ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತಕುಮಾರ್ ಅವರಿಗೆ ಅಭಿನಂದನೆ

ಮೈಸೂರು: ಪ್ರತಿ ಯೊಬ್ಬರೂ ಎತ್ತರದ ಕನಸು ಕಂಡು, ಅದನ್ನು ನನಸಾಗಿಸುವ ಆತ್ಮವಿಶ್ವಾಸ ರೂಡಿಸಿಕೊಳ್ಳುವತ್ತ ಗಮನ ಕೇಂದ್ರೀ ಕರಿಸಬೇಕೆಂದು ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಮಹಾ ಸ್ವಾಮೀಜಿ ಸಲಹೆ ನೀಡಿದರು.

ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಬೆಳಿಗ್ಗೆ ನಡೆದ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಪೆÇ್ರ.ಜಿ.ಹೇಮಂತ ಕುಮಾರ್ ಅವರ ಅಭಿ ನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರೂ ಕನಸು ಕಾಣುವುದು ಹಾಗೂ ಕಂಡ ಕನಸ್ಸನ್ನು ನನಸಾಗಿಸುವ ಕೆಲಸವನ್ನು ಕಡ್ಡಾಯವಾಗಿ ಮಾಡಿದಾಗ ಮಾತ್ರ ತಾವೂ ಏಳಿಗೆ ಸಾಧಿ ಸುವುದರೊಂದಿಗೆ ಸಮಾಜದ ಸುಧಾರಣೆ ಕಾಣಬಹುದು. ಯಾವುದೇ ಕೆಲಸದಲ್ಲಿ ಸಾಧನೆ ಮಾಡುವ ಮೂಲಕ ಪ್ರತಿ ಯೊಬ್ಬರು ಜೀವನದಲ್ಲಿ ಯಶಸ್ಸು ಸಾಧಿಸ ಬೇಕು. ಆತ್ಮ ವಿಶ್ವಾಸದೊಂದಿಗೆ ನಿರಂತರ ಪರಿಶ್ರಮ ಅಗತ್ಯವಾಗಿದ್ದು, ದೈಹಿಕ ಪರಿ ಶ್ರಮದೊಂದಿಗೆ ಬೌದ್ದಿಕ, ಆಧ್ಯಾತ್ಮಿಕ ಪರಿಶ್ರಮವೂ ಮಹತ್ವದ ಪಾತ್ರವಹಿಸುತ್ತದೆ. ಜೀವನದಲ್ಲಿ ಅಸಾಧ್ಯವಾದುದು ಎನ್ನು ವುದು ಯಾವುದೂ ಇಲ್ಲ. ಸಾಧನೆಯ ಹಾದಿಯಲ್ಲಿ ಬೀಳುವುದಕ್ಕಿಂತ ಮೇಲೆ ಏಳುತ್ತೇವೆ ಎಂಬ ಛಲ ದೊಡ್ಡದು ಎಂದು ಹೇಳಿದರು.

