ರಾಜ್ಯದಲ್ಲಿ 1994ರ ಫಲಿತಾಂಶ ಪುನರಾವರ್ತನೆ ಕಾಂಗ್ರೆಸ್ ಧೂಳೀಪಟ: ಜಾವ್ಡೇಕರ್ ಭವಿಷ್ಯ

ಬೆಂಗಳೂರು: ರಾಜ್ಯದ ಜನತೆ ಕಾಂಗ್ರೆಸ್‍ಗೆ 1994ರ ಫಲಿತಾಂಶ ವನ್ನು ಮರುಕಳಿಸಲಿ ದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದೆ. ಆದರೆ ಆ ಪಕ್ಷದ ಮುಖಂಡರಿಗೆ ರಾಜ್ಯದ ಜನತೆಯ ನಾಡಿ ಮಿಡಿತದ ಅರಿವಿಲ್ಲ.

ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ 5 ವರ್ಷಗಳಿಂದ ನಡೆದ ಆಡಳಿತ ರಾಜ್ಯದ ಜನತೆಗೆ ಬೇಸರ ತರಿಸಿದೆ. ಮತದಾರರು ಎಂದು ಚುನಾವಣೆ ಬರುತ್ತದೆ ಎಂದು ಕಾಯು ತ್ತಿದ್ದಾರೆ. ಮೇ 12ರಂದು ರಾಜ್ಯ ವಿಧಾನ ಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಹೀನಾಯವಾಗಿ ಸೋಲಿಸಿ, ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಲಿದ್ದಾರೆ.

ಕಾಂಗ್ರೆಸ್‍ಗೆ ಕನಿಷ್ಠ 50 ಕ್ಷೇತ್ರಗಳನ್ನು ಗಳಿಸಲು ಸಾಧ್ಯವಿಲ್ಲ. ನಾನು ನೀಡಿರುವ ಈ ಹೇಳಿಕೆಯನ್ನು ಮೇ 15ರ ಫಲಿತಾಂಶ ದಂದು ನೋಡಿ ಎಂದಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅತಂತ್ರ ಫಲಿ ತಾಂಶ ನಿರ್ಮಾಣವಾಗುವುದಿಲ್ಲ. ಕರ್ನಾ ಟಕದ ಜನತೆ ಬುದ್ಧಿವಂತರಾಗಿದ್ದು, ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಲಿದ್ದಾರೆ. ಜನರ ನಾಡಿಮಿಡಿತ ಹೇಗೆ ಎಂಬುದನ್ನು ತಿಳಿದಿ ದ್ದೇವೆ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದರು.

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯವರು ಅಭ್ಯರ್ಥಿಗಳು ಹಾಗೂ ಪದಾಧಿಕಾರಿಗಳ ಜೊತೆ ಸಂವಾದ ನಡೆಸಿದ್ದಾರೆ. ಇದರಿಂದ ಕಾರ್ಯಕರ್ತರ ಆತ್ಮಸ್ಥೈರ್ಯ ಇಮ್ಮಡಿಗೊಂಡಿದೆ. ಇನ್ನಷ್ಟು ಆತ್ಮವಿಶ್ವಾಸದಿಂದ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ನುಡಿದರು.

ಯಾವುದೇ ಪ್ರಧಾನಿ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಮಾತುಕತೆ ನಡೆ ಸಿದ ನಿದರ್ಶನಗಳಿಲ್ಲ. ನಮ್ಮ ಪ್ರಧಾನಿ ಯವರು ತಾವು ಪ್ರಧಾನಿ ಎಂಬುದನ್ನು ಮರೆತು ಮಾತನಾಡಿದ್ದಾರೆ. ಇದನ್ನು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.