ಜೆಸಿ ಪುರದಲ್ಲಿ ಡಿಸಿ, ಸಿಇಒ ಪ್ರಥಮ ಗ್ರಾಮ ವಾಸ್ತವ್ಯ

ಶಾಸಕರೂ ಭಾಗಿ; ಜನಸಂಪರ್ಕ ಸಭೆಯಲ್ಲಿ ಸಾವಿರಾರು ಅಹವಾಲು

ಹಾಸನ, ಜೂ.19- ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎನ್. ವಿಜಯಪ್ರಕಾಶ್ ಅವರು ಅರಸೀಕೆರೆ ತಾಲೂಕಿನ ಜೆ.ಸಿ.ಪುರದಲ್ಲಿ ಜನಸಂಪರ್ಕ ಸಭೆ ನಡೆಸಿ, ಅಧಿಕಾರಿಗಳ ಜತೆಗೂಡಿ ಗ್ರಾಮ ವಾಸ್ತವ್ಯ ನಡೆಸಿದರು. ಜಿಲ್ಲಾಡಳಿತ ಈ ನೂತನ ಪ್ರಯೋಗಕ್ಕೆ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರೂ ಸಾಥ್ ನೀಡಿದ್ದು ಗಮನ ಸೆಳೆಯಿತು.

ಜಿಲ್ಲಾಧಿಕಾರಿ ಅಕ್ರಂ ಪಾಷ ಅವರ ನೇತೃತ್ವದಲ್ಲಿ ಸರ್ಕಾರಿ ಬಸ್‍ನಲ್ಲೇ ಗ್ರಾಮಕ್ಕೆ ಬಂದ ಅಧಿಕಾರಿಗಳ ದೊಡ್ಡ ತಂಡಕ್ಕೆ ಜೆ.ಸಿ.ಪುರ ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ವಾದ್ಯ ಸಂಗೀತವು ಗ್ರಾಮದಲ್ಲಿ ಹಬ್ಬದ ಸಂಭ್ರಮ ಸೃಷ್ಟಿಸಿತ್ತು. ಮಂಗಳವಾರ ತಡರಾತ್ರಿವರೆಗೂ ಎಚ್ಚರವಿದ್ದ ಸುತ್ತಲ ಗ್ರಾಮಗಳ ಸಾವಿರಾರು ಜನರು ಡಿಸಿ ಮತ್ತು ಸಿಇಒಗೆ ಅಹವಾಲು ಸಲ್ಲಿಸಿದರು.

ಜನಸಂಪರ್ಕ ಸಭೆಯಲ್ಲಿ ಮಾತನಾ ಡಿದ ಶಾಸಕ ಶಿವಲಿಂಗೇಗೌಡ, ಇದು ಅಪರೂಪದ ಕಾರ್ಯಕ್ರಮ. ಅಧಿಕಾರಿಗಳ ಗ್ರಾಮವಾಸ್ತವ್ಯ ಕ್ಷೇತ್ರದ ಜನರ ಪಾಲಿಗೆ ವರವಾಗಿದೆ. ಇದರಿಂದ ಅನೇಕ ಸಮಸ್ಯೆ ಗಳು ಸ್ಥಳದಲ್ಲೇ ಬಗೆಹರಿಯಲಿವೆ. ಅಲ್ಲದೆ ಅಧಿಕಾರಿಗಳಿಗೆ ಸ್ಥಳೀಯ ಸಮಸ್ಯೆಗಳೂ ಅರಿವಾಗಲಿವೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವ ನಿಟ್ಟಿನಲ್ಲಿ ಇದು ಪೂರಕ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜನಸಂಪರ್ಕ ಸಭೆಯಲ್ಲಿ ಸ್ವೀಕರಿಸಿದ ಅರ್ಜಿಗಳಿಗೆ ಜಿಲ್ಲಾಡಳಿತ ಸಮರ್ಪಕ ಸ್ಪಂದಿಸಬೇಕಿದೆ. ಸಮಸ್ಯೆಗಳನ್ನು ಕಾಲ ಮಿತಿಯಲ್ಲಿ ನ್ಯಾಯಸಮ್ಮತವಾಗಿ ಬಗೆಹರಿಸ ಬೇಕಿದೆ. ಅರಸೀಕೆರೆ ತಾಲೂಕು ಆರ್ಥಿಕ ವಾಗಿ ಹಿಂದುಳಿದಿದೆ. ಇಡೀ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿದೆ. ಎತ್ತಿನಹೊಳೆ ಯೋಜನೆ ನೀರನ್ನು ಕ್ಷೇತ್ರಕ್ಕೆ ತರಲು ನಡೆಸಿದ ಯತ್ನ ಫಲ ನೀಡುವ ಹಾದಿಯಲ್ಲಿದೆ. ಆದರೆ, ಬೇಲೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕಾಗಬೇಕು ಎಂದು ಶಾಸಕರು ಜಿಲ್ಲಾಡಳಿತದ ಗಮನ ಸೆಳೆದರು.

