ಆಯಿಷ್ ಆವಾಜ್ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಜೆಎಸ್‍ಎಸ್ ಐಎಸ್‍ಎಚ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೈಸೂರು: ಕಳೆದ 9 ವರ್ಷಗಳ ಹಿಂದೆ ನಡೆದಿದ್ದ ಮೈಸೂ ರಿನ ಪಡುವಾರಹಳ್ಳಿ ಕರಿಯಪ್ಪ ಹತ್ಯೆ ಪ್ರಕರಣದ 6 ಮಂದಿ ಹಂತಕರಿಗೆ ಮೈಸೂರು ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ, ಇಂದು ತೀರ್ಪು ನೀಡಿದೆ. ಪಡುವಾರಹಳ್ಳಿ ನಿವಾಸಿ ಗಳಾದ ಅಶೋಕ, ಹೇಮಂತ್, ಮಂಜೇಶ್, ಪ್ರವೀಣ್, ರಮೇಶ ಹಾಗೂ ಸೂರಜ್ ಜೀವಾವಧಿ ಶಿಕ್ಷೆಗೊಳಗಾದವರಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಾರ್ಚ್ 14ರಂದು ಕೊಲೆ ಆಪಾದಿತರೆಂದು ತೀರ್ಮಾನಿಸಿತ್ತು.

ಇಂದು ಬೆಳಿಗ್ಗೆ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ 6 ಮಂದಿ ಹಂತಕರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಲಾಯಿತು. ಪ್ರಕರಣದಲ್ಲಿ ಒಟ್ಟು 11 ಮಂದಿ ಆರೋಪಿ ಗಳಿದ್ದು, ಆ ಪೈಕಿ ದೇವು ಮತ್ತು ವಿಜಯ್ ಸಾವನ್ನಪ್ಪಿದ್ದಾರೆ. ಉಳಿದಂತೆ ಚಂದ್ರು, ಸ್ವಾಮಿ ಹಾಗೂ ಸುನೀಲ್‍ರನ್ನು ನಿರಪರಾಧಿಗಳೆಂದು ತೀರ್ಮಾನಿಸಿ ಮಾರ್ಚ್ 14ರಂದು ಬಿಡುಗಡೆ ಮಾಡಲಾಗಿತ್ತು. 2010ರ ಅಕ್ಟೋಬರ್ 3ರಂದು ಮೈಸೂರಿನ ಸರಸ್ವತಿಪುರಂ ಠಾಣೆ ವ್ಯಾಪ್ತಿಯ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಪಡು ವಾರಹಳ್ಳಿಯ ಕರಿಯಪ್ಪನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.