ಪೌರಕಾರ್ಮಿಕರ ನಿಯೋಜನೆ ಹಾಜರಾತಿ ಸಂಬಂಧ ಆಯುಕ್ತರ ಅಸಮಾಧಾನ

ಮೈಸೂರು: ಪೌರಕಾರ್ಮಿಕರ ನಿಯೋಜನೆ, ಹಾಜರಾತಿ ಸಂಬಂಧ ವಾರದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಬೇಸರ ಹೊರಹಾಕಿದ್ದಾರೆ.

ಜೂ.7ರಂದು ಕೌನ್ಸಿಲ್ ಸಭೆ ನಡೆಯ ಲಿರುವ ಹಿನ್ನೆಲೆಯಲ್ಲಿ ಪಾಲಿಕೆ ನವೀಕೃತ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ, ಸದ ಸ್ಯರ ದೂರಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ವಾರ್ಡ್‍ಗೆ ನಿಯೋಜಿಸುವ ಪೌರಕಾರ್ಮಿ ಕರ ಸಂಖ್ಯೆ ಹಾಗೂ ಅವರ ಹಾಜರಾತಿ ಯನ್ನು ಸಲ್ಲಿಸುವಂತೆ ಸೂಚಿಸಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದರು.

2017-18ನೇ ಸಾಲಿನ ಶೇ.24.10ರ ಅನುದಾನದಡಿ ವಾರ್ಡ್ ನಂ.4ರ ಬಿ.ಬಿ. ಗಾರ್ಡನ್ ಶಾಲೆಯ ಬಳಿ 10 ಲಕ್ಷ ಅನು ದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ವಾರ್ಡ್ ನಂ.51ರ ವ್ಯಾಪ್ತಿಯ ಶಂಕರಮಠದ 4ನೇ ಕ್ರಾಸ್‍ನಲ್ಲಿ ಚರಂಡಿ ನಿರ್ಮಾಣ, 2014-15ನೇ ಸಾಲಿನ ಶೇ. 7.25 ಅನುದಾನದಡಿ ಅರ್ಹ ಫಲಾನುಭವಿ ಗಳಿಗೆ ಸೌಲಭ್ಯ ವಿತರಣೆ, 2016-17 ನೇ ಸಾಲಿನ 332.30 ಲಕ್ಷ ರೂ., 2017-18ನೇ ಸಾಲಿನ 215.58 ಲಕ್ಷ ರೂ., 2018-19ನೇ ಸಾಲಿನ 1,83 ಲಕ್ಷ ರೂ.ಗಳ ಅನು ದಾನ ವಿತರಣೆ ಮಾಡಲು ಹಾಗೂ ನಗರ ಪಾಲಿಕೆ `ಡಿ’ ಗ್ರೂಪ್ ನೌಕರ ಎನ್.ರವೀಂದ್ರ ಖಾಸಗಿ ಆಸ್ಪತ್ರೆಯಲ್ಲಿ ಪಡೆದ ಒಟ್ಟು ಚಿಕಿತ್ಸಾ ವೆಚ್ಚ 9,25.230 ರೂ.ಗಳಲ್ಲಿ, 4,46,503 ರೂ. ಬಿಡುಗಡೆಗೆ ಶಿಫಾರಸ್ಸು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಟ್ರಿಣ್ ಟ್ರಿಣ್ ಯೋಜನೆಗೆ ನಗರದ 48 ಕಡೆ ಡಾಕಿಂಗ್ ಸ್ಟೇಷನ್‍ಗಳನ್ನು ರೂ. 20.52 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡ ಲಾಗಿದೆ. ಈ ಸ್ಟೇಷನ್‍ಗಳಲ್ಲಿ ಪ್ರವಾಸೋ ದ್ಯಮ ಇಲಾಖೆ ಮೂಲಕ ಜಾಹೀರಾತು ಪಡೆದು ಈ ಹಣವನ್ನು ಈ ಯೋಜನೆಗೆ ಬಳಸುವ ಬಗ್ಗೆ ಕೌನ್ಸಿಲ್‍ನಲ್ಲಿ ಚರ್ಚಿಸಲು, ವಾರ್ಡ್ ನಂ.2ರ ವ್ಯಾಪ್ತಿಯ ಮಂಚೇ ಗೌಡನ ಕೊಪ್ಪಲು ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳಲ್ಲಿ ಹಾಳಾಗಿರುವ ಒಳಚರಂಡಿ ಕೊಳವೆ ಮಾರ್ಗದಲ್ಲಿ 10 ಲಕ್ಷ ರೂ.ಗಳಲ್ಲಿ ದುರಸ್ತಿ, ಸಾಹುಕಾರ ಚೆನ್ನಯ್ಯ ರಸ್ತೆಯ ವಿಭಜಕಗಳಲ್ಲಿ ಅಲಂಕಾರಿಕ ಕಂಬಗಳನ್ನು ಅಳವಡಿಸುವ ಬದಲಿ ಕಾಮಗಾರಿಯಾಗಿ ವಾರ್ಡ್ ನಂ.47ರ ವಿವಿಧ ಉದ್ಯಾನವನ ದಲ್ಲಿ ರೇಡಿಯೋ ಪೋಲ್ಸ್‍ಗಳನ್ನು ಅಳವಡಿ ಸುವ ಕೌನ್ಸಿಲ್ ಒಪ್ಪಿಗೆಗೆ ಶಿಫಾರಸ್ಸು ಮಾಡ ಲಾಯಿತು. ಉಪಮೇಯರ್ ಷಫೀ ಅಹ ಮದ್, ಮಾಜಿ ಮೇಯರ್‍ಗಳಾದ ಅಯೂಬ್ ಖಾನ್, ಆರಿಫ್ ಹುಸೇನ್, ಬಿ.ವಿ.ಮಂಜು ನಾಥ್, ಪ್ರೇಮಾ ಶಂಕರೇಗೌಡ, ಶಾಂತ ಕುಮಾರಿ ಮತ್ತಿತರರು ಸಭೆಯಲ್ಲಿದ್ದರು.