ಮತದಾರರಲ್ಲದವರು ಕ್ಷೇತ್ರ ಬಿಟ್ಟು ತೆರಳಲು ಡಿಸಿ ಸೂಚನೆ

ಹಾಸನ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ದಾನ ಮುಕ್ತಾಯ ಗೊಳ್ಳುವ ಅಂತಿಮ 48 ಗಂಟೆಗಳಿಗೆ ಮುನ್ನ ಮತ ದಾರರಲ್ಲದ ರಾಜಕೀಯ ವ್ಯಕ್ತಿಗಳು ಹಾಗೂ ಕಾರ್ಯ ಕರ್ತರು ಜಿಲ್ಲೆಯಿಂದ ಹೊರ ಹೊಗ ಬೇಕಿದೆ. ಈ ಬಗ್ಗೆ ಲಾಡ್ಜ್ ಮಾಲೀಕರು ಸಹ ಗಮನಿಸಬೇಕಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಶನಿವಾರ ಹೋಟೆಲ್, ಲಾಡ್ಜ್ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿದ ಅವರು, ಅಂತಿಮ 48 ಗಂಟೆಗಳಲ್ಲಿ ಮತದಾರರಲ್ಲದ ರಾಜ ಕೀಯ ಮುಖಂಡರು, ಪ್ರಚಾರಕರು ಕ್ಷೇತ್ರ ಬಿಟ್ಟು ತೆರಳಬೇಕಿದೆ. ಹಾಗಾಗಿ, ಎಲ್ಲಾ ಲಾಡ್ಜ್ ಮಾಲೀಕರು ಏ. 16ರಂದು ಬೆಳಿಗ್ಗೆ ತಮ್ಮ ಹೋಟೆಲ್‍ನಲ್ಲಿ ತಂಗಿರುವವರ ವಿವರ ಒದಗಿಸಬೇಕು ಎಂದು ಸೂಚನೆ ನೀಡಿದರು.

ಎಲ್ಲಾ ಲಾಡ್ಜ್‍ಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಮ್ಮಲ್ಲಿ ತಂಗಿ ರುವ ಈ ಜಿಲ್ಲೆಯ ಮತದಾರರಲ್ಲದ ಪ್ರಚಾ ರಕರಿಗೆ ಇದನ್ನು ವಿವರಿಸಿ ರೂಂ ಗಳನ್ನು ಖಾಲಿ ಮಾಡಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ಜರುಗಿ ಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಸಾಮಾನ್ಯ ಪ್ರವಾಸಿಗರಿಗೆ ತೊಂದರೆ ಮಾಡುವುದು ಅಗತ್ಯವಿಲ್ಲ. ಆದರೆ ಯಾವುದೇ ರಾಜಕಾರಣಿಗಳು, ಪ್ರಚಾರ ಕರು ಅಂತಿಮ 48 ಗಂಟೆಗಳಲ್ಲಿ ಜಿಲ್ಲೆ ಯಲ್ಲಿ ಉಳಿಯುವಂತಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ಎಲ್.ವೈಶಾಲಿ, ನಗರಸಭೆ ಪೌರಾ ಯುಕ್ತೆ ರೂಪಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಮೋದ್ ಮತ್ತಿತರರು ಹಾಜರಿದ್ದರು.

ಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೋ ರೆಕಾರ್ಡಿಂಗ್
ಹಾಸನ: ಜಿಲ್ಲೆಯ ಸೂಕ್ಷ್ಮ ಮತಗಟ್ಟೆಗಳಿಗೆ ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆ ಮಾಡಲಾಗಿದ್ದು, ನಿಯೋಜಿಸಲ್ಪಟ್ಟ ವಿಡಿಯೋಗ್ರಾಫರ್‍ಗಳು ಹೆಚ್ಚಿನ ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಡಿಯೋಗ್ರಾಫರ್‍ಗಳ ಸಭೆ ನಡೆಸಿದ ಅವರು ಇದೊಂದು ಸೂಕ್ಷ್ಮವಾದ ಜವಾಬ್ದಾರಿಯಾಗಿದೆ. ಯಾವುದೇ ಲೋಪಗಳಾಗದಂತೆ ಕೆಲಸ ನಿರ್ವಹಿಸಿ ಎಂದು ಸಲಹೆ ನೀಡಿದರು.

ಬೆಳಿಗ್ಗೆ ನಡೆಯುವ ಅಣಕು ಮತದಾನದಿಂದ ಸಂಜೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೆ ಎಲ್ಲಾ ಘಟನೆಗಳನ್ನು ದಾಖಲಿಸಿ. ಮತಗಟ್ಟೆ ಅಧಿಕಾರಿಗಳು ಸೂಚನೆಗಳನ್ನು ಪಾಲಿಸಿ ಕರ್ತವ್ಯ ನಿರ್ವಹಿಸಿ ಎಂದರು.