ಚಾಮುಂಡಿಬೆಟ್ಟ ದಾಸೋಹ ಭವನದ ಎದುರಿನ ಕಲ್ಲು ಮಂಟಪದ ಕಂಬಕ್ಕೆ ಹಾನಿ

ಮೈಸೂರು, ಜೂ.26(ಎಸ್‍ಪಿಎನ್)-ಚಾಮುಂಡಿಬೆಟ್ಟದ ಪ್ರಸಾದ ನಿಲಯ ಎದುರಿನ ಉದ್ಯಾನವನದಲ್ಲಿ ಅಭಿವೃದ್ಧಿ ಪಡಿಸಿರುವ ಅಲಂಕಾರಿಕ ಮಂಟಪದ ಕಂಬ ಮುರಿದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಅದನ್ನು ತೆರವು ಗೊಳಿಸುವ ಬದಲು ತೇಪೆ ಹಚ್ಚಿ ಸುಮ್ಮ ನಾಗಿರುವುದಕ್ಕೆ ಜಿಲ್ಲಾಡಳಿತ ವಿರುದ್ದ ಇಲ್ಲಿನ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 15 ದಿನಗಳಿಂದ ಆಷಾಢ ಶುಕ್ರವಾರ ಪೂಜೆಗೆ ಸಕಲ ಸಿದ್ದತೆ ಆರಂ ಭವಾಗಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ನಗರ ಪೊಲೀಸ್ ಆಯು ಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಆದರೆ, ಯಾರೊಬ್ಬರು ಇತ್ತ ಗಮನ ಹರಿಸದಿರುವ ದುರ್ದೈವದ ಸಂಗತಿ ಎಂದು ಇಲ್ಲಿನ ನಿವಾಸಿ ಮಂಜು ಬೇಸರ ವ್ಯಕ್ತಪಡಿಸಿದರು.

ಮುಂದಿನ ತಿಂಗಳಿಂದ ಆರಂಭವಾ ಗುವ ಆಷಾಢ ಶುಕ್ರವಾರ ಪೂಜೆಗೆ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಲಿದ್ದಾರೆ. ಈ ವೇಳೆ ಅಪರಿಚಿತರು ಅರಿಯದೇ ಮುರಿದಿ ರುವ ಮಂಟಪದ ಕೆಳಗೆ ಕುಳಿತುಕೊಂಡ ವರ ಗತಿಯೇನು?. ಏನಾದರೂ ಅನಾ ಹುತ ಸಂಭವಿಸಿದ ನಂತರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ಮೈಸೂರು ಪ್ರವಾಸೋದ್ಯಮ, ಆಧ್ಯಾತ್ಮ, ಯೋಗ, ಸಾಂಸ್ಕøತಿಕವಾಗಿ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ. ಅದರಲ್ಲೂ ನಾಡ ದೇವತೆ ಚಾಮುಂಡೇಶ್ವರಿ ಶಕ್ತಿದೇವತೆ ಯಾಗಿದ್ದು, ಹೊರ ರಾಜ್ಯಗಳಿಂದಲೂ ಆಷಾಢ ಶುಕ್ರವಾರ ಪೂಜೆಗೆ ಲಕ್ಷಾಂತರ ಮಂದಿ ಆಗಮಿಸು ತ್ತಾರೆ. ಆದ್ದರಿಂದ ಅಲಂಕಾರಿಕ ಕಲ್ಲಿಗೆ ತೇಪೆ ಹಚ್ಚಿ ಸುಮ್ಮನಿರುವುದು ಜಿಲ್ಲಾಡಳಿತಕ್ಕೆ ಶೋಭೆ ತರುವುದಿಲ್ಲ. ಚಾಮುಂಡಿಬೆಟ್ಟದಲ್ಲಿ ಒಂದು ಸಣ್ಣ ಅನಾಹುತ ಸಂಭವಿಸಿದರೂ ಅದು ರಾಷ್ಟ್ರದ ಜನತೆ ಗಮನಿಸುತ್ತಾರೆ ಎಂದರು.