ಮುಡಾ ಅಧಿಕಾರಿಗಳಿಂದ ಭೋವಿ ಜನಾಂಗದ ಮನೆ, ಶೆಡ್‍ಗಳ ತೆರವು ಕಾರ್ಯಕ್ಕೆ ಖಂಡನೆ

ಮೈಸೂರು: ಮೈಸೂರಿನ ಹೊರ ವಲಯದ ಹಿನಕಲ್ ಗ್ರಾಮದ ಹುಂಡಿ ಬೀದಿಯಲ್ಲಿ ವಾಸವಾಗಿರುವ ಭೋವಿ ಜನಾಂಗದವರ ಜಾಗವನ್ನು ಮುಡಾ ಅಧಿಕಾರಿಗಳು ತೆರವುಗೊಳಿಸುವ ಮೂಲಕ ಹಿಂದುಳಿದ ಭೋವಿ ಜನಾಂಗದವರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಶಿವಯೋಗಿ ಸಿದ್ದ ರಾಮೇಶ್ವರ ಭೋವಿ ಸಂಘದ ಪದಾಧಿಕಾರಿ ಜಿ. ನಾಗರಾಜು ಆರೋಪಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ 5 ಕುಂಟೆ ಜಮೀನು ಉಳುವವನೇ ಭೂಮಿ ಒಡೆಯ ಕಾನೂನಿನಡಿ ಕೆಲ ಭೋವಿ ಕುಟುಂಬ ಗಳಿಗೆ ಸೇರಿದ್ದಾಗಿದೆ. ವಾಸ್ತವವಾಗಿ ಇದು ಮುಡಾ ವ್ಯಾಪ್ತಿಗೆ ಬರದೆ, ಗ್ರಾಮ ಠಾಣಾ ಆಗಿದೆ. ಪಕ್ಕದ ಬೇರೆ ಸರ್ವೆ ನಂಬರ್‍ನಲ್ಲಿ ಪ್ರಭಾವಿ ರಾಜಕೀಯ ಮುಖಂಡರ ಜಮೀನು ಸಹ ಮುಡಾ ವ್ಯಾಪ್ತಿಗೆ ಬರುತ್ತದೆ. ಅವರಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಪೊಲೀ ಸರ ನೆರವಿನಲ್ಲಿ ಭೋವಿಗಳ ಮನೆ, ಶೆಡ್‍ಗಳನ್ನು ಕೆಡವಿ ಭೋವಿ ಜನಾಂಗದ ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾರೆ ಎಂದು ದೂರಿದರು.

ಈ ಹಿಂದೆಯೂ ಮುಡಾ ಅಧಿಕಾರಿಗಳು ಇದೇ ರೀತಿ ತೆರವಿಗೆ ಮುಂದಾದಾಗ ವಿರೊಧ ವ್ಯಕ್ತವಾಗಿ ದ್ದಲ್ಲದೆ, ನ್ಯಾಯಾಲಯದ ಮೆಟ್ಟಿಲು ಹತ್ತಿ, ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದ್ದಾಗಲೇ ಮುಡಾ ಈ ಕುಕೃತ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.

ಮುಡಾ ಆಯುಕ್ತರು ಕೂಡಲೇ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡ ದಿದ್ದರೆ ಭೋವಿ ಸಂಘ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಪದಾಧಿಕಾರಿ ಗಳಾದ ಬಸವರಾಜು, ದೇವರಾಜು, ಗುರುಸ್ವಾಮಿ, ರಾಜು, ಚಿನ್ನಸ್ವಾಮಿ, ಕರಿಯಪ್ಪ ಇನ್ನಿತರರು ಉಪಸ್ಥಿತರಿದ್ದರು.