ಮೈಸೂರಲ್ಲಿ ಮುಂದುವರೆದ ಆಪರೇಷನ್ ಸ್ಪಾನ್

ವೃತ್ತಿಪರತೆ ಹೆಚ್ಚಿಸಲು ಸಂಚಾರ ಪೊಲೀಸರ ವಾಕ್‍ಥಾನ್
ಮೈಸೂರು: ಮೈಸೂರು ನಗರದ ಸಂಚಾರ ಪೊಲೀಸರನ್ನು ಹೆಚ್ಚು ಜನಸ್ನೇಹಿ ಮತ್ತು ಪ್ರವಾಸಿಗರ ಸ್ನೇಹಿಯ ನ್ನಾಗಿಸಲು ಆರಂಭಿಸಿರುವ ‘ಆಪರೇಷನ್ ಸ್ಪಾನ್’ ಕಾರ್ಯಾಚರಣೆ ಮುಂದುವರಿದಿದೆ.

ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಮ್ ವಿ.ಅಮಟೆ ನೇತೃತ್ವದಲ್ಲಿ 250 ಮಂದಿ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಮುಂಜಾನೆ 5.45 ಗಂಟೆ ಯಿಂದ ತಾವರಕಟ್ಟೆ ಮೂಲಕ ಕಾಲ್ನಡಿಗೆ ಯಲ್ಲಿ ಚಾಮುಂಡಿಬೆಟ್ಟ ಏರಿದ್ದರು. ಫಿಟ್ನೆಸ್ ಟ್ರೈನರ್ ಚಂದ್ರಶೇಖರನ್ ಅವರು ಚಾಮುಂಡಿ ಬೆಟ್ಟದಲ್ಲಿ ಕಾರ್ಯಾಗಾರ ನಡೆಸಿ ಸಂಚಾರ ಪೊಲೀಸರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳಿಸುವ ಕುರಿತಂತೆ ಮಾಹಿತಿ ನೀಡಿದರು. ಆಹಾರ ಪದ್ಧತಿ, ದೇಹದಾಢ್ರ್ಯ, ದೈಹಿಕ ಸಾಮಥ್ರ್ಯ ನಿರ್ವ ಹಿಸುವ ಕುರಿತಂತೆ ಕಾರ್ಯಾಗಾರದಲ್ಲಿ ಸಂಚಾರ ಪೊಲೀಸರಿಗೆ ಚಂದ್ರಶೇಖರನ್ ಟಿಪ್ಸ್ ನೀಡಿದ್ದಾರೆ