ಗೋಡ್ಸೆ ದೇಶಭಕ್ತನೆಂದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮೈಸೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರ ವರ್ತನೆ ಖಂಡಿಸಿ, ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯ ಕರ್ತರು ಪ್ರತಿಭಟನೆ ನಡಸಿದರು.

ಮೈಸೂರಿನ ಮಹಾತ್ಮ ಗಾಂಧಿ ವೃತ್ತ ದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ನಾಯಕರು ನಾಥೂರಾಂ ಗೋಡ್ಸೆ ದೇಶಭಕ್ತ ಎನ್ನುತ್ತಿ ರುವುದು ಖಂಡನೀಯ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ಚೇತನ ಗಾಂಧೀಜಿಯನ್ನು ಹತ್ಯೆಗೈಯ್ಯುವ ಮೂಲಕ ದೇಶದ್ರೋಹಿ ಕೃತ್ಯ ಎಸಗಿದವನನ್ನು ದೇಶ ಭಕ್ತ ಎನ್ನುವ ಮೂಲಕ ಬಿಜೆಪಿ ಬಣ್ಣ ಬಯ ಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಜ್ಞಾ ಸಿಂಗ್, ಸಂಸದರಾದ ನಳಿನ್‍ಕುಮಾರ್ ಕಟೀಲ್, ಅನಂತ ಕುಮಾರ್ ಹೆಗಡೆ ಮತ್ತು ಶೋಭಾ ಕರದ್ಲಾಂಜೆ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು.

ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಮಾತನಾಡಿ, ಕೋಮು ವಾದಿ ಪರವಾಗಿ ನಿಲ್ಲುವ ಬಿಜೆಪಿ ಮನ ಸ್ಥಿತಿಯ ಬಗ್ಗೆ ಜನರು ಎಚ್ಚರಿಕೆ ವಹಿಸದಿ ದ್ದರೆ ದೇಶ ಅಪಾಯಕ್ಕೆ ಸಿಲುಕಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಗಾಂಧಿ ಭ್ರಷ್ಟರು ಎಂಬ ಹೇಳಿಕೆಗೆ ಬಿಜೆ ಪಿಯ ನಾಯಕರಾದ ವಿ.ಶ್ರೀನಿವಾಸ ಪ್ರಸಾದ್ ಅವರೇ ಅದು ಶುದ್ಧ ಸುಳ್ಳು ಎಂದು ಉತ್ತರ ಕೊಟ್ಟಿದ್ದಾರೆ. ಟೈಮ್ಸ್ ಪತ್ರಿಕೆ ಪ್ರಧಾನಿ ಮೋದಿ ಪ್ರಜಾಪ್ರಭುತ್ವ ವ್ಯವಸ್ಥೆ ಕೆಡವುತ್ತಿದ್ದಾರೆ ಎಂದು ಬರೆ ದಿದೆ. ಕೆಟ್ಟ ಪ್ರಧಾನಿ ಎಂಬ ಹೆಸರು ಪಡೆದುಕೊಂಡಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮೇಯರ್ ಪುಷ್ಪಲತಾ ಜಗನ್ನಾಥ್, ಕಾಂಗ್ರೆಸ್ ವಕ್ತಾರ ಹೆಚ್.ಎ. ವೆಂಕಟೇಶ್, ರಾಜ್ಯ ಮಹಿಳಾ ಆಯೋ ಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮಾಜಿ ಮೇಯರ್‍ಗಳಾದ ಅಯೂಬ್ ಖಾನ್, ಟಿ.ಬಿ.ಚಿಕ್ಕಣ್ಣ, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್, ತಾ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಮಾಜಿ ಉಪಮೇಯರ್ ಪುಷ್ಪವಲ್ಲಿ, ನಗರಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಮುಖಂಡರಾದ ಕೋಟೆ ಹುಂಡಿ ಮಹದೇವು, ಬ್ಯಾಂಕ್ ಪುಟ್ಟಸ್ವಾಮಿ, ಎಂ.ಕೆ.ಅಶೋಕ್, ಲೋಕೇಶ್, ಡೈರಿ ವೆಂಕ ಟೇಶ್, ಕುರುಬಾರಹಳ್ಳಿ ಎಂ.ಎ. ಕಮಲ, ಇಂದಿರಾ, ಲತಾ ಮೋಹನ್, ಶೌಖತ್ ಅಲಿಖಾನ್, ಮೈಸೂರು ಬಸವಣ್ಣ, ಪಿ.ರಾಜು, ಹೆಡತಲೆ ಮಂಜುನಾಥ್, ಈಶ್ವರ್ ಚಕ್ಕಡಿ ಇನ್ನಿತರರು ಪಾಲ್ಗೊಂಡಿದ್ದರು.