9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಜನರು ಮೌಢ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ

ಚಾಮರಾಜನಗರ: ಜಿಲ್ಲೆಯ ಜನರು ಮೌಢ್ಯತೆಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ದುಂದುವೆಚ್ಚ ಹೆಚ್ಚಾಗುತ್ತಿದೆ. ಜಿಲ್ಲೆಯ ಸಾಹಿತಿಗಳು ಜನರ ಈ ಮೌಢ್ಯವನ್ನು ನಿವಾರಿಸಲು ಪ್ರಯತ್ನಗ ಳನ್ನು ನಡೆಸಬೇಕು ಎಂದು ಸಂಸದ ಆರ್. ಧ್ರುವನಾರಾಯಣ್ ಹೇಳಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣ ದಲ್ಲಿ ಮೂರು ದಿನಗಳ ಕಾಲ ನಡೆದ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನರು ಶಿಕ್ಷಣಕ್ಕೆ ಆದ್ಯತೆ ನೀಡದೇ, ಶಾಸಕರನ್ನು, ಸಂಸದರನ್ನು ದೇವಸ್ಥಾನ ನಿರ್ಮಿಸಲು ಅನುದಾನ ನೀಡಿ ಎಂದು ಕೇಳು ತ್ತಾರೆ. ಊರಿನಲ್ಲಿ ಅನೇಕ ದೇವಸ್ಥಾನ ಗಳಿವೆ. ಅದರ ಜೊತೆಗೆ ಮತ್ತೊಂದು ದೇವಸ್ಥಾನ ನಿರ್ಮಿಸಲು ಮುಂದಾಗು ತ್ತಾರೆ ಈ ಪ್ರವೃತ್ತಿ ಸರಿಯಲ್ಲ ಎಂದರು.

ಜನರು ಯಾವುದಕ್ಕೆ ಪ್ರಾಶಸ್ತ್ಯ ನೀಡ ಬೇಕೋ ಅದಕ್ಕೆ ಪ್ರಾಶಸ್ತ್ಯ ನೀಡುತ್ತಿಲ್ಲ. ಶಿಕ್ಷಣಕ್ಕೆ ಆರೋಗ್ಯಕ್ಕೆ ಮಹತ್ವ ನೀಡುವುದಿಲ್ಲ. ಬೆವರು ಸುರಿಸಿ ದುಡಿದ ಹಣವನ್ನು ಹಬ್ಬ ಹರಿದಿನಗಳ ಹೆಸರಿನಲ್ಲಿ ಖರ್ಚು ಮಾಡು ತ್ತಾರೆ. ಊರ ಹಬ್ಬಗಳ ಸಂದರ್ಭದಲ್ಲಿ ಮದ್ಯದ ಅಂಗಡಿಗಳ ಮುಂದೆ ನೂರಾರು ಬೈಕು ಗಳು ನಿಂತಿರುತ್ತವೆ ಎಂದು ಅವರು ವಿಷಾ ದಿಸಿದರು. ಮೂರು ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಬಹಳ ಅರ್ಥ ಪೂರ್ಣವಾಗಿ ನಡೆದಿದೆ. ಇದರಲ್ಲಿ ಅನೇಕ ಗೋಷ್ಠಿಗಳು ನಡೆದು ಬಹಳ ವಿಷಯಗಳ ಬಗ್ಗೆ ಚರ್ಚೆಯಾಗಿದೆ. ಡಾ. ಶಿವರಾಜಪ್ಪ ಅಧ್ಯಕ್ಷರಾಗಿರುವುದು ಅರ್ಥಪೂರ್ಣ ವಾಗಿದೆ. ಅವರು ಪ್ರಾಧ್ಯಾಪಕರಾಗಿರು ವುದರ ಜೊತೆಗೆ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಮಾಡಬೇಕು ಎಂಬ ನಿರ್ಣಯವನ್ನು ಸಮ್ಮೇ ಳನದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ ಮೈಸೂರು ವಿವಿಯ ಅಂಬೇಡ್ಕರ್ ಅಧ್ಯ ಯನ ಕೇಂದ್ರ ನಗರದಲ್ಲಿದೆ. ಕೆಲ ವರ್ಷ ಗಳ ಬಳಿಕ ಇದನ್ನೇ ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯವಾಗಿ ನಾವು ಮಾಡೇ ಮಾಡು ತ್ತೇವೆ ಎಂದು ಸಂಸದರು ತಿಳಿಸಿದರು.
ಜಿಲ್ಲೆಯಲ್ಲಿ ಕನ್ನಡ ಭವನವನ್ನು ಈಗಾ ಗಲೇ ಸ್ಥಾಪಿಸಬೇಕಾಗಿತ್ತು. ಇನ್ನೂ ಮಾಡಿ ಲ್ಲದಿರುವುದು ವಿಷಾದ ಎನಿಸುತ್ತದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಉಸ್ತುವಾರಿ ಸಚಿವರ ಜೊತೆ ಮಾತನಾಡಿ, ಆದಷ್ಟು ಬೇಗ ಕನ್ನಡ ಭವನ ನಿರ್ಮಾಣ ಮಾಡಲಾಗು ವುದು. ಸಾಹಿತ್ಯ ಸಮ್ಮೇಳನಕ್ಕೆ ಶ್ರಮಿಸಿದ ಅಧ್ಯಕ್ಷರು ಪದಾಧಿಕಾರಿಗಳಿಗೆ ಅಭಿನಂದನೆ ಗಳನ್ನು ಸಲ್ಲಿಸುತ್ತೇನೆ ಎಂದರು.

