ವಿ.ಪೇಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಕೆ

ವಿರಾಜಪೇಟೆ:  ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ಅಧಿಕಾರದಿಂದ ವಂಚನೆಗೊಳಗಾಗಿದ್ದರೂ ರಾಜಕೀಯ ರಹಿತವಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿ, ಜನಪರ ಕೆಲಸಗಳು ಮುಂದುವರೆ ಯುವುದು ಎಂದು ವಿಧಾನಸಭೆಯ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಹೇಳಿದರು.

ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಕೊಡಗಿಗೆ ಆಗಮಿಸಿ ತಾಲೂಕು ಬಿಲ್ಲವ ಸೇವಾ ಸಂಘದಿಂದ ವಿರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿ ಕೊಂಡಿದ್ದ ಬಿಲ್ಲವ ಕಪ್ ಕ್ರೀಡೋತ್ಸವದ ಸಮಾರೋಪ-ಸಮಾರಂಭದಲ್ಲಿ ಅತಿಥಿ ಯಾಗಿ ಭಾಗವಹಿಸಿ ಬಿಲ್ಲವ ಸಮಾಜ ದಿಂದ ಸನ್ಮಾನ ಸ್ವೀಕರಿಸಿದ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಸಮು ದಾಯಗಳ ಕ್ರೀಡೊತ್ಸವ ಆಚರಣೆ ರಾಷ್ಟ್ರಕ್ಕೆ ಮಾದರಿಯಾಗಲಿದೆ. ಕೊಡಗಿನ ಪ್ರತಿಯೊಂದು ಸಮುದಾಯಗಳ ಸಂಘಟನೆಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕ್ರೀಡೆಗಳನ್ನು ಹಬ್ಬ, ಉತ್ಸವವಾಗಿ ಆಚರಿಸುತ್ತಿರುವುದ ರಿಂದ ಸಮುದಾಯ ಬಾಂಧವರು ಒಮ ್ಮತದಿಂದ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸು ತ್ತಿರುವ ವಿವಿಧ ಸಮು ದಾಯಗಳ ಸಂಘಟನೆಗಳು ಸಂಪ್ರ ದಾಯ, ಸಂಸ್ಕøತಿ, ಪದ್ಧತಿ ಪರಂಪರೆ ಯನ್ನು ಉಳಿಸಿ ಬೆಳಸಿಕೊಳ್ಳಲು ಸಾಧ್ಯ ವಾಗಲಿದೆ ಎಂದರು.

ಬಿಲ್ಲವ ಸೇವಾ ಸಂಘದ ಸ್ಪೀಕರ್ ಬೋಪಯ್ಯ ಅವರ ಸನ್ಮಾನ ಸಮಾರಂಭ ದಲ್ಲಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಗೌರವ ಅಧ್ಯಕ್ಷ ಬಿ.ರಾಜ. ಉಪಾಧ್ಯಕ್ಷ ಬಿ.ಎಂ.ಗಣೇಶ್, ಮೈಸೂರು ಡಿವೈಎಸ್‍ಪಿ ಬಿ.ಆರ್. ಲಿಂಗಪ್ಪ, ಮಡಿಕೇರಿಯ ತಾಲೂಕು ಅಧ್ಯಕ್ಷ ರಾಜಶೇಖರ್, ಬಿ.ಕೆ.ಜನಾರ್ಧನ್, ಸಂಘದ ಜಿಲ್ಲಾಧ್ಯಕ್ಷ ರಘು ಆನಂದ್, ಬಿ.ಎಂ. ಸತೀಶ್ ಮುಂತಾದವರು ಹಾಜರಿದ್ದರು.