ಹುತಾತ್ಮ ವೀರ ಯೋಧರ ಸ್ಮರಣಾರ್ಥ ರಕ್ತದಾನ ಶಿಬಿರ

ಅರಸೀಕೆರೆ: ರಕ್ತದಾನ ಇನ್ನಿತರೇ ದಾನಗಳಿಗಿಂತ ಶ್ರೇಷ್ಠವಾದದ್ದು.ಇಂತಹ ಮಹಾನ್ ಕಾರ್ಯದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಕೊರತೆ ಇದ್ದು ರಕ್ತದಾನ ಮಾಡುವವರಿಗಿಂತ ರಕ್ತ ಪಡೆಯುವವರೇ ಹೆಚ್ಚಿದ್ದಾರೆ ಎಂದು ಫಿಸಿಯೋ ಥೆರಪಿ ತಜ್ಞ ಡಾ.ಮಧು ಹೇಳಿದರು.

ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮ ರಾದ ವೀರ ಯೋಧರ ಸ್ಮಾರಣಾರ್ಥ ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ರಕ್ತನಿಧಿ ಕೇಂದ್ರ,ಹೆಚ್.ಡಿ.ಎಫ್.ಸಿ ಬ್ಯಾಂಕ್, ಐ ವಿಲ್ ಹೆಲ್ಪ್ ಸಂಸ್ಥೆ ಮತ್ತು ದುರ್ಜಾ ಗಣ ಪತಿ ಗೆಳೆಯರ ಬಳಗ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಧುನಿಕತೆ ಯೊಂದಿಗೆ ತಂತ್ರಜ್ಞಾನಗಳು ಬೆಳೆದಂತೆ ಮನುಷ್ಯ ಸಂಕುಚಿತ ಭಾವನೆಯಿಂದ ಬದುಕುತ್ತಿದ್ದಾನೆ. ಅಪಘಾತಗಳು, ಶಸ್ತ್ರ ಚಿಕಿತ್ಸೆ ಮತ್ತು ಇನ್ನತರೇ ಗಂಭೀರ ಸಂದ ರ್ಭದಲ್ಲಿ ರಕ್ತವು ಅನಿವಾರ್ಯವಾಗಿರು ತ್ತದೆ.ಒಬ್ಬ ಆರೋಗ್ಯವಂತ ಮನುಷ್ಯ ಕನಿಷ್ಟ ನಾಲ್ಕರಿಂದ ಆರು ತಿಂಗಳಿಗೊಮ್ಮೆ ರಕ್ತ ವನ್ನು ನೀಡಬಹುದು. ತಪ್ಪು ತಿಳುವಳಿಕೆ ಯಿಂದ ಮನುಷ್ಯನು ರಕ್ತವನ್ನು ದಾನ ಮಾಡಲು ಹಿಂದೇಟು ಹಾಕುತ್ತಿದ್ದಾನೆ. ಯುವ ಜನತೆ ಎಚ್ಚೆತ್ತರೇ ಈ ಸ್ವಯಂ ಪ್ರೇರಿತ ರಕ್ತದಾನ ವನ್ನು ಒಂದು ಆಂದೋಲವನ್ನೇ ಮಾಡಿ ಸಾರ್ವಜನಿಕ ವಲಯಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಬಹುದು ಎಂದರು.

