ಸಾಲ ಬಾಧೆ: ಮುಂದುವರೆದ ರೈತ ಆತ್ಮಹತ್ಯೆ

ಮಂಡ್ಯ: ಸಾಲಬಾದೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂ ಕಿನ ಕನ್ನಲಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗ್ರಾಮದ ದೊಡ್ಡಚನ್ನಯ್ಯನವರ ಮಗ ಕರಿಚನ್ನಯ್ಯ (49) ಎಂಬಾತನೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತ.

ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನು ಹೊಂದಿದ್ದ ಕರಿ ಚನ್ನಯ್ಯ ಕೃಷಿ ಚಟುವಟಿಕೆಗಾಗಿ ಮದ್ದೂರಿನ ಗ್ರಾಮೀಣ ಕೂಟದಲ್ಲಿ 50 ಸಾವಿರ, ಗ್ರಾಮದ ವಿಎಸ್‍ಎಸ್‍ಎನ್‍ಬಿಯಲ್ಲಿ 30 ಸಾವಿರ, ಖಾಸಗಿಯಾಗಿ 2.20 ಲಕ್ಷ ಸೇರಿದಂತೆ ಒಟ್ಟಾರೆ 3 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಕೊಂಡಿದ್ದರು. ಜಮೀನಿನಲ್ಲಿ ಬೆಳೆದ ಬೆಳೆಯೂ ನಷ್ಟವಾಗಿದ್ದು, ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದರಿಂದ ಮನನೊಂದಿದ್ದ ಕರಿಚನ್ನಯ್ಯ ಪತ್ನಿ ಬಳಿ ವ್ಯವಸಾಯದ ಕುರಿತು ಅಸಮಾಧಾನ ಹೊರಹಾಕಿದ್ದರೆನ್ನಲಾಗಿದೆ. ಭಾನುವಾರ ರಾತ್ರಿ 8.30ರ ಸಮಯದಲ್ಲಿ ತನ್ನ ಮನೆಯ ಅಡುಗೆ ಮನೆಯಲ್ಲಿ ಮರದ ತೊಲೆಗೆ ನೇಣು ಬಿಗಿದುಕೊಂಡಿದ್ದರು. ಸ್ವಲ್ಪ ಸಮಯದ ಬಳಿಕ ಮನೆಯ ಒಳಗೆ ಹೋದ ಪತ್ನಿ ಜಯಲಕ್ಷ್ಮಮ್ಮ ಪತಿ ನೇಣು ಕಿರುಚಿ ಕೊಂಡಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಆಗಮಿಸಿ ಹಗ್ಗ ತುಂಡರಿಸಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.