ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ ಮಾತನಾಡಿಸಿದ್ದಾರೆ, ಗ್ಲಾಸ್ ನೀರು ಕೊಟ್ಟಿದ್ದಾರೆ…

ಮದ್ದೂರು: ಅಂಬರೀಷ್ ಅವರು ಶಾಸಕ, ಸಚಿವ ಆಗಿದ್ದಾಗ ಅವರ ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ (ಸುಮ ಲತಾ) ಮಾತನಾಡಿಸಿದ್ದಾರೆ, ಎಷ್ಟು ಜನರಿಗೆ 1 ಗ್ಲಾಸ್ ನೀರು ಕೊಟ್ಟು ಏನಪ್ಪಾ ನಿನ್ನ ಸಮಸ್ಯೆ ಎಂದು ಕೇಳಿದ್ದಾರೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು. ಮದ್ದೂರಿನ ಕೊಳ ಗೆರೆಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಅಂಬರೀಷ್ ಅವರ ಹೆಸರೇಳಿಕೊಂಡು ನಾನೇನೋ ಜಿಲ್ಲೆಯನ್ನು ಉದ್ಧಾರ ಮಾಡುತ್ತೇನೆ ಎಂದು ಬರುತ್ತಿ ದ್ದಾರೆ. ಇಂತಹ ಬಣ್ಣ ಹಚ್ಚುವವರ ಮಾತಿಗೆ ಜಿಲ್ಲೆಯ ಜನರು ಬೆರಗಾಗುವುದು ಬೇಡ. ಬಣ್ಣದವರ ಮಾತಿಗೆ ಬೆರಗಾಗಿ ನಮ್ಮ ಯುವಕರು ಅಂತಹವರನ್ನು ಆಯ್ಕೆ ಮಾಡಿದರೆ ನಿಮ್ಮ ಸರ್ವ ನಾಶಕ್ಕೆ ನೀವೇ ಕಾರಣರಾಗು ತ್ತೀರಿ ಎಂದು ಅವರು ಎಚ್ಚರಿಕೆ ನೀಡಿದರು. ಯಾರಿಗೆ ಸಮಾಜದ ಬಗ್ಗೆ ಕಾಳಜಿ ಇದೆ,
ಯಾರು ಸದಾ ರೈತರ ಬಗ್ಗೆ ಚಿಂತನೆ ನಡೆಸುತ್ತಾರೆ ಎಂಬುದನ್ನು ನೋಡಿ, ಯಾರು ನಮಗೆ ಸ್ಪಂದಿಸುತ್ತಾರೋ ಅಂತಹ ವರನ್ನು ಆಯ್ಕೆ ಮಾಡಿ ಎಂದ ತಮ್ಮಣ್ಣ ಅವರು, ರೈತರ ಮಗನಾದ ನಿಖಿಲ್ ಅವರನ್ನು ಭಾರೀ ಅಂತರದಿಂದ ಲೋಕಸಭೆಗೆ ಆಯ್ಕೆ ಮಾಡುವಂತೆ ಮನವಿ ಮಾಡಿದರು.