ಜೆಎನ್‍ಯು ವಿದ್ಯಾರ್ಥಿಗಳು, ಅಧ್ಯಾಪಕರ ಮೇಲೆ ದಾಳಿ ಖಂಡಿಸಿ ಮೈಸೂರಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

ಮೈಸೂರು,ಜ.6(ಎಂಟಿವೈ, ಎಸ್‍ಪಿಎನ್)-ದೆಹಲಿ ಜೆಎನ್‍ಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲಿನ ಹ¯್ಲÉ ಖಂಡಿಸಿ ನಗರದ ವಿವಿಧ ಸಂಘಟನೆಗಳು ಪ್ರತ್ಯೇಕ ಸ್ಥಳಗಳಲ್ಲಿ ಸೋಮ ವಾರ ಪ್ರತಿಭಟನೆ ನಡೆಸಿದ್ದಾರೆ.

ಎಐಡಿಎಸ್‍ಓ ಪ್ರತಿಭಟನೆ: ಜೆಎನ್‍ಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲಿನ ಹಲ್ಲೆ ಖಂಡಿಸಿ ಎಐಡಿಎಸ್‍ಒ ಕಾರ್ಯಕರ್ತರು ಮೈಸೂ ರಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ವಿರುದ್ಧ ವಿವಿಧ ಘೋಷಣೆ ಕೂಗಿದ ರಲ್ಲದೆ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಜೆಎನ್‍ಯುಗೆ ಹೊರಗಡೆಯಿಂದ ಬಂದ ಕೆಲ ಕಿಡಿಗೇಡಿಗಳು, ಎಬಿವಿಪಿ ಕಾರ್ಯಕರ್ತರು ಕಬ್ಬಿಣದ ರಾಡ್, ಲಾಠಿಗಳಿಂದ ವಿದ್ಯಾರ್ಥಿಗಳ ಮೇಲೆ ಮನ ಬಂದಂತೆ ಹ¯್ಲÉ ಮಾಡಿz್ದÁರೆ. ವಿವಿ ಆವರಣದ ಲ್ಲಿರುವ ಹಾಸ್ಟೆಲï ಮತ್ತು ವಿದ್ಯಾರ್ಥಿಗಳು ಗುಂಪು ಗೂಡುವ ಸ್ಥಳದಲ್ಲಿ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಅದರಲ್ಲೂ ವಿವಿ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿ ಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿ ಸಿಕೊಂಡು ಮನಬಂದಂತೆ ದಾಳಿ ಮಾಡಿz್ದÁರೆ ಎಂದು ಆರೋಪಿಸಿದರು.

ಈ ಘಟನೆಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗಂಭೀರವಾಗಿ ಗಾಯಗೊಂಡಿದ್ದು, ವಿವಿ ಆಸ್ತಿಯನ್ನೂ ಕಿಡಿಗೇಡಿಗಳು ಹಾಳು ಮಾಡಿ ದ್ದಾರೆ. ಈ ಘಟನೆ ವಿಚಾರದಲ್ಲಿ ದೆಹಲಿ ಪೆÇಲೀಸರು ಮೂಕಪ್ರೇಕ್ಷಕರಾಗುವ ಮೂಲಕ ಈ ದುಷ್ಕøತ್ಯಕ್ಕೆ ಪರೋಕ್ಷ ಬೆಂಬಲ ನೀಡಿರುವುದು ಖಂಡನೀಯ ಎಂದು ಆರೋಪಿಸಿದರು.

ಈ ಘಟನೆಯನ್ನು ವಿರೋಧಿಸಿ ಜ.6 ದಿನವನ್ನು ಅಖಿಲ ಭಾರತ ಪ್ರತಿಭಟನಾ ದಿನವನ್ನಾಗಿ ಘೋಷಿ ಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಹೆಚ್ಚಾಗಿ ರುವ ವಿವಿಯ ಶುಲ್ಕವನ್ನು ಕೂಡಲೇ ವಾಪಸ್ ಪಡೆಯ ಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಮುಖಂಡ ರಾದ ಆಸೀಯಾ ಬೇಗಂ, ಚಂದ್ರಕಲಾ, ನಿತಿನ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೈಸೂರು ವಿವಿ ಸಂಶೋಧಕರ ಸಂಘ ಪ್ರತಿಭಟನೆ: ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘವು ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಬಳಿ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.

ಈ ವೇಳೆ ಕೇಂದ್ರ ಸರ್ಕಾರ ಮತ್ತು ಎಬಿವಿಪಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ದೇಶದ ವಿವಿಧ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಬಿ.ಎಲ್.ರಘು, ಅಸ್ಗರ್ ಅಲಿ, ಮನೋಜ್‍ಕುಮಾರ್, ಮಹೇಶ್ ಸೊಸ್ಲೆ, ಗೋವಿಂದ ರಾಜು ಇನ್ನಿತರರಿದ್ದರು.

ಪ್ರಗತಿಪರರ ಪ್ರತಿಭಟನೆ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರಗತಿಪರಚಿಂತಕರು ಪುರಭವನ ಆವರಣದ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ದರು. ಮುಖಂಡರಾದ ಲ.ಜಗ್ನನಾಥ್, ಪೆÇ್ರ.ಶಬ್ಬೀರ್ ಅಹಮದ್, ಚೋರನಹಳ್ಳಿ ಶಿವಣ್ಣ, ಶಾಂತರಾಜು, ರತಿರಾವ್ ಇನ್ನಿತರರು ಪ್ರತಿಭಟನೆಯಲ್ಲಿದ್ದರು.