ಮರ ಬಿದ್ದು ಮನೆಗಳಿಗೆ ಹಾನಿ: ಸಂತ್ರಸ್ತರಿಗೆ ನೆರವಾಗಲು ಆಗ್ರಹಿಸಿ ಪ್ರತಿಭಟನೆ

ಮೈಸೂರು: ಬೃಹತ್ ಅರಳಿ ಮರ ಬಿದ್ದು ತೀವ್ರವಾಗಿ ಹಾನಿಯಾಗಿರುವ ಮನೆ ಗಳನ್ನು ಪುನರ್ ನಿರ್ಮಿಸಿ ಸಂತ್ರಸ್ತರಿಗೆ ನೀಡು ವಂತೆ ಆಗ್ರಹಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ನೇತೃತ್ವದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಕಾರ್ಯಕರ್ತರು ಶುಕ್ರ ವಾರ ಮೇದರಕೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರಿನ ಬಂಬೂಬಜಾರ್‍ನ ಮೇದರಕೇರಿ ಯಲ್ಲಿ ಕಳೆದ 4 ದಿನದ ಹಿಂದೆ ಅರಳಿ ಮರ ವೊಂದು ಬುಡಸಹಿತ ಬಿದ್ದಿದೆ. ಇದರಿಂದ ಐದಾರು ಮನೆಗಳಿಗೆ ಹಾನಿಯಾಗಿದೆ. ಚಿಕ್ಕ ಚಿಕ್ಕ ಮನೆಗಳ ಗೋಡೆಗಳು ಕುಸಿದಿದ್ದರೂ ನಗರ ಪಾಲಿಕೆ ಅಥವಾ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಾ ಗಲೀ ಭೇಟಿ ನೀಡದೆ, ನಿರ್ಲಕ್ಷ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅವರು ಸ್ಥಳೀಯರೊಂದಿಗೆ ಸೇರಿ ಇಂದು ಪ್ರತಿಭಟನೆ ನಡೆಸಿದರು. ಮನೆ ಕಳೆದುಕೊಂಡವರಿಗೆ ಮನೆ ಯನ್ನು ಪುನರ್ ನಿರ್ಮಿಸಿಕೊಡಬೇಕು. ಕಳೆದ ನಾಲ್ಕು ದಿನಗಳಿಂದ ಬೀದಿಯಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

2006ರಲ್ಲಿ ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು ಮೇದರಕೇರಿಗೆ ಭೇಟಿ ನೀಡಿದ್ದಾಗ ಇಲ್ಲಿನ ನಿವಾಸಿಗಳಿಗೆ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಇದು ವರೆಗೂ ಮನೆ ನಿರ್ಮಿಸಿಕೊಟ್ಟಿಲ್ಲ. ಇದರಿಂದ ಮೇದರ ಕೇರಿಯ ನಿವಾಸಿಗಳು ಚಿಕ್ಕ ಚಿಕ್ಕ ಮನೆಗಳಲ್ಲಿ ವಾಸಿಸು ವಂತಾಗಿದೆ. ಕೂಡಲೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮೇದರಕೇರಿ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಪ್ರಕಟಿಸ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಾದ ಬೋರಪ್ಪಶೆಟ್ಟಿ, ಜೆ.ರಾಬರ್ಟ್, ಚಿಕ್ಕಹನುಮಯ್ಯ, ಶಂಕರ್, ರವಿ, ರಮೇಶ, ಭಾಗ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.