ಹೋಟೆಲ್ ಉದ್ಯಮ ಸಿಬ್ಬಂದಿ ಕೌಶಲವೃದ್ಧಿಗೆ ಎಫ್‍ಸಿಐ ಪಣ

ಮೈಸೂರು: ಬಾಣಸಿಗರು ಸೇರಿದಂತೆ ಹೋಟೆಲ್ ಉದ್ಯಮದ ಸಿಬ್ಬಂದಿಗಳಿಗೆ ಕೌಶಲ ವೃದ್ಧಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಯುಕ್ತಾಶ್ರಯದಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ರಾಜ್ಯದ ಏಕೈಕ ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್‍ಗೆ ಬೇಡಿಕೆ ಹೆಚ್ಚಾಗಿದ್ದು, ನಿರುದ್ಯೋಗಿ ಯುವಕ-ಯವತಿಯರು ವಿವಿಧ ಕೋರ್ಸ್‍ಗೆ ದಾಖಲಾಗುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳುವ ಹಾದಿ ಕಂಡುಕೊಳ್ಳುತ್ತಿದ್ದಾರೆ.

ದಸರಾ ವಸ್ತು ಪ್ರದರ್ಶನ ಆವರಣದಲ್ಲಿರುವ ಕನ್ನಡ ಕಾರಂಜಿ ಕಟ್ಟಡದಲ್ಲಿ ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್(ಎಫ್‍ಸಿಐ) ಸದ್ದಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ. ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್‍ಮೆಂಟ್ ಅಂಡ್ ಕೇಟರಿಂಗ್ ಟೆಕ್ನಾಲಜಿ ನ್ಯೂಡಾ(ಎನ್‍ಸಿಹೆಚ್ ಎಂಸಿಟಿ) ಮಾನ್ಯತೆ ಪಡೆದಿರುವ ಎಫ್‍ಐಸಿ ಹೋಟೆಲ್ ಉದ್ಯಮದಲ್ಲಿ ಸೇವೆ ಸಲ್ಲಿಸುವ ಬಯಕೆ ಹೊಂದಿರುವ ಯುವಕ-ಯುವತಿಯರಿಗೆ ಬಗೆ ಬಗೆಯ, ರುಚಿಕರವಾದ ಆಹಾರ ತಯಾರಿಕೆ, ಆಹಾರ ವಿತರಣೆ(ಸರಬರಾಜು), ನ್ಯೂಟ್ರಿಷನ್ ಮತ್ತು ಹೈಜೀನ್, ಫುಡ್ ಕಾಸ್ಟಿಂಗ್, ಇಂಗ್ಲೀಷ್ ಭಾಷಾ ಜ್ಞಾನ, ಕಂಪ್ಯೂಟರ್ ಬಳಕೆ, ಅಲಂ ಕಾರ ಮಾಡುವುದು ಹಾಗೂ ವೈಯಕ್ತಿಕ ಸ್ವಚ್ಛತೆ, ಬೇಕರಿ ಉತ್ಪನ್ನಗಳ ತಯಾರಿಕೆ, ಸ್ವಾಗತಕಾರರ ಕರ್ತವ್ಯ ಮತ್ತು ವರ್ತನೆ ಹಾಗೂ ವಸತಿ ನಿರ್ವ ಹಣೆ, ಅತಿಥಿ ಸತ್ಕಾರ ಕುರಿತಂತೆ ತರಬೇತಿ ನೀಡಲಾಗುತ್ತಿದೆ. ಐಷಾರಾಮಿ ಹಾಗೂ ವಿವಿಧ ಸ್ಟಾರ್ ಹೋಟೆಲ್‍ಗಳಲ್ಲಿ ಈ ಕೋರ್ಸ್ ಮಾಡಿ ರುವವರಿಗೆ ಮಾತ್ರ ಉದ್ಯೋಗ ದೊರೆಯು ವುದರಿಂದ ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಹೋಟೆಲ್ ನಿರ್ವಹಣೆಗೆ ಸಂಬಂಧಿಸಿದ ಶಿಕ್ಷಣ ನೀಡಲಾಗುತ್ತಿದೆ. ಇಂತಹ ಕೋರ್ಸ್ ಮಾಡಲು ಲಕ್ಷಾಂತರ ರೂ. ಶುಲ್ಕ ಪಾವತಿಸಬೇಕಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದೆ.

