ಮೈಬಿಲ್ಡ್ ವಸ್ತು ಪ್ರದರ್ಶನಕ್ಕೆ ತೆರೆ

ಮೈಸೂರು, ಡಿ.16(ಎಂಕೆ)- ಮಹಾರಾಜ ಕಾಲೇಜು ಮೈದಾನದಲ್ಲಿ ಬಿಲ್ಡರ್ಸ್ ಅಸೋ ಸಿಯೇಷನ್ ಆಫ್ ಇಂಡಿಯಾ ಮೈಸೂರು ಕೇಂದ್ರ ಆಯೋಜಿಸಿದ್ದ `ಮೈಬಿಲ್ಡ್ 2019’ ಬೃಹತ್ ವಸ್ತು ಪ್ರದರ್ಶನಕ್ಕೆ ಸೋಮವಾರ ತೆರೆಬಿತ್ತು. ಈ ವೇಳೆ ವಸ್ತು ಪ್ರದರ್ಶನದಲ್ಲಿ ತೆರೆಯಲಾಗಿದ್ದ 150ಕ್ಕೂ ಹೆಚ್ಚು ಮಳಿಗೆ ಗಳ ಪೈಕಿ ಉತ್ತಮ ಮಳಿಗೆಗಳಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನ ನೀಡಲಾಯಿತು. ಪ್ಲಾಟಿನಂ ಸಿಂಗಲ್ ಸ್ಟಾಲ್ ವಿಭಾಗದಲ್ಲಿ ಈ3 ವುಡ್ ಪ್ರಥಮ, ಪಿಯೋನಿಕ್ಸ್ ಗ್ರೂಪ್ ದ್ವಿತೀಯ, ಟಾಟಾ ಪ್ರವೇಶ್ ತೃತೀಯ ಸ್ಥಾನ ಪಡೆದರೆ, ಪ್ಲಾಟಿನಂ ಮಲ್ಟಿ ಸ್ಟಾಲ್ ವಿಭಾಗ ದಲ್ಲಿ ಕ್ಯೂ ಕಾನ್ ಪ್ರಥಮ, ದ ಸುಪ್ರೀಂ ಇಡಸ್ಟ್ರೀಸ್ ದ್ವಿತೀಯ ಹಾಗೂ ಸೋಮೆನಿ ಸೆರಮಿಕ್ಸ್ ತೃತೀಯ ಬಹುಮಾನ ಪಡೆದು ಕೊಂಡಿತು. ಪ್ಲಾಟಿನಂ ಬೆಸ್ಟ್ ಡೆಬ್ಯೂಟ್ ಬಹು ಮಾನವನ್ನು ಫಾಲ್ಕನ್ ಪಂಪ್ಸ್ ಪಡೆದರೆ, ಡೈಮಂಡ್ ಸಿಂಗಲ್ ಸ್ಟಾಲ್ ವಿಭಾಗದಲ್ಲಿ ಗುಡ್ ವುಡ್ ಇಂಟೀರಿಯರ್ಸ್ ಪ್ರಥಮ, ಸೋಗ್ ಇಂಟೀರಿಯರ್ಸ್ ಅಂಡ್ ಲೈಫ್ ಸ್ಟೈಲ್ ದ್ವಿತೀಯ ಹಾಗೂ ಹೋಮ್ ಸಿನಿಮಾಸ್ ತೃತೀಯ ಸ್ಥಾನ ಪಡೆಯಿತು.

ಡೈಮಂಡ್ ಮಲ್ಟಿ ಸ್ಟಾಲ್ ವಿಭಾಗದಲ್ಲಿ ವೆಲ್ಸ್ಪುನ್ ಗ್ಲೋಬಲ್ ಬ್ರಾಂಡ್ಸ್ ಪ್ರಥಮ, ಥಾಟ್‍ವುಡ್ ದ್ವಿತೀಯ ಹಾಗೂ ಮೈಕ್ರೋ ಟೆಕ್ ಸಲೂಷನ್ ತೃತೀಯ ಸ್ಥಾನ ಗಳಿಸಿದರೆ, ಡೈಮಂಡ್ ಬೆಸ್ಟ್ ಡೆಬ್ಯೂಟ್ ಬಹುಮಾನವನ್ನು ಸುಮುಖ ಬಿಲ್ಡಿಂಗ್ ಸಲ್ಯೂಷನ್ ಹಾಗೂ ಇನ್ನೋವೇಟಿವ್ ಸ್ಟಾಲ್ ಬಹುಮಾನವನ್ನು ಐ ಬಿಲ್ಡ್ ಸಲೂಷನ್ ಪಡೆದುಕೊಂಡಿತು.

ಬಹುಮಾನ ವಿತರಿಸಿದ ಬಳಿಕ ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತ ನಾಡಿ, `ಮೈಬಿಲ್ಡ್ 2019’ ವಸ್ತು ಪ್ರದರ್ಶನ ಯಶಸ್ವಿಯಾಗಿದ್ದು, ಸಾಕಷ್ಟು ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಹಾಗೆಯೇ ಮೈಸೂರು ಮತ್ತೆ ಸ್ವಚ್ಛ ನಗರ ಪಟ್ಟ ಪಡೆಯಲು ಬಿಲ್ಡರ್ಸ್‍ಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಿಎಐನ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಶ್ರೀರಾಮ್ ಮಾತನಾಡಿ, ಮೈಬಿಲ್ಡ್ ವಸ್ತು ಪ್ರದರ್ಶನವನ್ನು ಉತ್ತಮವಾಗಿ ಆಯೋ ಜಿಸಲಾಗಿದೆ. ಕಳೆದ ವರ್ಷಕ್ಕಿಂತ ಸಾಕಷ್ಟು ಹೊಸ ಹೊಸ ಕಂಪನಿಗಳು ವಸ್ತು ಪ್ರದರ್ಶ ನದಲ್ಲಿ ಪಾಲ್ಗೊಂಡಿವೆ ಎಂದು ಹರ್ಷ ವ್ಯಕ್ತ ಪಡಿಸಿದರು. ಮೈಬಿಲ್ಡ್ 2019ರ ಅಧ್ಯಕ್ಷ ಎಸ್.ವಾಸುದೇವನ್, ಕಾರ್ಯದರ್ಶಿ ಕೆ. ಸತೀಶ್ ಮೋಹನ್, ಬಿಎಐ ಮೈಸೂರು ಘಟಕದ ಅಧ್ಯಕ್ಷ ಬಿ.ಎಸ್.ದಿನೇಶ್, ಕಾರ್ಯ ದರ್ಶಿ ಆರ್.ರಘನಾಥ್ ಉಪಸ್ಥಿತರಿದ್ದರು.