ಬೈಕ್‍ಗಳ ಮುಖಾಮುಖಿ ಡಿಕ್ಕಿ: ಹೂವಿನ ವ್ಯಾಪಾರಿ ಸಾವು

ಮೈಸೂರು: ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ರಸ್ತೆ ಅಪ ಘಾತದಲ್ಲಿ ಹೂವಿನ ವ್ಯಾಪಾರಿ ಸಾವನ್ನಪ್ಪಿದ್ದಾರೆ. ಶ್ರೀರಂಗಪಟ್ಟಣ ತಾಲೂಕು, ಪಾಲಹಳ್ಳಿ ಗ್ರಾಮದ ಸಿದ್ದಪ್ಪ ಅವರ ಮಗ ರಘು(22) ಸಾವನ್ನಪ್ಪಿದವರು. ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ರಘು, ವ್ಯಾಪಾರ ಮುಗಿಸಿ ಕೊಂಡು ಮೈಸೂರಿನಿಂದ ಪಾಲಹಳ್ಳಿಗೆ ಬಜಾಜ್ ಪಲ್ಸರ್‍ಬೈಕ್ (ಕೆಎ 11, ಇಕೆ 0769)ನಲ್ಲಿ ಹೋಗುತ್ತಿದ್ದಾಗ ಬೆಂಗಳೂರು-ಮೈಸೂರು ಹೆದ್ದಾರಿಯ ಚೆಕ್‍ಪೋಸ್ಟ್ ಬಳಿ ತಿರುವಿನಲ್ಲಿ ಎದುರಿ ನಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಮಂಗಳವಾರ ಮಧ್ಯರಾತ್ರಿ ಸುಮಾರು 12.10ಗಂಟೆ ವೇಳೆಗೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ ಗಾಯಗಳಾಗಿದ್ದ ರಘು ಅವರನ್ನು ಸಾರ್ವಜನಿಕರು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ವಿಷಯ ತಿಳಿದ ಎನ್‍ಆರ್ ಸಂಚಾರ ಠಾಣೆ ಪೊಲೀಸರು. ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯುವಾಗ ರಘು ಮಾರ್ಗ ಮಧ್ಯೆ ಅಸುನೀಗಿ ದರು. ಘಟನೆಯಲ್ಲಿ ಡಿಕ್ಕಿ ಹೊಡೆದ ಮತ್ತೊಂದು ದ್ವಿಚಕ್ರವಾಹನದ ಇಬ್ಬರು ಸವಾರರಿಗೂ ಗಾಯಗಳಾಗಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಎನ್‍ಆರ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸಂಚಾರ ಎಸಿಪಿ ಜಿ.ಎನ್.ಮೋಹನ್ ಅವರು ಬೆಳಿಗ್ಗೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದ ಬಳಿಗೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸು ದಾರರಿಗೆ ಒಪ್ಪಿಸಿದರು. ಇನ್ಸ್‍ಪೆಕ್ಟರ್ ಯೋಗೇಶ ಅವರು ಪ್ರಕರಣ ದಾಖಲಿಸಿಕೊಂಡು ಎರಡೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸಿದ್ದಪ್ಪ ಅವರ ಏಕಮಾತ್ರ ಪುತ್ರನಾಗಿದ್ದ ರಘು ಹೂವಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಎಂದು ಮಗನನ್ನು ಕಳೆದುಕೊಂಡ ಪೋಷಕರು ಅಳಲು ತೋಡಿಕೊಂಡಿದ್ದಾರೆ.