ಅಲ್ಲಿ ಸಿಗದ ಬೇಡಿಕೆ ಇಲ್ಲಿ ಸಿಕ್ಕಿತು: ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್(ಎಫ್‍ಸಿಐ) ಸಂಸ್ಥೆಯನ್ನು 9 ವರ್ಷಗಳ ಹಿಂದೆ ಹಾಸನದ ಬೇಲೂರಿನಲ್ಲಿ ಆರಂಭಿಸಲಾಯಿತು. ಅಲ್ಲಿ ಈ ಸಂಸ್ಥೆಯಲ್ಲಿ ಕಲಿ ಯಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ್ದ ರಿಂದ ಹಾಸನ ನಗರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಹಾಸನದಲ್ಲೂ ಉತ್ತಮ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕಳೆದ ವರ್ಷ ಮೈಸೂರಿಗೆ ಎಫ್‍ಐಸಿ ಸಂಸ್ಥೆಯನ್ನು ವರ್ಗಾಯಿಸಲಾಯಿತು. ಮೊದಲ ವರ್ಷವೇ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡಲು ಬಯಸುವ ಯುವಕ-ಯುವತಿಯರು ವಿವಿಧ ಕೋರ್ಸ್‍ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಶಾಶ್ವತವಾಗಿ ನೆಲೆಯೂರಲಿದೆ: ಈ ಕುರಿತಂತೆ `ಮೈಸೂರು ಮಿತ್ರ’ನೊಂದಿಗೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹೆ.ಪಿ.ಜನಾರ್ಧನ್ ಮಾತ ನಾಡಿ, ನಿರೀಕ್ಷೆಗೂ ಮೀರಿದ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಫ್‍ಐಸಿ ಸಂಸ್ಥೆಯನ್ನು ಮೈಸೂರು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳುವುದಕ್ಕೆ ಪ್ರವಾಸೋ ದ್ಯಮ ಇಲಾಖೆ ನಿರ್ಧರಿಸಿದೆ. ಮೈಸೂರು ನಗರ ಬಸ್ ನಿಲ್ದಾಣದಿಂದ 5 ಕಿ.ಮೀ ದೂರದ ಬಂಡೀಪಾಳ್ಯದ ಬಳಿ ಎಫ್‍ಐಸಿ ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಿಸಲು ನಾಲ್ಕು ಎಕರೆ ಜಾಗ ಮಂಜೂರು ಮಾಡಲಾಗಿದೆ. ಸ್ವತಃ ಕಟ್ಟಡ ನಿರ್ಮಿಸುವುದರಿಂದ ವಿದ್ಯಾರ್ಥಿ ಗಳಿಗೆ ಅನುಕೂಲವಾಗುತ್ತದೆ. ಎಂದು ತಿಳಿಸಿದರು.

ಉದ್ಯೋಗಾವಕಾಶ: ಮೈಸೂರು, ಮಡಿಕೇರಿ ಭಾಗದಲ್ಲಿಯೇ ಅಂದಾಜು 550 ಕ್ಕೂ ಹೆಚ್ಚು ಐಷಾರಾಮಿ ಹೋಟೆಲ್‍ಗಳು, ರೆಸಾರ್ಟ್‍ಗಳು, ರೆಸ್ಟೋರೆಂಟ್‍ಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗಿನಲ್ಲಿ ಹೋಂ ಸ್ಟೇ ಹೆಚ್ಚಾಗಿವೆ. ಎರಡೂ ಜಿಲ್ಲೆಗಳು ಹಲವು ಪ್ರವಾಸಿ ತಾಣಗಳನ್ನು ಒಳ ಗೊಂಡಿವೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ಕೌಶಲವುಳ್ಳ ಹೋಟೆಲ್ ಸಿಬ್ಬಂದಿಗಳ ಕೊರತೆ ಉದ್ಯಮಿಗಳಲ್ಲಿ ಕಾಣುತ್ತಿದೆ. ಒಮ್ಮೆ ಬರುವ ಪ್ರವಾಸಿಗರು ಮತ್ತೊಮ್ಮೆ ತಮ್ಮದೇ ಹೋಟೆಲ್‍ಗೆ ಬರಬೇಕೆನ್ನುವುದು ಉದ್ಯಮಿಗಳ ಆಶಯವೂ ಆಗಿರುವುದರಿಂದ ತರಬೇತಿ ಪಡೆದ ಸಿಬ್ಬಂದಿಗಳನ್ನೇ ನೇಮಕ ಮಾಡಿಕೊಳ್ಳಲು ಬಯಸುತ್ತಿದ್ದಾರೆ.

