ಏಕಲವ್ಯನಗರದ ನರ್ಮ್ ಮನೆಗಳ ಮಂಜೂರಾತಿಗೆ ಆಗ್ರಹಿಸಿ ಮುಂದುವರೆದ ಪ್ರತಿಭಟನೆ ಸ್ಥಳದಲ್ಲೇ ಅಡುಗೆ, ಭೋಜನ

ಮೈಸೂರು, ಜ.29(ಪಿಎಂ)- ಏಕಲವ್ಯ ನಗರದ ನರ್ಮ್ ಮನೆಗಳ ಮಂಜೂರಾ ತಿಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾ ವಧಿ ಅಹೋರಾತ್ರಿ ಪ್ರತಿಭಟನೆ ಬುಧವಾ ರವೂ ಮುಂದುವರೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮುಂದುವರೆಸಿದ್ದು, ಇಂದು ಮಧ್ಯಾಹ್ನ ಸ್ಥಳದಲ್ಲೇ ಅಡುಗೆ ಸಿದ್ಧಪಡಿಸಿ ಊಟ ಮಾಡುವ ಮೂಲಕ ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ಏಕಲವ್ಯನಗರದ 1040 ನರ್ಮ್ ಮನೆ ಗಳ ಆಯ್ಕೆ ಪಟ್ಟಿಯಿಂದ ಅರ್ಹರಾದ ನಮ್ಮನ್ನು ಆಯ್ಕೆ ಮಾಡದೇ ಕೈಬಿಡಲಾ ಗಿದೆ. ಖಾಲಿ ಉಳಿದಿದ್ದ ಮನೆಗಳಲ್ಲಿ ನಾವು ವಾಸಕ್ಕೆ ಸೇರಿಕೊಂಡಿದ್ದು, ಹಾಲಿ ವಾಸಿಸು ತ್ತಿರುವ ನರ್ಮ್ ಮನೆಗಳನ್ನೇ ನಮಗೆ ಮಂಜೂರು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಭೋಜನ ಸ್ವೀಕರಿಸಿದ ದಸಂಸ ಮುಖಂಡ ನಿಂಗ ರಾಜು ಮಲ್ಲಾಡಿ ಮಾತನಾಡಿ, ಜಿಲ್ಲಾಧಿ ಕಾರಿಗಳ ಆದೇಶದ ಮೇರೆಗೆ ಏಕಲವ್ಯ ನಗರದ ನರ್ಮ್ ಮನೆಗಳಲ್ಲಿ ಯಾರ್ಯಾರು ವಾಸ ಮಾಡುತ್ತಿದ್ದಾರೆ ಎಂದು ಜಂಟಿ ಸರ್ವೇ ಮಾಡಿಸಲಾಗಿದೆ. ಈ ಜಂಟಿ ಸರ್ವೇ ವರದಿ ಆಧಾರದ ಮೇಲೆ ಅದೇ ಮನೆಗಳನ್ನು ಅಲ್ಲಿ ವಾಸಿಸುತ್ತಿರುವ ಬಡವ ರಿಗೆ ಮಂಜುರಾತಿ ಮಾಡಬೇಕು ಎಂದು ಆಗ್ರಹಿಸಿದರು. ದಸಂಸ ಮುಖಂಡ ನಂಜಪ್ಪ ಬಸವನಗುಡಿ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.