ಹೆಚ್.ಡಿ.ಕೋಟೆಯಲ್ಲಿ ದಸರಾ ಕ್ರೀಡಾಕೂಟ

ಹೆಚ್.ಡಿ.ಕೋಟೆ:  ನವರಾತ್ರಿ ಉತ್ಸವವನ್ನು ದೇಶಾದ್ಯಂತ ನಾನಾ ರೀತಿ ಯಲ್ಲಿ ಮತ್ತು ಸಂಪ್ರದಾಯಕವಾಗಿ ಆಚರಣೆ ಮಾಡಲಾಗುತ್ತದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಗ್ರಾಮೀಣ ದಸರಾ ಅಂಗವಾಗಿ ನಡೆದ ಕಸಬಾ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮೈಸೂರಿನಲ್ಲಿ ದಸರಾವನ್ನು ಕಳೆದ 400ಕ್ಕೂ ಹೆಚ್ಚು ವರ್ಷಗಳ ಹಿಂದಿನಿಂದಲೂ ಅದ್ಧೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹಿಂದೆ ಮೈಸೂರಿನ ರಾಜವಂಶಸ್ಥರು ನಡೆಸುತ್ತಿದ್ದರು. ಈಗ ಸರಕಾರ ನಡೆಸುತ್ತಿದೆ. ಗ್ರಾಮೀಣ ಭಾಗದ ಜನತೆ ಕೂಡ ಮೈಸೂರಿ ನಲ್ಲಿ ನಡೆಯುವ ದಸರಾದಲ್ಲಿ ಭಾಗವಹಿಸ ಬೇಕು ಎನ್ನುವ ಉದ್ದೇಶದಿಂದ ಗ್ರಾಮೀಣಾ ದಸರಾವನ್ನು ಪ್ರಾರಂಭಿಸಲಾಯಿತು. ಈಗ ಅದು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಜಿ.ಪಂ ಅಧ್ಯಕ್ಷೆ ನಯಿಮಾಸುಲ್ತಾನ, ಮಹಿಳೆಯರಿಗೆ ನಡೆದ ನಿಂಬೆಹಣ್ಣು ಮತ್ತು ಚಮಚ ಸ್ಪರ್ಧೆಯಲ್ಲಿ ಭಾಗವಹಿಸಿ, ಕ್ರೀಡಾಪಟು ಗಳನ್ನು ಹುರಿದುಂಬಿಸಿದರು. ಪುರುಷರಿಗೆ ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ, ಗೋಣಿಚೀಲದ ಓಟ, ಮೂರು ಕಾಲಿನ ಓಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ಎತ್ತಿಕೊಂಡು ಓಡುವ ಸ್ವರ್ದೆ, ಚಮಚ ಮತ್ತು ನಿಂಬೆಹಣ್ಣು ಸ್ಪರ್ಧೆ, ಸೂಜಿದಾರ ಸ್ಪರ್ಧೆ ಮತ್ತು ಮೂರು ಕಾಲಿನ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಟಿ. ಗಿರಿಗೌಡ, ಸದಸ್ಯರಾದ ಅಂಕನಾಯಕ, ಸ್ಟಾನ್ಲಿಬ್ರಿಟೋ, ಪುರಸಭೆ ಸದಸ್ಯ ಮಧು, ತಹಸೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ದರ್ಶನ್, ದೈಹಿಕ ಶಿಕ್ಷಣ ಪರಿವೀಕ್ಷಕ ಕಲಿಂ ಮುಲ್ಲಾ, ದೈಹಿಕ ಶಿಕ್ಷಕರಾದ ಧನಂಜಯ, ಶ್ರೀನಿವಾಸ್, ಮಂಜುನಾಥ್, ಮುಖಂಡರಾದ ಪರಶಿವಮೂರ್ತಿ, ಸಿದ್ದರಾಮು ಇದ್ದರು.

ವಿಜೇತರು
ಪುರುಷರು
ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ: ಮಂಜುನಾಥ್, ಬೊಪ್ಪನಹಳ್ಳಿ (ಪ್ರಥಮ), ತ್ಯಾಗರಾಜ್, ಜಕ್ಕಹಳ್ಳಿ(ದ್ವಿತೀಯ). ಕುಮಾರ್, ಹ್ಯಾಂಡ್‍ಪೋಸ್ಟ್ (ತೃತೀಯ).
ಗೋಣಿ ಚೀಲದ ಓಟ: ಹರೀಶ್, ಹ್ಯಾಂಡ್‍ಪೋಸ್ಟ್ (ಪ್ರಥಮ), ಅಂಜನ, ಎಚ್.ಡಿ.ಕೋಟೆ (ದ್ವಿತೀಯ), ವೇಣುಗೋಪಾಲ್, ಸಾಗರೆ(ತೃತೀಯ).
ಮೂರು ಕಾಲಿನ ಓಟ: ಕುಮಾರ ಮತ್ತು ಹರೀಶ್, ಹ್ಯಾಂಡ್ ಪೋಸ್ಟ್(ಪ್ರಥಮ), ವೇಣುಗೋಪಾಲ್ ಮತ್ತು ಪ್ರಸನ್ನ, ಸಾಗರೆ(ದ್ವಿತೀಯ). ಪ್ರಿತಂ ಮತ್ತು ಸಿದ್ದಾರ್ಥ, ಎಚ್.ಡಿ.ಕೋಟೆ (ತೃತೀಯ).

ಮಹಿಳೆಯರು
ನೀರು ಬಿಂದಿಗೆಯನ್ನು ಎತ್ತಿ ಓಡುವ ಸ್ಪರ್ಧೆ: ಮಂಜುಳಾ, ಉದ್ಬೂರು (ಪ್ರಥಮ), ಲೀಲಾವತಿ, ಚಾಮನಹಳ್ಳಿ ಹುಂಡಿ(ದ್ವಿತೀಯ), ಪದ್ಮಾವತಿ, ಪಡುವಕೋಟೆ(ತೃತೀಯ).
ನಿಂಬೆ ಹಣ್ಣು ಮತ್ತು ಚಮಚ: ಲೀಲಾವತಿ, ಚಾಮನಹಳ್ಳಿ ಹುಂಡಿ(ಪ್ರಥಮ), ಇಂದ್ರಮ್ಮ, ಸೋನಹಳ್ಳಿ(ದ್ವಿತೀಯ), ಮಂಜುಳಾ, ಹೆಚ್,ಡಿ.ಕೋಟೆ(ತೃತೀಯ).
ಸೂಜಿ ದಾರ ಸ್ಪರ್ಧೆ: ರೇಣುಕಾ, ಎಚ್.ಡಿ.ಕೋಟೆ(ಪ್ರಥಮ), ಸುಶೀಲಾ, ಎಚ್.ಡಿ. ಕೋಟೆ(ದ್ವಿತೀಯ), ಲೀಲಾವತಿ, ಚಾಮನಹಳ್ಳಿ ಹುಂಡಿ(ತೃತೀಯ).
ಮೂರು ಕಾಲಿನ ಓಟ: ವೀಣಾ ಮತ್ತು ಭಾಗ್ಯ, ಎಚ್.ಡಿ.ಕೋಟೆ (ಪ್ರಥಮ), ರೇಣುಕಾ ಮತ್ತು ಅಂಬಿಕಾ, ಎಚ್.ಡಿ.ಕೋಟೆ(ದ್ವಿತೀಯ), ಲೀಲಾವತಿ ಮತ್ತು ಪದ್ಮಾವತಿ, ಚಾಮನಹಳ್ಳಿ ಹುಂಡಿ(ತೃತೀಯ).