ಜನನ-ಮರಣ ಪ್ರಮಾಣ ಪತ್ರ ಮೊದಲ ಪ್ರತಿ ಉಚಿತವಾಗಿ ನೀಡಲು ಡಿಸಿ ಸೂಚನೆ

ಮೈಸೂರು: ಸಾರ್ವಜನಿಕರಿಗೆ ಜನನ-ಮರಣ ನೋಂದಣಿದಾರರು ನೋಂದಾಯಿಸಿದ ಘಟನೆಯ ಮೊದಲ ಪ್ರತಿಯನ್ನು ಕಡ್ಡಾಯವಾಗಿ ಮುದ್ರಿಸಿ ಉಚಿತವಾಗಿ ನೀಡುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಬುಧವಾರ ನಡೆದ ಜನನ-ಮರಣ ನೋಂದಣಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ನಡೆಯುತ್ತಿರುವ ಜನನ-ಮರಣ ನೋಂದಣಿ ಪ್ರಕ್ರಿಯೆ ಶೇ.100ರಷ್ಟು ಪ್ರಗತಿ ಸಾಧಿಸಿರು ವುದಿಲ್ಲ. ತಡವಾಗಿ ನೋಂದಣಿ ಪ್ರಕರಣ ಗಳನ್ನು ತಪ್ಪಿಸಲು ಹೆಚ್ಚು ಹೆಚ್ಚು ಪ್ರಚಾರ ಪಡಿಸಿ ಅರಿವು ಮೂಡಿಸುವುದು ಸೂಕ್ತ ವೆಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು. ದತ್ತು ಸ್ವೀಕರಿಸುವ ಮಕ್ಕಳ ನೋಂದಣಿ, ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ಹಾಗೂ ದ್ವಿಪತ್ನಿ ಹೆಸರು ಸೇರ್ಪಡೆ ಇನ್ನಿತರ ಸೂಕ್ಷ್ಮ ವಿಚಾರಗಳನ್ನು ನೋಂದಣಿ ನಿಯಮ ಹಾಗೂ ಸರ್ಕಾರದ ಸುತ್ತೋಲೆಗಳ ಅನು ಸಾರ ಕ್ರಮವಹಿಸುವಂತೆ ತಿಳಿಸಿದರು. ಮರಣ ಘಟನೆಗಳ ನೋಂದಣಿ ಮಾಡುವಾಗ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದು ನಮೂದಿಸಬೇಕು. ಈ ಸಂಬಂಧ ಆಧಾರ್ ನೋಂದಣಿ ಕಡ್ಡಾಯ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.

ಅಸ್ವಾಭಾವಿಕ ಮರಣ ಸಂದರ್ಭದಲ್ಲಿ ಪ್ರಥಮ ವರ್ತಮಾನ ಪತ್ರಕ್ಕೆ ಹಾಗೂ ಪೋಸ್ಟ್ ಮಾರ್ಟಂ ವರದಿಯಲ್ಲಿ ಮರಣ ಸ್ಥಳ ಹಾಗೂ ದಿನಾಂಕವನ್ನು ಸ್ವಷ್ಟವಾಗಿ ನೋಂದಣಾ ಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿ ರಿಜಿಸ್ಟರ್‍ನಲ್ಲಿ ನಮೂದಿಸಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಡಾ.ಬಸವರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ. ರಾಧಾ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಮ್ಮ, ಸಹಾಯಕ ಸಾಂಖ್ಯಿಕ ಅಧಿಕಾರಿ ರಂಗಸ್ವಾಮಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.