ಸಮಾರೋಪ ನುಡಿಗಳನ್ನಾಡಿದ, ಸಾಹಿತಿ ಹಾಗೂ ಚಿಂತಕಿ ಡಾ. ಪ್ರೀತಿ ಶುಭಚಂದ್ರ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿ ರಂಗ ಕಾವ್ಯಗಳ ಬಗ್ಗೆ ಸಾಕಷ್ಟು ಚರ್ಚೆಯಾ ಗಿದೆ. ಇದು ಮೆಚ್ಚುವಂಥದ್ದು, ಜಿಲ್ಲೆ ಸಾಹಿತ್ಯ ಸಂಪತ್ತನ್ನು ಹೊಂದಿದೆ. ಇಂಥ ಜಿಲ್ಲೆ ಯಲ್ಲಿ ಮೂರು ದಿನಗಳ ಸಾಹಿತ್ಯ ಸಮ್ಮೇ ಳನ ಸಂತಸ ಮೂಡಿಸಿದೆ ಎಂದರು.

ಸಮ್ಮೇಳನಾಧ್ಯಕ್ಷ ಡಾ.ಎಸ್. ಶಿವ ರಾಜಪ್ಪ ಮಾತನಾಡಿ, 3 ದಿನಗಳ ಜಿಲ್ಲಾ ಸಾಹಿತ್ಯ ಸಮ್ಮೇಳನ ಬಹಳ ಯಶಸ್ವಿ ಯಾಗಿದೆ. ಇದಕ್ಕೆ ನಾನೇ ಸಾಕ್ಷಿ. ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಜನಿಸಿದ ನನ್ನನ್ನು ಸಾಹಿತ್ಯ ಸಮ್ಮೇಳನಾಧ್ಯ ಕ್ಷರನ್ನಾಗಿ ಮಾಡಿದ್ದಕ್ಕೆ ಪರಿಷತ್‍ನ ಎಲ್ಲಾ ಪದಾ ಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಎಲ್ಲ ಸಮ್ಮೇಳನಗಳಲ್ಲಿ ಹತ್ತು ಹಲವು ನಿರ್ಣಯಗಳನ್ನು ಕೈಗೊಂಡರೂ ಅವು ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ಆದರೆ ಈ ಸಮ್ಮೇಳÀನದಲ್ಲಿ ಎರಡೇಎರಡು ನಿರ್ಣಯ ಕೈಗೊಂಡಿರುವುದು ಸಮಂಜ ಸವಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ವಿನಯ್, ತಾಲೂಕು ಅಧ್ಯಕ್ಷ ಬಿ.ಬಸವರಾಜು, ಮದ್ದೂರು ವಿರೂಪಾಕ್ಷ, ಶ್ರೀನಿವಾಸ ನಾಯ್ಡು, ನಂದೀಶ್, ವೀ.ನಾ. ಚಿದಾನಂದ ಸ್ವಾಮಿ, ಪುಷ್ಪಲತಾ ಶಿವರಾಜಪ್ಪ, ಮಾಜಿ ಶಾಸಕ ಎಸ್. ಬಾಲರಾಜು, ಜಿಪಂ ಮಾಜಿ ಸದಸ್ಯ ಪಿ.ಮರಿಸ್ವಾಮಿ, ಎಪಿಎಂಸಿ ಸದಸ್ಯ ಬಿ.ಕೆ. ರವಿಕುಮಾರ್, ತಾಪಂ ಸದಸ್ಯ ಎಚ್.ವಿ. ಚಂದ್ರು ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಎರಡೇ ನಿರ್ಣಯ…
