ರಾಮನಾಥಪುರದಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ

ರಾಮನಾಥಪುರ: ಅಲ್ಲಮ ಪ್ರಭು ಅವರ ಜ್ಞಾನ, ಬಸವಣ್ಣನವರ ಕಾಯಕ ತತ್ವ, ಸಿದ್ಧರಾಮರ ಸಾಮಾಜಿಕ ಕಳಕಳಿ ಹೊಂದಿದ್ದ ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರು ಯುಗಪುರುಷ ಎಂದು ರಾಮೇಶ್ವರಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕ ಶ್ರೀನಿ ವಾಸ್ ಅಭಿಪ್ರಾಯಪಟ್ಟರು.

ರಾಮನಾಥಪುರದ ರಾಮೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಸಿದ್ಧಗಂಗಾ ಶ್ರೀ ಗಳವರ ಭಾವಚಿತ್ರಕ್ಕೆ ವಿವಿಧ ಸಮಾಜದ ಮುಖಂಡರು ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಅವರು, ಸಿದ್ಧ ಗಂಗಾ ಶ್ರೀಗಳು ಧರ್ಮಾತೀತವಾಗಿ ಹತ್ತಾರು ಸಾವಿರ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡಿ, ಲಕ್ಷಾಂತರ ವಿದ್ಯಾರ್ಥಿಗಳ ಜೀವ ನೋಪಾಯಕ್ಕೆ ಆಶ್ರಯ ನೀಡಿ ಎಲ್ಲಾ ರೀತಿಯ ಶೈಕ್ಷಣಿಕ, ಅಧ್ಯಾತ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ವಾದುದು ಎಂದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾ ಜದ ಮುಖಂಡರಾದ ಶ್ರೀಧರ್, ಸುಬ್ರ ಹ್ಮಣ್ಯ, ಬೆಟ್ಟದಪುರ ಅರುಣ್‍ಕುಮಾರ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ನಿರ್ದೇ ಶಕರಾದ ಅನಂತ್‍ಸ್ವಾಮಿ, ಸಿದ್ದರಾಜು, ಸದಸ್ಯರಾದ ಕೆ.ಎಸ್.ಮಂಜು, ಬಾಬು, ವಾಟರ್‍ಮನ್ ಮಂಜು ಮುಂತಾದವರು ಪುಷ್ಪಾರ್ಚನೆ ಮಾಡಿದರು.