ಮೂರೂವರೆ ವರ್ಷದಲ್ಲಿ ರಾಮ ಮಂದಿರ ನಿರ್ಮಾಣ ಟ್ರಸ್ಟ್ ಖಜಾಂಚಿ ಗೋವಿಂದ ದೇವ್ ಗಿರಿಜಿ ಮಹಾರಾಜ್

ಲಖನೌ,ಫೆ.23- ಮೂರು ಅಥವಾ ಮೂರೂವರೆ ವರ್ಷಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿಜಿ ಮಹಾರಾಜ್ ಹೇಳಿದ್ದಾರೆ.

ಮೂರು ವರ್ಷಗಳಲ್ಲಿ ಅಕ್ಷರಧಾಮ ದೇವಾ ಲಯ ನಿರ್ಮಾಣವಾಗಿದೆ. ಏಕತಾ ವಿಗ್ರಹ ಕೂಡಾ 3 ವರ್ಷಗಳಲ್ಲಿ ನಿರ್ಮಾಣವಾಗಿದೆ. ಮೂರು ಅಥವಾ ಮೂರೂವರೆ ವರ್ಷಗಳಲ್ಲಿ ರಾಮಮಂದಿರ ದೇವಾಲಯ ಕೂಡಾ ಸ್ಥಾಪನೆ ಯಾಗಲಿದೆ. ದೇವಾಲಯ ಕಟ್ಟಡ ನಿರ್ಮಾಣ ಕ್ಕಾಗಿ ಎಲ್ಲಾ ಭಕ್ತಾದಿಗಳಿಂದ ಆರ್ಥಿಕ ನೆರವನ್ನು ಸ್ವೀಕರಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜನರು ಅತ್ಯು ತ್ಸಾಹದಿಂದ ಇಟ್ಟಿಗೆ ಕಳುಹಿಸಿದ್ದಾರೆ. ಇದೀಗ ಹಣವನ್ನು ನೀಡುತ್ತಿದ್ದಾರೆ. ಸಾರ್ವಜನಿಕ ಹಾಗೂ ಜನರ ನಿಧಿಯಲ್ಲಿ ದೇವಾಲಯ ನಿರ್ಮಾಣವಾಗಲಿದೆ. ರಾಮ ಎಲ್ಲರಿಗೂ ಸೇರಿರುವುದ ರಿಂದ ಸಣ್ಣ ನೆರವನ್ನು ಸ್ವೀಕರಿಸುತ್ತಿರುವುದಾಗಿ ಅವರು ಹೇಳಿದರು. ನೃಪೇಂದ್ರ ಮಿಶ್ರಾ ಅಧ್ಯಕ್ಷತೆ ಯಲ್ಲಿ ರಚನೆಯಾಗಿರುವ ದೇವಾಲಯ ನಿರ್ಮಾಣ ಸಮಿತಿ ಸಮಯ ನಿಗದಿಯ ಸಲಹೆ ನಂತರ ಯಾವಾಗ ನಿರ್ಮಾಣವನ್ನು ಯಾವಾಗ ಆರಂಭಿಸಬೇಕೆಂಬ ಬಗ್ಗೆ ನಿರ್ಧಾರ ಕೈಗೊಳ್ಳ ಲಾಗುವುದು. ಸಮಿತಿ 15 ದಿನಗಳಲ್ಲಿ ಸಲಹೆ ನೀಡಲಿದೆ. 15 ದಿನಗಳೊಳಗೆ ಸಮಿತಿ ಸಭೆ ಸೇರಲಿದ್ದು, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.