ದಕ್ಷಿಣ ಕೊಡಗಲ್ಲಿ ಮುಂದುವರೆದ ಹುಲಿ ದಾಳಿ

  •  ಮಾಲ್ದಾರೆ ಬಳಿ ಜಾನುವಾರು ಬಲಿ
  •  ಭಯಭೀತರಾಗಿರುವ ಗ್ರಾಮಸ್ಥರು, ಕಾರ್ಮಿಕರು
  • ಮೂರು ತಿಂಗಳಲ್ಲಿ 35 ಜಾನುವಾರು ಬಲಿ

ಸಿದ್ದಾಪುರ: ಸಮೀಪದ ಮಾಲ್ದಾರೆ ವ್ಯಾಪ್ತಿಯ ಕಾಫಿತೋಟಗಳಲ್ಲಿ ಮತ್ತೆ ಹುಲಿ ಕಾಣಿಕೊಂಡಿದ್ದು ಕಲಳ್ಳ ಬಳಿಯ ಕಾಫಿತೋಟವೊಂದರಲ್ಲಿ ಹುಲಿ ದಾಳಿಗೆ ಜಾನುವಾರು ಬಲಿಯಾಗಿದೆ.

ಪ್ರದೀಪ್ ಎಂಬವರಿಗೆ ಸೇರಿದ ಜಾನುವಾರು ಮೇಯಲು ಬಿಟ್ಟ ಸಂದರ್ಭ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿದೆ. ಕಳೆದ 3 ತಿಂಗಳಿಂದ ಕಾಫಿತೋಟಗಲ್ಲಿ ಬೀಡುಬಿಟ್ಟು 35ಕ್ಕೊ ಹೆಚ್ಚು ಜಾನುವಾರುಗಳನ್ನು ಹುಲಿ ಬಲಿ ತೆಗೆದುಕೊಂಡಿದ್ದು ರೈತರು ಕಂಗಲಾಗಿದ್ದಾರೆ.

ಮಾಲ್ದಾರೆ, ಬೀಟಿಕಾಡು, ಚೌಡಿಕಾಡು, ಮೈಲಾತ್ ಪುರ, ಬಜಕೊಲ್ಲಿ, ಬಾಡಗ ಬಾಣಂಗಾಲ,ವ್ಯಾಪ್ತೀಯ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುವ ಹುಲಿಯಿಂದ ಕಾರ್ಮಿಕರು, ಬೆಳಗಾರರು, ಭಯಭೀತರಾಗಿದ್ದಾರೆ.

ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಾಗೂ ಅರಣ್ಯಾ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕೇತ್ ಪೂವಯ್ಯ ಮಾತ ನಾಡಿ, ವಿರಾಜಪೇಟೆ ತಾಲೂಕಿನಲ್ಲಿ ನೂರಾರು ಜಾನುವಾರುಗಳು ಬಲಿಯಾಗಿದೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದಾಳಿ ಸಂದರ್ಭದಲ್ಲಿ ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ. ಕಾರ್ಮಿಕರ ಹಾಗೂ ರೈತರ ಸಮಸ್ಯೆಗಳಿಗೆ ಸ್ವಂದಿಸುತ್ತಿಲ್ಲ. ಗ್ರಾಮಗಳತ್ತ ಮುಖ ಮಾಡಿರುವ ಕಾಡು ಪಾಣಿಗಳನ್ನು ಹಾವಳಿಯನ್ನು ತಡೆಗಟ್ಟುವಲ್ಲಿ ವಿಫರಾಗಿದ್ದಾರೆ ಎಂದು ಆರೋಪಿಸಿದ ಅವರು ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟು ವಿಚಾರದಲ್ಲಿ ಸರಕಾರಕ್ಕೆ ಯಾವುದೆ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಎಸಿಎಫ್ ಶಿವಶಂಕರ್ ಮಾತನಾಡಿ, ಸಿಬ್ಬಂದಿಗಳು ಜಾನುವಾರು ಬಲಿ ತೆಗೆದುಕೊಂಡ ಸ್ಥಳದಲ್ಲಿ ಎರಡು ಕ್ಯಾಮೆರಾ ಆಳವಡಿಸಲಾಗಿದ್ದು ಹುಲಿ ಚಲನವಲನ ಗಮನಿಸಲು ಆರ್‍ಆರ್‍ಟಿ ತಂಡವನ್ನು ನೀಯೊಜಿಸ ಲಾಗಿದೆ. ಹುಲಿ ಸೆರೆಗೆ ಬೋನ್ ಇಡಲಾಗುವದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ವಲಯ ಅರಣ್ಯಾಧಿಕಾರಿ ಅಶೋಕ್, ಉಪ ವಲಯರಾಣ್ಯಾಧಿಕಾರಿ ಶ್ರೀನಿವಾಸ್, ಸಿಬ್ಬಂದಿಗಳಾದ ರಾಮಕೃಷ್ಣ, ವಿಶ್ವನಾಥ್, ನಾಗೇಶ್ ರಮೇಶ್, ಶಂಕರ ಸೇರಿದಂತೆ ಮತ್ತಿತತರು ಹಾಜರಿದ್ದರು.