ಸಂತ್ರಸ್ತರಿಗೆ ಅವರ ಸ್ವಗ್ರಾಮದಲ್ಲೇ ಪುನರ್ವಸತಿ ಕಲ್ಪಿಸಲು ಸಿಎನ್‍ಸಿ ಆಗ್ರಹ

ಮಡಿಕೇರಿ:  ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕನ್ನು ಒಳಗೊಂಡ ವಾಯುವ್ಯ ಕೊಡಗಿನ 6 ನಾಡುಗಳ 35 ಗ್ರಾಮಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದಲ್ಲಿ ಸಂತ್ರಸ್ತರಾದವರಿಗೆ ಅದೇ ಪ್ರದೇಶಗಳಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ತನ್ನ 24ನೇ ವರ್ಷದ ಸಾರ್ವತ್ರಿಕ ಕೈಲ್‍ಪೊವ್ದ್ ಹಬ್ಬದ ಸಂದರ್ಭ ಹಕ್ಕೊತ್ತಾಯವನ್ನು ಮಂಡಿಸಿದೆ.

ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಸಂಘಟನೆಯ ಪ್ರಮುಖರು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಬಳಿಯ ಮಂದ್‍ನಲ್ಲಿ ಕೈಲ್ ಮುಹೂರ್ತ ಪ್ರಯುಕ್ತ ಕೃಷಿಯುಪಕರಣ, ಬಂದೂಕುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಅತಿವೃಷ್ಟಿಯಿಂದ ಉಂಟಾದ ಹಾನಿಯ ಹಿನ್ನೆಲೆಯಲ್ಲಿ ಶೋಕವನ್ನು ವ್ಯಕ್ತಪಡಿಸಿ ದ್ದಲ್ಲದೆ, ಈ ಸಂಬಂಧ ಕೆಲ ನಿರ್ಣಯಗಳನ್ನು ಕೈಗೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ಆ.12 ರಿಂದ 19 ರವರೆಗೆ ಕೊಡಗಿನ ವಾಯುವ್ಯ ಭಾಗದಲ್ಲಿ ನಡೆದ ಭೀಕರ ಭೂಕುಸಿತವನ್ನು ಅಂತಾರಾಷ್ಟ್ರೀಯ ವಿಪತ್ತು ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಬೇಕು. ಆ ಮೂಲಕ ನಿರಾಶ್ರಿ ತರಿಗೆ ಸಮರೋಪಾದಿಯಲ್ಲಿ ಶಾಸನಬದ್ಧ ಪುನರ್ವಸತಿ ಕಲ್ಪಿಸಲು ಸಿದ್ಧತೆ ಮತ್ತು ಬದ್ಧತೆ ತೋರಬೇಕು ಎಂದು ಒತ್ತಾಯಿಸಿದರು.

ಪ್ರಾಕೃತಿಕ ವಿಕೋಪಕ್ಕೆ ಕೊಡಗಿನ ಹೃದಯ ಭಾಗದಲ್ಲಿ ನಿರ್ಮಿಸಿರುವ ಹಾರಂಗಿ ಜಲಾಶಯವೇ ಕಾರಣ ಎಂದು ಪ್ರತಿಪಾದಿ ಸಿದ ನಾಚಪ್ಪ, ಪ್ರಸಕ್ತ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಆಯಾ ಪ್ರದೇಶಗಳಲ್ಲೇ ಪುನರ್ವಸತಿ ಕಲ್ಪಿಸುವ ಮುನ್ನ ಜಲಾ ಶಯವನ್ನು ಸಂಪೂರ್ಣವಾಗಿ ಕಿತ್ತೊಗೆ ಯಬೇಕು ಎಂದು ಒತ್ತಾಯಿಸಿದರು.   ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಾರ್ಯ ಪೂರ್ಣಗೊಳ್ಳುವವರೆಗೆ 10 ವರ್ಷಗಳ ಕಾಲ ಅವರ ಜೀವನ ನಿರ್ವ ಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನಾಥ ಪ್ರಜ್ಞೆ ಕಾಡದಂತೆ ಭರವಸೆ ಮೂಡಿಸುವ ಸಲುವಾಗಿ, ಸಂತ್ರಸ್ತರು ಬಾಡಿಗೆ ಮನೆ ಪಡೆದುಕೊಂಡು ವಾಸಿಸಲು ಆ ಮನೆ ಬಾಡಿಗೆ ಮತ್ತು ಜೀವನ ನಿರ್ವಹಣೆಗೆ ಆರ್ಥಿಕ ಸಹಾಯದ ವಿಶೇಷ ಪ್ಯಾಕೇಜ್‍ನ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭ ಸಂಘಟನೆಯ ಪ್ರಮುಖ ರಾದ ಕಲಿಯಂಡ ಪ್ರಕಾಶ್, ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತಾ, ಅರೆಯಡ ಸವಿತ, ನಂದಿನೆರವಂಡ ನಿಶಾ, ನಂದಿನೆರವಂಡ ಸುಮಿ, ಪುಲ್ಲೇರ ಸ್ವಾತಿ, ಅಪ್ಪಚ್ಚಿರ ರೀನಾ, ಅಪ್ಪಚ್ಚಿರ ರಮ್ಮಿ, ಮದ್ರಿರ ಕರುಂಬಯ್ಯ, ಕಾಂಡೇರ ಸುರೇಶ್, ಬಾಚರಣಿ ಯಂಡ ಚಿಪ್ಪಣ್ಣ, ಅರೆಯಡ ಗಿರೀಶ್, ಕಾಟು ಮಣಿಯಂಡ ಉಮೇಶ್, ಪುಲ್ಲೇರ ಕಾಳಪ್ಪ, ಚಂಬಂಡ ಜನತ್ ಮೊದಲಾದವರಿದ್ದರು.