ಚಾಮರಾಜನಗರ: ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾ ಲಯ ಸ್ಥಾಪನೆ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು ಎಂಬ ಎರಡೇ ನಿರ್ಣಯ ಗಳನ್ನು 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಕೈಗೊಳ್ಳಲಾಯಿತು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮೂರು ದಿನ ಗಳ ಕಾಲ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಮಂಗಳವಾರ ಬಹಿರಂಗ ಅಧಿವೇಶನ ದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಅಧಿವೇಶನ ದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ವಿನಯ್, ಗೌರವ ಕಾರ್ಯದರ್ಶಿ ಬಂಗಾರಗಿರಿನಾಯಕ, ಕೋಶಾಧ್ಯಕ್ಷ ಎಸ್. ನಿರಂಜನಕುಮಾರ್ ಸೇರಿದಂತೆ ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯರೆಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೊಮಾರನಪುರ ವೀರಭದ್ರಸ್ವಾಮಿ ನಿರ್ಣಯ ಮಂಡಿಸಿದರು. ಹೆಚ್ಚು ನಿರ್ಣಯ ಗಳನ್ನು ಕೈಗೊಂಡು ಅವು ಕಾರ್ಯಗತವಾಗದೇ ಉಳಿದು ಹೋಗುವುದಕ್ಕಿಂತ ಎರಡೇ ನಿರ್ಣಯಗಳನ್ನು ಕೈಗೊಳ್ಳುವುದು ಉಚಿತ ಎಂದು ಜಿಲ್ಲಾ ಕಸಾಪದಿಂದ ತೀರ್ಮಾನಿಸಲಾಯಿತು.

ಮೈಸೂರು, ಮಂಗಳೂರು, ಧಾರವಾಡ ಇತ್ಯಾದಿ ವಿಶ್ವ ವಿದ್ಯಾಲಯಗಳಿರುಂತೆ ಗಡಿನಾಡಾದ ಚಾಮರಾಜನಗರದಲ್ಲೂ ಪ್ರತ್ಯೇಕ ವಿಶ್ವ ವಿದ್ಯಾನಿಲಯ ಸ್ಥಾಪಿಸಬೇಕು ಮತ್ತು ಜಿಲ್ಲಾ ಕಸಾಪಕ್ಕೆ ಕನ್ನಡ ಭವನ ನಿರ್ಮಾಣ ಮಾಡಲು ನಿವೇಶನ ವಿದ್ದು, ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದು ನಿರ್ಣಯಿಸಲಾಯಿತು.
ಈ ಎರಡು ನಿರ್ಣಯಗಳನ್ನು ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಅನುಮೋದಿಸಿದರು.

