ಕರಾವಳಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಲರವ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕರಾ ವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿಂಚಿನ ಪ್ರಚಾರ ನಡೆಸಿ, ವಿಧಾನಸಭೆ ಚುನಾವಣೆಯ ರಣಾಂಗಣಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ.

ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಇಂದು ಬೆಳಗ್ಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವಾರು ನಾಯಕರು ಸ್ವಾಗತಿ ಸಿದರು. ನಂತರ ರಾಹುಲ್ ಅಲ್ಲಿಂದ ಹೆಲಿ ಕಾಪ್ಟರ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಕ್ಕೆ ತೆರಳಿದರು. ಅಲ್ಲಿ ಜೈ ಹಿಂದ್ ಶಾಲಾ ಮೈದಾನದಲ್ಲಿಳಿದು

ಅಲ್ಲಿಂದ ಪುರಸಭಾ ಕಚೇರಿ, ಬಡಿಕಟ್ಟ ರಸ್ತೆ, ಗಣಪತಿ ರಸ್ತೆಗಳಲ್ಲಿ, ಕಾಮತ್ ಹೋಟೆಲ್ ಮಾರ್ಗವಾಗಿ ರೋಡ್ ಶೋ ನಡೆಸಿ ನಂತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಸ್ತೆ ಮಾರ್ಗವಾಗಿ ಕುಮಟಾಕ್ಕೆ ತೆರಳಿದ ರಾಹುಲ್ ಗಾಂಧಿ ಮಸ್ತಿಕಟ್ಟೆ ವೃತ್ತದಿಂದ ಗಿಬ್ ಹೈಸ್ಕೂಲ್ ವೃತ್ತದವರೆಗೂ ರೋಡ್ ಶೋ ನಡೆಸಿದರು. ಕುಮುಟಾದಲ್ಲಿ ಬಹಿರಂಗಸಭೆ ನಡೆಸಿದರು. ನಂತರ ಹೊನ್ನಾವರದಲ್ಲಿ ರೋಡ್ ಶೋ ನಡೆಸಿ, ಸರಸ್ವತಿ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಭಟ್ಕಳದಲ್ಲೂ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ರಾತ್ರಿ ಭಟ್ಕಳದ ಮುರಡೇಶ್ವರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗಾಗಲೇ ಐದು ಹಂತದಲ್ಲಿ ರಾಜ್ಯ ಪ್ರವಾಸ ಮಾಡಿರುವ ರಾಹುಲ್ ಜನಾಶೀರ್ವಾದ ರ್ಯಾಲಿ ಮೂಲಕ ಬಹುತೇಕ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿದ್ದು, ಭೇಟಿ ನೀಡದ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ತೆರಳಿ ಪ್ರಚಾರ ನಡೆಸಲಿದ್ದಾರೆ.