ರಾಮನಾಥಪುರ ತಾಪಂ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಜೆ.ಸಿ.ಮಂಜೇಗೌಡ ಜಯಭೇರಿ.

ರಾಮನಾಥಪುರ: ಇಂದು ನಡೆದ ರಾಮನಾಥಪುರ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗಂಗೂರು ಗ್ರಾಮದ ಜಿ.ಸಿ. ಮಂಜೇ ಗೌಡ ಅವರು ಸಮೀಪದ ಪ್ರತಿಸ್ವರ್ಧಿ ಬಿ.ಪಿ. ಶಿವೇಗೌಡ ಅವರಿಗಿಂದ 286 ಮತ ಗಳ ಅಂತರದಿಂದ ಗೆದ್ದು ಜಯಶೀಲರಾದರು.

ತಾಲೂಕು ಪಂಚಾಯಿತಿಗೆ ಆಯ್ಕೆ ಯಾಗಿದ್ದ ಈ ಹಿಂದೆ ಗಂಗೂರು ಗ್ರಾಮದ ಶಿವೇಗೌಡ ಅವರು ಇತ್ತೀಚಗೆ ನಿಧನರಾದ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಜೆಡಿಎಸ್‍ನಿಂದ ಜಿ.ಪಿ. ಶಿವೇಗೌಡ, ಕಾಂಗ್ರೆಸ್‍ನಿಂದ ಜಿ.ಸಿ. ಮಂಜೇಗೌಡ, ಬಿಜೆಪಿಯಿಂದ ನಾಗಣ್ಣ ಸ್ಪರ್ಧಿಸಿದ್ದರು. ಅ.28 ರಂದು ಮತದಾನ ನಡೆದು ಇಂದು ಬೆಳಿಗ್ಗೆ ತಾಲೂಕು ಕಚೇರಿ ಯಲ್ಲಿ ಮತ ಎಣಿಕೆ ನಡೆದು ಪಲಿತಾಂಶ ಪ್ರಕಟವಾಯಿತು.

ಭಾರಿ ಹಣಾಹಣಿ ನಡೆದಿತ್ತು.;- ರಾಮ ನಾಥಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಅ. 28 ರಂದು ಉಪಚುನಾವಣೆ ನಡೆದಿತ್ತು. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಇಲ್ಲಿ ಗಂಗೂರಿನವರೇ ಹೆಚ್ಚಾಗಿ ಅಯ್ಕೆಯಾಗಿದ್ದರು.. ಈ ಬಾರಿಯೂ ಗಂಗೂರು ಗ್ರಾಮದ ಮೂವರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಗೆಲುವಿಗಾಗಿ ತೀವ್ರ ಹಣಾಹಣಿ ಏರ್ಪ ಟಿತ್ತು. ತಾಲೂಕು ಪಂಚಾಯಿತಿಯಲ್ಲಿ ಒಟ್ಟು 19 ಸ್ಥಾನಗಳಿದ್ದು, ಈ ಪೈಕಿ ಕಾಂಗ್ರೆಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಅಡಳಿತದ ಚುಕ್ಕಾಣಿ ಹಿಡಿದಿತ್ತು. ಮತ್ತೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದು ಮತ್ತೊಂದು ಸ್ಥಾನ ಹೆಚ್ಚಳ ವಾಗಿದೆ. ಉಪಚುನಾವಣೆಯಲ್ಲಿ ಜಯ ಶೀಲರಾದ ಮಂಜೇಗೌಡರನ್ನು ಮಾಜಿ ಸಚಿವ ಎ.ಮಂಜು ಅಭಿನಂದಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾ ಯಿತಿ ಮಾಜಿ ಸದಸ್ಯ ಲೋಕನಾಥ್, ಗಂಗೂರು ಜಿ.ಟಿ.ಕುಮಾರಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುಂಡಣ್ಣ, ಮಾಜಿ ಸದಸ್ಯಬಿಳಗೂಲಿ ರಾಮೇಗೌಡ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಜಯಣ್ಣ, ಚಂದ್ರೇಗೌಡ, ಸಿದ್ದಯ್ಯ, ಜಯಪ್ರಕಾಶ್ ಮೂತಾದವರು ಉಪಸ್ಥಿತರಿದ್ದರು.