ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಾಣ ಮತ್ತೆ ಚಾಲ್ತಿಗೆ

  • ದೇಶದ 6 ಹೈಸ್ಪೀಡ್ ರೈಲ್ವೆ ಕಾರಿಡಾರ್, ಸೆಮಿ, ಮೀಸಲು ಸರಕು ಕಾರಿಡಾರ್ ಪ್ರಸ್ತಾಪ
  • ಮುಂದಿನ 2 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ

ನವದೆಹಲಿ: ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗ ಸೇರಿ ಇತರ 6 ಹೈಸ್ಪೀಡ್ ರೈಲ್ವೆ ಕಾರಿಡಾರ್, ಸೆಮಿ ಹಾಗೂ 4 ಮೀಸಲು ಸರಕು ಕಾರಿಡಾರ್‍ಗಳನ್ನು ಗುರುತಿಸಲಾ ಗಿದೆ. ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್ ಮಾತನಾಡಿ, ರೈಲ್ವೆಯು 6 ಹೈಸ್ಪೀಡ್ ಮತ್ತು ಸೆಮಿ ಸ್ಪೀಡ್ ರೈಲು ಕಾರಿಡಾರ್‍ಗಳನ್ನು ಗುರುತಿಸಲಾಗಿದೆ. ಎಲ್ಲ ಕಾರಿಡಾರ್‍ಗಳ ಸಮಗ್ರ ಯೋಜನಾ ವರದಿಯು ಒಂದೆರಡು ವರ್ಷಗಳಲ್ಲಿ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.

865 ಕಿ.ಮೀ. ಅಂತರದ ದೆಹಲಿ-ಆಗ್ರ-ಲಖನೌ- ವಾರಣಾಸಿ, 886 ಕಿ.ಮೀ. ಅಂತರದ ದೆಹಲಿ-ಜೈಪುರ್-ಉದಯಪುರ್-ಅಹಮದಾಬಾದ್, 753 ಕಿ.ಮೀ. ಮಾರ್ಗದ ಮುಂಬೈ-ಪುಣೆ-ಹೈದರಾಬಾದ್, 435 ಕಿ.ಮೀ. ಕ್ರಮಿಸುವ ಚೆನ್ನೈ-ಬೆಂಗಳೂರು-ಮೈಸೂರು ಹಾಗೂ 459 ಕಿ.ಮೀ. ಮಾರ್ಗದ ದೆಹಲಿ-ಚಂಡೀಘಡ್-ಲುಧಿಯಾನ-ಜಲಂಧರ್-ಅಮೃತಸರ್ ಅನ್ನು ಹೈಸ್ಪೀಡ್ ಅಥವಾ ಸೆಮಿ ಸ್ಪೀಡ್‍ಗೆ ಗುರುತಿಸಲಾಗಿದೆ ಎಂದರು. ಸರಕು ಸಾಗಣೆ ರೈಲುಗಳ ಸರಾಸರಿ ವೇಗವನ್ನು ಡಿಎಫ್‍ಸಿಯಲ್ಲಿ ಅಸ್ತಿತ್ವದಲ್ಲಿರುವ 26 ಕಿ.ಮೀ.ನಿಂದ 70 ಕಿ.ಮೀ.ಗೆ ಹೆಚ್ಚಿಸಲು ಸಹ ಯೋಜಿಸಲಾಗಿದೆ. ರಾಷ್ಟ್ರೀಯ ಸಾರಿಗೆ 4 ಹೊಸ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‍ಗಳನ್ನು ಹುಡುಕುತ್ತಿದೆ ಎಂದು ಹೇಳಿದ್ದಾರೆ.

ಖರಗ್‍ಪುರದಿಂದ ವಿಜಯವಾಡದವರೆಗಿನ 1,114 ಕಿ.ಮೀ ಪೂರ್ವ ಕರಾವಳಿ ಕಾರಿಡಾರ್, ಭೂಸಾವಲ್- ವಾರ್ಧಾ-ನಾಗ್ಪುರ- ರಾಜ್‍ಕಾರ್ಸ್ವಾನ್- ಖರಗ್‍ಪುರ- ಉಲ್ಬೇರಿಯಾ- ಡಂಕುನಿ ನಡುವಿನ 1956 ಕಿ.ಮೀ ಪೂರ್ವ ಪಶ್ಚಿಮ ಉಪ ಕಾರಿಡಾರ್ 11, ರಾಜ್ ಖರ್ಸ್ವಾನ್- ಆಂಡಾಲ್ ಮತ್ತು ರಾಜ್‍ಖರ್ಸ್ವಾನ್-ಆಂಡಾಲ್ ಮತ್ತು ವಿಜಯವಾಡ ದಿಂದ ಇಟಾರ್ಸಿವರೆಗಿನ 975 ಕಿ.ಮೀ ಉತ್ತರ ದಕ್ಷಿಣ ಉಪ ಕಾರಿಡಾರ್ ಗುರುತಿಸ ಲಾಗಿದೆ. 3,933 ಕಿ.ಮೀ. ಉದ್ದದ 4 ಸರಕು ಕಾರಿಡಾರ್ ಗಳ ವಿವರವಾದ ಯೋಜನಾ ವರದಿಯನ್ನು ರೈಲ್ವೆ ಮಂಡಳಿಯು ಕೈಗೊಳ್ಳಲಿದೆ. ಮುಂದಿನ ಒಂದು ಅಥವಾ 2 ವರ್ಷಗಳಲ್ಲಿ ಕಾರಿಡಾರ್‍ಗಳು ಪೂರ್ಣಗೊಳ್ಳಲಿವೆ ಎಂದರು. ಚೆನ್ನೈ- ಬೆಂಗಳೂರು- ಮೈಸೂರು ಕಾರಿಡಾರ್ ಪೂರ್ತಿಯಾದರೆ ಈಗ 3 ಗಂಟೆ ತೆಗೆದುಕೊಳ್ಳುತ್ತಿರುವ ಬೆಂಗಳೂರಿನಿಂದ ಮೈಸೂರು ನಡುವಿನ ಪ್ರಯಾಣದ ಅವಧಿ 40 ನಿಮಿಷ ಹಾಗೂ ಚೆನ್ನೈಯಿಂದ ಮೈಸೂರಿನ ಪ್ರಯಾಣದ ಅವಧಿ 2 ಗಂಟೆ 25 ನಿಮಿಷ ಕಡಿತಗೊಳ್ಳಲಿದೆ.