ಮೈಸೂರಿನಲ್ಲಿ ದೊಡ್ಡ ಆಸ್ಪತ್ರೆ, ಶಿಕ್ಷಣ ಕೇಂದ್ರ ಗಳಿದ್ದು, ಇವುಗಳಲ್ಲಿ ಕೇಟರಿಂಗ್ ನಡೆಸಲು ಹಾಗೂ ಹೌಸ್ ಕೀಪಿಂಗ್‍ಗೆ ತರಬೇತಿ ಪಡೆದ ವರನ್ನೇ ನೇಮಿಸಿಕೊಳ್ಳಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೆಲಸಗಳು ವಿಪುಲವಾಗಿರುವುದ ರಿಂದ ನುರಿತ ಸಿಬ್ಬಂದಿಗಳ ಕೊರತೆ ನೀಗಿಸಲು ಹೋಟೆಲ್ ಮ್ಯಾನೇಜ್‍ಮೆಂಟ್ ಕಾಲೇಜನ್ನು ಮೈಸೂ ರಿನ್ನಲ್ಲಿಯೇ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಉಚಿತ ಅಲ್ಪಾವಧಿ ಕೋರ್ಸ್ : ಎಫ್‍ಐಸಿಯಲ್ಲಿ ತರಬೇತಿಯನ್ನು 18ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ ಯುವತಿಯರು ಪಡೆಯ ಬಹುದಾಗಿದೆ. ಅಲ್ಪಾವಧಿ ಕೋರ್ಸ್‍ಗಳಾದ ಫುಡ್ ಪ್ರೊಡಕ್ಷನ್ ಕೋರ್ಸ್ 18 ವಾರ(8ನೇ ತರಗತಿ), ಬೇಕರಿ ಅಂಡ್ ಕನ್‍ಫೆಕ್ಷನರಿ 6 ವಾರ (8ನೇ ತರಗತಿ), ಫುಡ್ ಅಂಡ್ ಬೆವರೇಜ್ ಸರ್ವೀಸ್ 12 ವಾರ(10ನೇ ತರಗತಿ), ಫ್ರಂಟ್ ಆಫೀಸ್ 14 ವಾರ(ಪಿಯುಸಿ) ಹಾಗೂ ಹೌಸ್ ಕೀಪಿಂಗ್ 12 ವಾರ(5ನೇ ತರಗತಿ) ತರಬೇತಿ ನೀಡಲಾಗುತ್ತದೆ. ಷರತ್ತಿನೊಂದಿಗೆ 1500 ರೂ. ನಿಂದ ಎರಡು ಸಾವಿರ ರೂ. ವರೆಗೆ ಶಿಷ್ಯವೇತನವನ್ನು ನೀಡಲಾಗುತ್ತದೆ.

ಶೈಕ್ಷಣಿಕ ಕೋರ್ಸ್: ಪಿಯುಸಿ ಉತ್ತೀರ್ಣರಾಗಿರುವ ಯುವಕ-ಯುವತಿಯರಿಗಾಗಿ ಒಂದೂವರೆ ವರ್ಷ ಅವಧಿಯ ಶೈಕ್ಷಣಿಕ ಕೋರ್ಸ್ ನಡೆಸಲಾ ಗುತ್ತಿದೆ. ಫುಡ್ ಪ್ರೊಡಕ್ಷನ್, ಬೇಕರಿ ಅಂಡ್ ಕನ್‍ಫೆಕ್ಷನರಿ, ಫುಡ್ ಅಂಡ್ ಬೆವರೇಜ್ ಸರ್ವೀಸ್, ಫ್ರಂಟ್ ಆಫೀಸ್ ಹಾಗೂ ಹೌಸ್ ಕೀಪಿಂಗ್ ತರಬೇತಿ ನೀಡಲಾಗುತ್ತದೆ. ಈ ವಿಭಾಗ ದಲ್ಲಿ ದಾಖಲಾಗಲು ಸಾಮಾನ್ಯ ವರ್ಗದವರಿಗೆ 25ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವರಿಗೆ ಗರಿಷ್ಠ 28 ವರ್ಷ ನಿಗದಿ ಪಡಿಸಲಾಗಿದೆ. 6 ತಿಂಗಳ ಪ್ರಾಯೋಗಿಕ ತರಬೇತಿಗಾಗಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್‍ಗಳಿಗೆ ನಿಯೋಜಿಸಲಾಗುತ್ತದೆ. ಈ ಅವಧಿಯಲ್ಲಿ ಮಾಸಿಕ 3ರಿಂದ 6 ಸಾವಿರ ರೂ. ಶಿಷ್ಯ ವೇತನ ನೀಡ ಲಾಗುತ್ತದೆ. ತರಬೇತಿ ಪೂರ್ಣಗೊಂಡ ನಂತರ ಪ್ರವಾಸೋದ್ಯಮ ಇಲಾಖೆಯಿಂದಲೇ ವಿವಿಧ ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ವಿವಿಧೆಡೆ ಮಾಸಿಕ 10ರಿಂದ 12 ಸಾವಿರ ರೂ. ವೇತನದ ಕೆಲಸ ಕೊಡಿಸಲಾಗುತ್ತದೆ.

ಎಂ.ಟಿ.ಯೋಗೇಶ್ ಕುಮಾರ್