ಇಡೀ ಜಿಲ್ಲಾಡಳಿತವೇ ಗ್ರಾಮಕ್ಕೆ ಬಂದು ಸಮಸ್ಯೆ ಅಲಿಸಿ ಬಗೆಹರಿಸುತ್ತಿರುವುದು, ಅಧಿ ಕಾರಿಗಳು ಗ್ರಾಮ ವಾಸ್ತವ್ಯ ನಡೆಸುತ್ತಿರು ವುದು ಅಭಿನಂದನಾರ್ಹ ನಡೆ ಎಂದು ಜಿಪಂ ಅಧ್ಯಕ್ಷೆ ಶ್ವೇತಾ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಜನರ ಬಳಿಗೆ ಹೋಗಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಬಗೆಹರಿಸುವುದೇ ಈ ಕಾರ್ಯಕ್ರಮದ ಆಶಯ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಅಗತ್ಯ ನೆರವು ನೀಡ ಲಾಗುವುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಭೂದಾಖಲೆಗಳ ಸಮಸ್ಯೆ ಗಳನ್ನು ಶೀಘ್ರ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದರು.

ಆಡಳಿತ ವ್ಯವಸ್ಥೆಯೇ ಹಳ್ಳಿಗಳಿಗೆ ತೆರಳಿ ಜನರ ಬೇಡಿಕೆಗಳನ್ನು ಈಡೇರಿಸುವ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಹರನ್ನು ಗುರುತಿಸಿ ಸವಲತÀ್ತು ನೀಡು ವಂತಾಗಬೇಕು. ಪ್ರತಿ ತಾಲೂಕಿನಲ್ಲಿ ಜನ ಸಂಪರ್ಕ ಸಭೆ ನಡೆಸಿ ಕುಂದುಕೊರತೆ ಅರ್ಜಿ ಸ್ವೀಕರಿಸಲಾಗುವುದು. ಆದಷ್ಟೂ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸ ಲಾಗುವುದು ಎಂದರು.

ಗ್ರಾಮ ವಾಸ್ತವ್ಯ ಮತ್ತು ಜನಸಂಪರ್ಕ ಸಭೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಿಕಲ್ಪನೆಯ ಕಾರ್ಯಕ್ರಮಗಳು. ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಾ ಸಾರ್ವಜನಿಕರಿಗೆ ಆಗುವ ಕಷ್ಟ, ವಿಳಂಬ ಸಮಸ್ಯೆ ನಿವಾರಿಸಿ, ಆಡಳಿತ ಯಂತ್ರವನ್ನು ಹೆಚ್ಚು ಕ್ರಿಯಾಶೀಲಗೊಳಿಸುವುದಕ್ಕೆ ನಿಟ್ಟಿ ನಲ್ಲಿ ಇಂತಹ ಕಾರ್ಯಕ್ರಮ ಅನುಕೂಲ ವಾಗಲಿದೆ ಎಂದು ಜಿಪಂ ಸಿಇಒ ವಿಜಯ ಪ್ರಕಾಶ್ ಅಭಿಪ್ರಾಯಪಟ್ಟರು.

ಉಪ ವಿಭಾಗಾಧಿಕಾರಿ ಹೆಚ್.ಎಲ್.ನಾಗ ರಾಜ್, ಸ್ಥಳಿಯ ಜಿಪಂ ಸದಸ್ಯ ಸ್ವಾಮಿ ಮಾತನಾಡಿದರು. ಜಿಪಂ ಸದಸ್ಯರಾದ ಪಟೇಲ್ ಶಿವಪ್ಪ, ವತ್ಸಲಾ ಶೇಖರ್, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಪಂ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ತಹಸೀ ಲ್ದಾರ್ ಪಾಲಾಕ್ಷ ಮತ್ತಿತರರು ಹಾಜರಿದ್ದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ರೈತರಿಗೆ ಋಣಮುಕ್ತ ಪತ್ರ ಸೇರಿದಂತೆ ವಿವಿಧ ಇಲಾಖೆಗಳ ಹಲವು ಯೋಜನೆ ಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಇಇಒ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆ ನಂತರ ಗ್ರಾಮ ದಲ್ಲಿನ ಹಾಸ್ಟೆಲ್‍ನಲ್ಲೇ ರಾತ್ರಿ ಉಳಿದಿದ್ದರು. ಅಧಿಕಾರಿಗಳು ಕಾಲೇಜು ದಿನಗಳು ಹಾಸ್ಟೆಲ್ ವಾಸ ನೆನೆಪಿಸಿಕೊಂಡರು. ಬುಧವಾರ ಬೆಳಿಗ್ಗೆ ಜೆ.ಸಿ.ಪುರರದ ಸರ್ಕಾರಿ ಶಾಲೆ ಹಾಸ್ಟೆಲ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು.