ನೀತಿ ಸಂಹಿತೆ ಉಲ್ಲಂಘನೆ: ಅರಣ್ಯ ಸಚಿವರ ವಿರುದ್ಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹುಣಸೂರು: ಚುನಾ ವಣೆ ನೀತಿ ಸಂಹಿತೆ ಉಲ್ಲಂಘಿಸಿದ ಸಂಬಂಧ ಅರಣ್ಯ ಸಚಿವ ಶಂಕರ್ ಅವರ ವಿರುದ್ಧ ಕೆ.ಆರ್.ನಗರ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ  ಸಂಬಂಧಿಸಿದಂತೆ ನವೆಂ ಬರ್ 3ರ ತನಕ ನೀತಿ ಸಂಹಿತೆ ಜಾರಿ ಯಲಿದ್ದು, 18.10.2018ರ ಗುರುವಾರ ದಂದು ಸಂಜೆ 6.20ರಲ್ಲಿ ಮೈಸೂರು ಕಡೆಯಿಂದ ಕೆ.ಎ-03 ಜಿ.ಎ-2727 ನಂಬರಿನ ಸರ್ಕಾರಿ ವಾಹನದಲ್ಲಿ ಅರಣ್ಯ ಸಚಿವರ ಕಾರು ಕೆ.ಅರ್.ನಗರದ ಕಡೆಗೆ ಚಲಿಸುವಾಗ ದೊಡ್ಡೇಕೊಪ್ಪಲು ಗ್ರಾಮದ ಬಳಿ ಇರುವ ಚುನಾವಣಾ ಚೆಕ್ ಪೆÇೀಸ್ಟ್‍ಗೆ ಬಂದಾಗ ಸಂಜೆ 6.20ರ ಸಮಯದಲ್ಲಿ ಅಲ್ಲಿದ್ದ ಚುನಾವಣಾ ಅಧಿಕಾರಿ (ಸೆಕ್ಟರ್ ಮ್ಯಾಜಿಸ್ಟ್ರೇಟ್) ಪುಟ್ಟರಾಜು ಪರಿಶೀಲನೆಗೆ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರು.

ಆದರೆ ಕಾರು ನಿಲ್ಲಿಸದೆ ಹೋದ ಕಾರಣ ದಿಂದ ಸೆಕ್ಟರ್ ಮ್ಯಾಜಿಸ್ಟ್ರೇಟ್ ಪುಟ್ಟರಾಜು ಅವರು ಕೆ.ಅರ್.ನಗರ ಪೆÇಲೀಸ್ ಠಾಣೆ ಯಲ್ಲಿ ಸಚಿವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲಂಘನೆ ಅಡಿಯಲ್ಲಿ ಐಪಿಸಿ 1860 ಯು/ಎಸ್ 188ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಸೆಕ್ಟರ್ ಮ್ಯಾಜಿಸ್ಟ್ರೇಟ್ ಪುಟ್ಟ ರಾಜು ಕಚೇರಿಗೆ ಮಾಹಿತಿ ನೀಡಿದ್ದಾರೆ ಎಂದು ಉಪವಿಭಾಗದ ಸಹಾಯಕ ಅಯುಕ್ತ ಕೆ.ನಿತೀಶ್ ತಿಳಿಸಿದ್ದಾರೆ.