ಶಿಕ್ಷಣಕ್ಕೂ-ಅಭಿವೃದ್ಧಿಗೂ ನಂಟು
ಚಾಮರಾಜನಗರ: ಶಿಕ್ಷಣಕ್ಕೂ ಅಭಿ ವೃದ್ಧಿಗೂ ಬಹಳ ನಂಟಿದೆ. ಒಳ್ಳೆಯ ಶಿಕ್ಷಣ ಎಲ್ಲಿ ಸಿಗುವುದಿ ಲ್ಲವೋ ಆ ಪ್ರದೇಶ ಅಭಿವೃದ್ಧಿಯಲ್ಲಿ ಹಿಂದುಳಿದಿರುತ್ತದೆ ಎಂದು ನಗರದ ದೀನಬಂಧು ಆಶ್ರಮದ ಗೌರವ ಕಾರ್ಯ ದರ್ಶಿ ಪ್ರೊ.ಜಿ.ಎಸ್.ಜಯದೇವ್ ಅಭಿಪ್ರಾಯಪಟ್ಟರು.

ಇಂದಿಲ್ಲಿ ನಡೆದ ಚಾಮರಾಜನಗರ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಗಡಿನಾಡು-ಶಿಕ್ಷಣ-ಅಭಿವೃದ್ಧಿ ವಿಷಯ ಕುರಿತು ವಿಚಾರ ಮಂಡಿಸಿದರು.

ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಬಹಳ ಅಭಿವೃದ್ಧಿ ಹೊಂದಿದೆ. ಏಕೆಂದರೆ ಅಲ್ಲಿ ಶಿಕ್ಷಣ ಅಭಿವೃದ್ಧಿ ಹೊಂದಿದೆ ಎಂದು ಉದಾಹರಣೆ ನೀಡಿದ ಅವರು, ಅಭಿವೃದ್ಧಿ ಎಂದರೆ ವಿಮಾ ನಗಳು, ರಸ್ತೆಗಳು, ಕಾರುಗಳು ಬಂದರೆ ಅಭಿವೃದ್ಧಿ ಹೊಂದಿದೆ. ಏಕೆಂದರೆ ಅಲ್ಲಿ ಶಿಕ್ಷಣ ಅಭಿವೃದ್ಧಿ ಹೊಂದಿದಾಗ ಮಾತ್ರ ಆ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಶಾಲೆಗಳಿಗೆ ಜನರ ಮನಸ್ಸನ್ನು, ಸಂಸ್ಕøತಿಯನ್ನು ಬದ ಲಾಯಿಸುವ ಶಕ್ತಿ ಇದೆ ಎಂದ ಅವರು, ಇಂಗ್ಲಿಷ್ ಕಲಿತರೆ ಮಾತ್ರ ಅನ್ನ ಸಿಗುತ್ತದೆ ಎಂಬುದು ತಪ್ಪು ಕಲ್ಪನೆ ಎಂದರು.

ಚಾಮರಾಜನಗರದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಬಣ್ಣ ತಯಾರಿಸುವ ಕಂಪನಿಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕಾರ್ಖಾನೆಗಳು ಪರಿಸರ ಮಾಲಿನ್ಯ ಮಾಡುತ್ತವೆ. ಹೀಗಾಗಿ ಈ ಕಾರ್ಖಾನೆಗಳನ್ನು ಹಲವು ಕಡೆ ಮುಚ್ಚಲಾಗಿದೆ. ಇಲ್ಲಿ ಸ್ಥಾಪಿಸಿದರೆ, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಿವೃತ್ತ ಪ್ರಾಂಶುಪಾಲ ಎ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಡಾ.ಎಸ್.ಶಿವರಾಜಪ್ಪ, ಹಿರಿಯ ಸಾಹಿತಿ ಕೆ.ವೆಂಕಟರಾಜು, ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರುಕ್ಮಿಣಿ, ಸಮಾಜ ಸೇವಕ ಮದ್ದೂರು ಚಕ್ರವರ್ತಿ ಇತರರು ಉಪಸ್ಥಿತರಿದ್ದರು.