`ಪದ್ಮಶ್ರೀ’ ಪುರಸ್ಕøತ ದಂಪತಿಗೆ `ಪರಂಪರೆ’ ಅಭಿನಂದನೆ

ಮೈಸೂರು,ಫೆ.3(ಎಸ್‍ಪಿಎನ್)- ಎಲೆಮರೆ ಕಾಯಿಯಂತೆ ಸಂಸ್ಕøತ ಭಾಷೆಯ `ಸುಧರ್ಮ’ ಪತ್ರಿಕೆಯನ್ನು ದಶಕಗಳ ಕಾಲದಿಂದ ಪ್ರಕಟಿಸುತ್ತಿದ್ದ ಸಂಪಾದಕ ಕೆ.ವಿ. ಸಂಪತ್‍ಕುಮಾರ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ `ಪದ್ಮಶ್ರೀ’ ಪ್ರಶಸ್ತಿ ಬಂದಿರುವುದು ಉತ್ತಮ ಬೆಳವಣಿಗೆ ಎಂದು ರಾಮಕೃಷ್ಣ ವಿದ್ಯಾಶಾಲೆಯ ಸಂಚಾಲಕ ಶ್ರೀ ಯುಕ್ತೇಶಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮೈಸೂರು ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾನೂನು ಕಾಲೇಜು ಸಭಾಂಗಣದಲ್ಲಿ `ಪರಂಪರೆ’ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಪದ್ಮಶ್ರೀ’ ಪುರಸ್ಕøತ ದಂಪತಿಗೆ ಅಭಿನಂದನೆ ಸಲ್ಲಿಸಿ ಸ್ವಾಮೀಜಿ ಮಾತನಾಡಿದರು.

ಸಂಸ್ಕøತ ಎಲ್ಲಾ ಭಾಷೆಗಳ ತಾಯಿ. ಈ ಭಾಷೆಯಿಂದ ಹೊಸ ಆಲೋಚನೆಗಳು ಹುಟ್ಟುತ್ತವೆ. ಅಲ್ಲದೆ, ವಿಜ್ಞಾನದ ಆಲೋಚನಾ ಶಕ್ತಿ ವಿಸ್ತ್ತಾರಗೊಳ್ಳುತ್ತದೆ. ಅದರಲ್ಲಿ ಬಹುದೊಡ್ಡ ಸಂಪನ್ಮೂಲ ಅಡಗಿದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕು ಎಂದರು.

ಸಂಸ್ಕøತ ಮತ್ತು ಸಂಸ್ಕøತಿ ಒಟ್ಟಾಗಿದ್ದರೆ, ಭಾರತೀಯರ ಘನತೆ ಹೆಚ್ಚುತ್ತದೆ ಎಂದು ವಿವೇಕಾನಂದರು ಪ್ರತಿಪಾದಿಸಿದ್ದರು. ಆದಿಕಾಲದಿಂದಲೂ ನಮ್ಮ ಋಷಿ ಮುನಿಗಳು ಸಂಸ್ಕøತ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು ಎಂದು ವಿವೇಕಾನಂದರು ಇಂಗ್ಲೆಡ್ ಪ್ರವಾಸ ವೇಳೆ ಅಭಿಪ್ರಾಯಪಟ್ಟ ಪ್ರಸಂಗವನ್ನು ವಿವರಿಸಿದರು.

ಆದರೆ, ಇತ್ತೀಚಿನ ದಿನಗಳಲ್ಲಿ ಸಂಸ್ಕøತ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎನ್ನುವ ಕಾಲಘಟ್ಟದಲ್ಲೂ ಸಂಸ್ಕøತದಲ್ಲಿ ಪತ್ರಿಕೆ ಪ್ರಕಟಿಸುತ್ತಿರುವುದು ದೊಡ್ಡ ಸಾಧನೆ. ಸಂಸ್ಕøತ ಉಳಿಸಲು ಕೆ.ವಿ.ಸಂಪತ್‍ಕುಮಾರ್ ದಂಪತಿ ಕಾಯಕ ಅಮೂಲ್ಯ. ಅವರ ಕಾಯಕವನ್ನು ಗುರುತಿಸಿರುವ ಕೇಂದ್ರ ಸರ್ಕಾರದ ಕಾರ್ಯ ಪ್ರಶಂಸಾರ್ಹ ಎಂದರು. ಡಾ.ಹೆಚ್.ವಿ.ನಾಗರಾಜರಾವ್, ಸಂಸ್ಕøತ ಪ್ರಾಧ್ಯಾಪಕರಾದ ಪ್ರೊ.ಎಂ.ಎ.ಲಕ್ಷ್ಮೀ ತಾತಾಚಾರ್, ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಂ.ಪಾರ್ಥಸಾರಥಿ ಉಪಸ್ಥಿತರಿದ್ದರು.