ಮೈಸೂರು ವಿವಿಯ ವಿದ್ಯಾರ್ಥಿಯಾಗಿದ್ದ ಹೇಮಂತ ಕುಮಾರ್ ಅವರು ಈಗ ವಿವಿಯ ಉನ್ನತ ಹುದ್ದೆಯಾದ ಕುಲಪತಿಯ ಹುದ್ದೆ ಅಲಂಕರಿಸುವವರೆಗೂ ಬೆಳೆದು ಬಂದಿದ್ದಾರೆ. ಇಷ್ಟು ದೊಡ್ಡ ಸಾಧನೆ ಮಾಡುವುದಕ್ಕೆ ಅವರ ಸರಳ ಸಜ್ಜನಿಕೆಯೇ ಕಾರಣ. ಅವರು ತಮ್ಮ ಕಾರ್ಯಾವಧಿ ಯಲ್ಲಿ ಮೈಸೂರು ವಿವಿಯ ಕೀರ್ತಿಯನ್ನು ಎಲ್ಲೆಡೆ ಪರಿಸುವಂತೆ ಮಾಡಲಿ. ಇನ್ನಷ್ಟು ಸಾಧನೆ ಮಾಡುವತ್ತ ಗಮನ ಹರಿಸಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶೈಕ್ಷಣ ಕ ಮತ್ತು ಆಡಳಿತ ಕ್ಷೇತ್ರದಲ್ಲಿ ನಿಪುಣರಾಗಿರುವ ಹೇಮಂತ ಕುಮಾರ್ ಅವರು ದಿನದ 24 ಗಂಟೆಯೂ ವಿಶ್ವ ವಿದ್ಯಾನಿಲಯದ ಬಗ್ಗೆ ಯೋಚಿಸುವ ಮೂಲಕ ಪೂರ್ಣಾವಧಿ ಕುಲಪತಿಯಾಗಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಹೊಸತನ ಹಾಗೂ ಸಾಧನೆ ಮಾಡಬೇಕೆಂಬ ಹಂಬಲ ಅವರಲ್ಲಿದೆ ಎಂದು ಶ್ಲಾಘಿಸಿದರು.
ಸಮಾರೋಪ ಭಾಷಣ ಮಾಡಿದ ತಮಿಳುನಾಡಿನ ಎಸ್‍ಆರ್‍ಎಂ ಇನ್ಸ್‍ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ ಎಮಿರೇಟ್ಸ್ ಸಂಸ್ಥೆಯ ಡಾ. ಆರ್. ಶ್ರೀನಿವಾಸನ್ ಮಾತನಾಡಿ, ಬೋಧನೆ, ಆಡಳಿತ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಪಾರಂಗತ ರಾಗಿರುವ ಹೇಮಂತ ಕುಮಾರ್ ಅವರು ಮೈಸೂರು ವಿಶ್ವ ವಿದ್ಯಾನಿಲಯದ ಸ್ಟಾರ್ ಆಗಿದ್ದಾರೆ ಎಂದರು.

ಅಭಿನಂದನೆ ಸ್ವೀಕರಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಮಾತನಾಡಿ, ಮೈಸೂರು ವಿವಿಯ ಕುಲಪತಿಯಾಗಿ ಅಧಿಕಾರ ವಹಿಸಿ ಕೊಂಡು ಆರು ತಿಂಗಳಾಗಿದೆ. ಈ ಅವಧಿ ಯಲ್ಲಿ ನಾನು ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಶೇ.40ರಷ್ಟು ಸಾಧನೆ ಮಾಡಿದ್ದೇನೆ. ಇನ್ನೂ ಮಾಡ ಬೇಕೆಂದಿ ರುವ ಸಾಧನೆ ಬೆಟ್ಟದಷ್ಟಿದೆ. ಅವುಗಳೆಲ್ಲ ವನ್ನೂ ನನ್ನ ಅಧಿಕಾರಾವಧಿಯೊಳಗೆ ಪೂರ್ಣಗೊಳಿಸುವ ಬಯಕೆ ನನ್ನದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿಯ ಕೆಎಲ್‍ಇ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರಾಂಶುಪಾಲ ಪೆÇ್ರ.ಬಸವರಾಜ್ ಎಸ್.ಅನಾಮಿ ವಹಿಸಿದ್ದರು. ಅಭಿನಂದನಾ ಸಮಿತಿಯ ಉಪಾಧ್ಯಕ್ಷರಾದ ಪೆÇ್ರ.ಸುರೇಶ, ಪೆÇ್ರ.ಎಂ. ರವಿಶಂಕರ್, ಕಾರ್ಯದರ್ಶಿ ಪೆÇ್ರ.ಟಿ.ವಾಸು ದೇವ, ಸಂಘಟನಾ ಕಾರ್ಯದರ್ಶಿಗಳಾದ ಪೆÇ.ಡಿ.ಎಸ್.ಗುರು, ಪೆÇ್ರ.ಎಸ್.ಮುರಳಿ ಇನ್ನಿತರರು ಉಪಸ್ಥಿತರಿದ್ದರು.