ದೇಶ ಮತ್ತೆ ಜಾತಿ ಪ್ರಾಬಲ್ಯದ ಕಡೆಗೆ 

ಮೈಸೂರು: ಇಂದು ದೇಶವನ್ನು ಮತ್ತೆ ಜಾತಿ ರಾಜ ಕಾರಣದ ಪ್ರಾಬಲ್ಯದ ಕಡೆಗೆ ತಂದು ನಿಲ್ಲಿಸ ಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದ ರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆ ಇಂಜಿನಿ ಯರುಗಳ ಸಂಸ್ಥೆ ಸಭಾಂಗಣದಲ್ಲಿ ಗುರು ವಾರ ಅರಸು ಜಾಗೃತಿ ಸಮಿತಿ, ಅರಸು ಪತ್ರಿಕೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ 37ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಜಾತಿ ರಾಜಕಾರಣದ ಪ್ರಾಬಲ್ಯ ಹೆಚ್ಚುತ್ತಿರುವುದರ ಜೊತೆಗೆ ಕೋಮುವಾದ ರಾಜಕಾರಣವೂ ಒಂದು ದೊಡ್ಡ ಶಕ್ತಿಯಾಗಿ ಪ್ರಹಾರ ನಡೆ ಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಂದಿನ ಜಾತಿ ಪ್ರಾಬಲ್ಯದ ನಡುವೆಯೂ ದೇವರಾಜ ಅರಸು ಮುಖ್ಯಮಂತ್ರಿಯಾಗಿ ಜಾತಿ ರಾಜಕಾರಣದ ನಡುವೆಯೂ ಶಕ್ತಿ ರಾಜ ಕಾರಣ ಬಳಸಿ ಅನೇಕ ಜನಪರ ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದರು. ಇಡೀ ದೇಶ ದೊಳಗೆ ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಸಂಪೂರ್ಣ ಜಾರಿ ಗೊಳಿಸಿದ ಕೀರ್ತಿ ದೇವರಾಜ ಅರಸು ಅವ ರಿಗೆ ಸಲ್ಲುತ್ತದೆ. ಅವರ ಆಡಳಿತದ ಅವಧಿ ಯಲ್ಲಿ ಕೆಪಿಎಸ್‍ಸಿಗೆ ಜೀವ ತುಂಬಿದವರು. ಜಾತಿ ರಾಜಕಾರಣ ಇದ್ದ ಕಾಲದಲ್ಲಿಯೇ ಅವಕಾಶ ವಂಚಿತರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟರು. ಅವರ ಸಾಮಾ ಜಿಕ ನ್ಯಾಯದ ಫಲಾನುಭವಿ ನಾನೂ ಆಗಿದ್ದೇನೆ ಎಂದು ಹೇಳಿದರು.

ಇಂದು ಬಲಿಷ್ಠ ಸಮುದಾಯ ದೇವ ರಾಜ ಅರಸು ಅವರನ್ನು ತಮ್ಮ ಎದೆಯೊ ಳಗೆ ತಂದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅರಸು ಆಡಳಿತ ನಡೆಸು ತ್ತಿದ್ದಾಗ ಕಟು ಟೀಕೆಗಳನ್ನು ಮಾಡಿದ್ದವರು ಇಂದು ಅರಸು ಅವರನ್ನು ವೈಭವೀಕರಣ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ನಾವು ಅರಸು ಅವರ ಯೋಜನೆಗಳನ್ನು ಹೇಗೆ ಯಾವ ಸಂಘಟನೆ ಮೂಲಕ ಅನುಷ್ಠಾನಕ್ಕೆ ತರಲು ಸಾಧ್ಯ ಎಂಬ ಚಿಂತನೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಅರಸರ ಬದ್ಧತೆ ಯಾರೂ ಪ್ರಶ್ನಿಸಲಾಗದು: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಮಾತ ನಾಡಿ, ದಿಕ್ಕಿಲ್ಲದವರ ದನಿಯಾಗಿ ಕೆಲಸ ಮಾಡಿದವರು ಡಿ.ದೇವರಾಜ ಅರಸು. ಸಾಮಾಜಿಕ ನ್ಯಾಯಕ್ಕಾಗಿ ಹೊರಾಡಿ, ಕೃಷಿ ಪದ್ಧತಿ, ನೀರಾವರಿ, ಸಮಸ್ಯೆಗಳ ಬಗ್ಗೆ ಗ್ರಾಮೀಣ ಜೀವನದ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ಯಾರೂ ಪ್ರಶ್ನಿಸಲಾಗುತ್ತಿ ರಲಿಲ್ಲ. ಕೈ ಹಿಡಿದಿದ್ದನ್ನು ಕೈಬಿಡದ ಛಲ ವಂತಿಕೆಯ ವ್ಯಕ್ತಿತ್ವ ಅವರದ್ದು ಎಂದರು.

ಮಧ್ಯಮ ವರ್ಗಗಳನ್ನು ಗುರ್ತಿಸಬೇಕು. ಆರ್ಥಿಕ, ಶೈಕ್ಷಣಿಕ, ಸವಲತ್ತು, ರಾಜಕೀಯ ರಕ್ಷಣೆ ನೀಡಬೇಕು ಎಂಬ ಚಿಂತನೆ ಯೊಂದಿಗೆ ಅದಕ್ಕೆ ಅನುಗುಣವಾಗಿ ಕಾರ್ಯ ಕ್ರಮ ರೂಪಿಸಿ, ಅನುಷ್ಠಾನಗೊಳಿಸಿದರು. ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಿದರು. ಅವರ ಈ ಕಾರ್ಯ ಬೇರೆ ಯವರಿಗೆ ಪ್ರೇರಣೆ ನೀಡಿತು ಎಂದರು.

ಭೂಮಾಲೀಕರ ವಿರೋಧದ ನಡು ವೆಯೂ ಯಾವುದಕ್ಕೂ ರಾಜಿಯಾಗದೇ ಭೂ ಸುಧಾರಣಾ ಮಸೂದೆ ಜಾರಿಗೊಳಿ ಸಿದ ಧೈರ್ಯಶಾಲಿ. ಹಿಂದುಳಿದ ವರ್ಗಗಳ ಆಯೋಗ ರಚಿಸಿ, ವರದಿ ಜಾರಿಗೊಳಿಸಿದ, ಹಿಂದುಳಿದವರಿಗೆ ಧ್ವನಿ ನೀಡಿದವರು. ಹೀಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಅವರಂತೆ ಇವರೂ ರಾಜಕೀಯ ಮುತ್ಸದ್ಧಿ ಎನಿಸಿದ್ದಾರೆ ಎಂದರು.