ಛಗೊಳಿಸಿದರು. ಈ ವೇಳೆ ಪೂರ್ಣ ಪ್ರಮತಿ ಶಾಲೆ ಪ್ರಾಂಶುಪಾಲೆ ಶಶಿರೇಖಾ ಮಾತನಾಡಿ, ನಮ್ಮ ಜೀವಜಲ ಮೂಲಗಳ ರಕ್ಷಣೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಅನೇಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ನದಿಯ ಸ್ವಚ್ಛತೆಗೆ ಶಾಲಾ ಮಕ್ಕಳನ್ನು ತೊಡಗಿಸುವ ಮೂಲಕ ಅವರಲ್ಲಿ ನದಿ ಮಹತ್ವ ತಿಳಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾ ಧಿಕಾರಿ ಆರ್.ಅಶೋಕ್, ಆರೋಗ್ಯಾಧಿಕಾರಿ ಚೇತನ್‍ಕುಮಾರ್, ಮಹೇಂದ್ರ, ಪೂರ್ಣ ಪ್ರಮತಿ ಶಾಲಾ ಶಿಕ್ಷಕ ವೃಂದ, ಪೆÇೀಷಕರು ಹಾಗೂ ಸಂಘಟನೆಗಳ ಸದಸ್ಯರಿದ್ದರು.