ಇಂದು ವಿವಿಧ ಸಂಘ ಸಂಸ್ಥೆಗಳು ಸಂಘ ಟಿತರಾಗಿ ಹುತಾತ್ಮ ಯೋಧರ ನೆನಪಿ ಗಾಗಿ ಯುವಕರನ್ನು ಒಗ್ಗೂಡಿಸಿ ಸ್ವಯಂ ಪ್ರೇರಿತ ರಕ್ತ ದಾನ ಮಾಡುತ್ತಿ ರುವುದು ಇತರೆ ಸಂಘ ಸಂಸ್ಥೆಗಳಿಗೆ ಮಾದರಿಯಾ ಗಿದೆ.ಮನುಷ್ಯನ ಜೀವನದಲ್ಲಿ ರಕ್ತವೆಂ ಬುದು ಪ್ರಮುಖವಾಗಿ ಹಾಸು ಹೊಕ್ಕಾಗಿ ರುವ ಅಂಶವಾಗಿದೆ.ಇದರ ಬಗ್ಗೆ ಹೆಚ್ಚು ಅರಿವು ಮೂಡಿಸಿಕೊಂಡು ಮತ್ತೊಬ್ಬರ ಜೀವವನ್ನು ಉಳಿಸಲು ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಖಾಯಿಲೆಯನ್ನು ನಿಯಂತ್ರಣ ಮಾಡಬಹುದು.ನೀವು ರಕ್ತದಾನ ಮಾಡಿ ಇತರರನ್ನು ರಕ್ತದಾನ ಮಾಡಲು ಪ್ರೇರೇಪಿಸಿ ಎಂದು ಕರೆ ನೀಡಿದರು.

ಸೈನಿಕ ಯೋಗೀಶ್ ಇವರು ಮಾತ ನಾಡಿ ಭಾರತದ ಸೈನಿಕರನ್ನು ಇಂದು ಸ್ಮರಣೆ ಮಾಡಿಕೊಂಡು ಸ್ಥಳೀಯ ಯುವ ಜನತೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡು ತ್ತಿರುವುದು ಸಂತೋಷವನ್ನು ನೀಡುತ್ತಿದೆ. ಯುವ ಜನತೆ ಹೆಚ್ಚು ಹೆಚ್ಚು ಸೈನ್ಯಕ್ಕೆ ಸೇರ ಬೇಕು.ಪ್ರತಿಯೊಬ್ಬ ಸೈನಿಕ ದೇಶದ ಗಡಿ ಕಾಯುತ್ತಿದ್ದರೆ, ದೇಶದೊಳಗಿನ ಜನತೆ ಸಮಾಜಮುಖಿ ಸತ್ಕಾರ್ಯಗಳನ್ನು ಮಾಡುತ್ತಾ ಪರ್ಯಾಯ ಸೈನಿಕರಂತೆ ಸೇವೆಯನ್ನು ಸಲ್ಲಿಸಬೇಕು. ಸುಭಾಷ್ ಚಂದ್ರ ಬೋಸರ ಸೇವೆ, ಭಾರತ ಮಾತೆಯ ಸುರಕ್ಷೆ ಮತ್ತು ವಿವೇಕಾನಂದರ ಸಂಸ್ಕಾರದಂತಹ ಈ ಮೂರು ಆದರ್ಶಗಳು ಎಲ್ಲರ ಧೈರ್ಯ ವಾಗಿರಬೇಕು, ಇಂದು ಹುತಾತ್ಮ ಸೈನಿಕರ ನೆನಪಿನಲ್ಲಿ ಮಾಡುತ್ತಿರುವ ಸ್ವಯಂ ಪ್ರೇರಿತ ರಕ್ತದಾನದಿಂದ ವೀರಮರಣ ಅಪ್ಪಿದ ನಮ್ಮ ಸೈನಿಕರ ಆತ್ಮಗಳು ಸಂತೃಪ್ತರಾಗುವುದರಲ್ಲಿ ಯಾವುದೇ ಸಂಶಯವಲ್ಲ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರಸಭೆ ಸದಸ್ಯ ವೆಂಕಟಮುನಿ ಮಾತ ನಾಡಿದರು.ಹೆಚ್.ಡಿ.ಎಫ್.ಸಿ ವ್ಯವಸ್ಥಾಪಕ ಶಿವಾಜಿ,ಪ್ರೇಮ ಮಲ್ಲಿ ಕಾರ್ಜುನ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಐ ವಿಲ್ ಹೆಲ್ಪ್ ಸಂಸ್ಥೆಯ ಮೂವತ್ತು ಸದಸ್ಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.