ಇಂದು ದಸರಾ ಸಾಂಸ್ಕøತಿಕ ಮೆರವಣಿಗೆ

ಮೈಸೂರು:  ಇದೇ ಮೊದಲ ಬಾರಿಗೆ ಆಯೋಜಿಸಿರುವ ದಸರಾ ಸಾಂಸ್ಕøತಿಕ ಮೆರವಣಿಗೆಗೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಅ.14ರಂದು ಮಧ್ಯಾಹ್ನ 2ಗಂಟೆಗೆ ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಂದಿಧ್ವಜಕ್ಕೆ ಪೂಜೆ ನೆರವೇರಿಸುವರು.ಈ ಭವ್ಯ ಸಾಂಸ್ಕøತಿಕ ಮೆರವಣಿಗೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೇರಿದಂತೆ

ಮತ್ತಿತರ ಗಣ್ಯರು ಭಾಗವಹಿಸುವರು. ಈ ಮೆರ ವಣಿಗೆಯಲ್ಲಿ ಆನೆಗಳು ಸೇರಿದಂತೆ ಹಲವು ಪ್ರಕಾರದ ಕಲಾ ಮತ್ತು ಜನಪದ ನೃತ್ಯ ತಂಡಗಳು, ಯುವ ಸಂಭ್ರಮ ದಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದ ವಿವಿಧ ಕಾಲೇಜು ತಂಡಗಳು, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು, ಪೆÇಲೀಸ್ ಬ್ಯಾಂಡ್, ಮೌಂಟೆಡ್ ಅಶ್ವಾರೋಹಿ ದಳ, ಅರಣ್ಯ ಇಲಾಖೆ ವೈದ್ಯರ ತಂಡ, ಆಂಬುಲೆನ್ಸ್ ದಳ, ಅಗ್ನಿ ಶಾಮಕ ತಂಡಗಳು ಪಾಲ್ಗೊಳ್ಳಲಿವೆ. ಅಷ್ಟೇ ಅಲ್ಲದೆ, ನಂದಿಧ್ವಜ, ನಾದಸ್ವರ, ಕೊಂಬುಕಹಳೆ, ವೀರಗಾಸೆ, ಪೂಜಾ ಕುಣಿತ, ನಾಸಿಕ್ ಡೋಲು, ಕೀಲು ಕುದುರೆ, ಕತ್ತಿವರಸೆ-ದೊಣ್ಣೆವರಸೆ, ಕೋಲಾಟ, ಗಾರುಡಿಗೊಂಬೆ, ಫಲಕ ಕುಣಿತ, ವೀರ ಮಕ್ಕಳ ಕುಣಿತ, ಕಂಸಾಳೆ, ಸೋಮನ ಕುಣಿತ, ಮಾರಿ ಕುಣಿತ, ಗೊರವರ ಕುಣಿತ, ಹುಲಿವೇಷ, ಡೊಳ್ಳು ಕುಣಿತ, ಗೊರಕಾನ ನೃತ್ಯ, ತಮಟೆ ನಗಾರಿ ಸೇರಿದಂತೆ ಮತ್ತಿ ತರೆ ಕಲಾ ತಂಡಗಳು ಭಾಗವಹಿಸಲಿವೆ.