ಅರಮನೆ ಅಂಗಳದಲ್ಲಿ ಅ.17ರಿಂದ ಸಾಂಸ್ಕøತಿಕ ಕಾರ್ಯಕ್ರಮ

ಮೈಸೂರು, ಅ.15(ಎಸ್‍ಬಿಡಿ) -ದಸರಾ ಉತ್ಸವದ ಅಂಗ ವಾಗಿ ಅರಮನೆ ಅಂಗಳದ ವೇದಿಕೆಯಲ್ಲಿ ಅ.17ರಿಂದ 24ರವ ರೆಗೆ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ಅ.17ರಂದು ರಾತ್ರಿ 8ರಿಂದ 9ರವರೆಗೆ ಶುಭ ಧನಂಜಯ ಮತ್ತು ತಂಡದ ಕಲಾವಿದರಿಂದ ನೃತ್ಯ ರೂಪಕ, ಅ.18ರಂದು ಸಂಜೆ 7ರಿಂದ ರಾತ್ರಿ 9ರವರೆಗೆ ಹಾಸನದ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ತಂಡದಿಂದ ಕೊಳಲು ವಾದನ, ಅ.19ರಂದು ಸಂಜೆ 7ರಿಂದ ರಾತ್ರಿ 8ರವರೆಗೆ ಬೆಂಗಳೂರಿನ ವಿದ್ವಾನ್ ರಾಹುಲ್ ವೆಲ್ಲಾಲ್ ಮತ್ತು ತಂಡದಿಂದ ಭಕ್ತಿ ಸಂಗೀತ, ರಾತ್ರಿ 8ರಿಂದ 9ರವರೆಗೆ ವಿದುಷಿ ಗೀತಾ ರಮಾನಂದ್ ಮತ್ತು ತಂಡದಿಂದ ಪಂಚವೀಣೆ, ಅ.20ರಂದು ಸಂಜೆ 7ರಿಂದ ರಾತ್ರಿ 8ರವರೆಗೆ ರಾಯಚೂರಿನ ಅಂಬಯ್ಯ ನುಲಿ ಮತ್ತು ತಂಡದಿಂದ ವಚನ ಗಾಯನ, ರಾತ್ರಿ 8ರಿಂದ 9ರವರೆಗೆ ಪುತ್ತೂರು ನರಸಿಂಹ ನಾಯಕ ಮತ್ತು ತಂಡದಿಂದ ದಾಸವಾಣಿ, ಅ.21ರಂದು ಸಂಜೆ 7ರಿಂದ ರಾತ್ರಿ 9ರವರೆಗೆ ಗಾಯಕ ರಾಜೇಶ್ ಕೃಷ್ಣನ್ ತಂಡದಿಂದ ಎಸ್‍ಪಿಬಿ ನುಡಿನಮನ, ಅ.22ರಂದು ಸಂಜೆ 7ರಿಂದ ರಾತ್ರಿ 8ರವರೆಗೆ ಪೊಲೀಸ್ ಬ್ಯಾಂಡ್, ರಾತ್ರಿ 8ರಿಂದ 9ರವರೆಗೆ ಬೆಂಗಳೂರಿನ ವಾರಿಜಶ್ರೀ ವೇಣುಗೋಪಾಲ್ ತಂಡದಿಂದ ಫ್ಯೂಷನ್ ಸಂಗೀತ, ಅ.23ರಂದು ಸಂಜೆ 7ರಿಂದ ರಾತ್ರಿ 8ರವರೆಗೆ ಮೈಸೂರಿನ ಡಾ.ಪಿ.ಕೆ.ರಾಜಶೇಖರ್ ನೇತೃತ್ವದಲ್ಲಿ ಹೊನ್ನಾರು ಜಾನಪದ ಗಾಯಕರಿಂದ ಕಾರ್ಯಕ್ರಮ, ರಾತ್ರಿ 8ರಿಂದ 9ರವರೆಗೆ ಸಿತಾರ್ ವಾದಕ ವಿದ್ವಾನ್ ಶಫೀಕ್ ಖಾನ್ ಹಾಗೂ ವಯೋಲಿನ್ ವಾದಕ ವಿದ್ವಾನ್ ಕಾರ್ತಿಕ್ ನಾಗರಾಜ್ ತಂಡದಿಂದ ಹಿಂದೂಸ್ತಾನಿ-ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ಹಾಗೂ ಅ.24ರಂದು ಸಂಜೆ 7ರಿಂದ ರಾತ್ರಿ 9ರವರೆಗೆ ಬೆಂಗಳೂರಿನ ವಿದ್ವಾನ್ ಗಿರಿಧರ ಉಡುಪ ಮತ್ತು ತಂಡದಿಂದ ಲಯತರಂಗ ಕಾರ್ಯಕ್ರಮ ನಡೆಯಲಿದೆ. ಕೋವಿಡ್ ಹಿನ್ನೆಲೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲವಾದರೂ ಎಲ್ಲಾ ಕಾರ್ಯಕ್ರಮಗಳ ವರ್ಚುಯಲ್ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.