ಅಭಿವೃದ್ಧಿ ಕೈಗೊಂಡ ಕಾಂಗ್ರೆಸ್‍ಗೆ ಸೋಲು: ಆರ್.ಧ್ರುವನಾರಾಯಣ್ ತೀವ್ರ ವಿಷಾದ

ಮೈಸೂರು,ಆ.3(ಪಿಎಂ)- ಚಾಮರಾಜನಗರ ಮಾತ್ರವಲ್ಲ, ಇಡೀ ದೇಶದಲ್ಲಿ ಬಿಜೆಪಿ ಜಾತಿ-ಧರ್ಮದ ಆಧಾರದಲ್ಲಿ ಪ್ರಚೋದನೆ ಮೂಲಕ ಕಳೆದ ಲೋಕಸಭಾ ಚುನಾವಣೆ ಎದುರಿಸಿ ಯಶಸ್ಸು ಗಳಿಸಿತು. ಅಭಿವೃದ್ಧಿ ಮಾನದಂಡದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಜನತೆ ಮನ್ನಣೆ ನೀಡಲಿದ್ದಾರೆ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ವರುಣಾ ಮತ್ತು ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ ವರುಣಾ ವಿಧಾನಸಭಾ ಕ್ಷೇತ್ರದ ಮತ ದಾರರಿಗೆ ಶನಿವಾರ ಹಮ್ಮಿಕೊಂಡಿದ್ದ ಕೃತ ಜ್ಞತೆ ಮತ್ತು ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.

ಇಡೀ ದೇಶದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಆಧಾರದಲ್ಲಿ ಲೋಕಸಭಾ ಚುನಾವಣೆ ಎದು ರಿಸಿತು. ಆದರೆ ಬಿಜೆಪಿ ಜಾತಿ-ಧರ್ಮದ ಹೆಸರೇಳಿ ಜನರನ್ನು ಪ್ರಚೋದನೆಗೆ ಒಳ ಪಡಿಸಿ ಸುಲಭವಾಗಿ ಮತದಾರರ ಮನವೊ ಲಿಸಿ ಯಶಸ್ವಿಯಾಯಿತು. ಜೊತೆಗೆ ಪುಲ್ವಾಮ ದಾಳಿಗೆ ಪ್ರತಿದಾಳಿ ನಡೆಸಿದ್ದೇವೆ. ನರೇಂದ್ರ ಮೋದಿಯವರೇ ದೇಶ ಆಳಲು ಸಮರ್ಥರು ಎನ್ನುವಂತೆ ಬಿಂಬಿಸಿ ಪ್ರಚಾರ ಮಾಡಿ ದರು. ಬಿಎಸ್‍ಪಿ ಕೂಡ ಮಾಯಾವತಿ ಪ್ರಧಾನಿ ಅಭ್ಯರ್ಥಿ ಎಂದು ಚುನಾವಣೆ ಎದುರಿಸಿತು. ಆದರೆ ಅಭಿವೃದ್ಧಿ ಹೆಸರಿ ನಲ್ಲಿ ಚುನಾವಣೆ ಎದುರಿಸಿದ ಏಕೈಕ ಪಕ್ಷ ಕಾಂಗ್ರೆಸ್. ಮುಂದೆ ಕಾಂಗ್ರೆಸ್ ಪಕ್ಷಕ್ಕೆ ದೇಶದ ಜನತೆ ಮನ್ನಣೆ ನೀಡಲಿದ್ದಾರೆ ಎಂದು ನನಗೆ ನಂಬಿಕೆ ಇದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ 79 ಸಾವಿರ ಮತ ಬಂದಿದ್ದು, 9 ಸಾವಿರ ಲೀಡ್ ಸಿಕ್ಕಿದೆ. ಇದಕ್ಕಾಗಿ ಕ್ಷೇತ್ರದ ಜನತೆ ಹಾಗೂ ಶಾಸಕರನ್ನು ಅಭಿನಂದಿಸುತ್ತೇನೆ. ಆದರೆ 2009 ಹಾಗೂ 2014ರ ಚುನಾ ವಣೆಯಲ್ಲಿ ವ್ಯಕ್ತವಾದ ಅಭೂತಪೂರ್ವ ಬೆಂಬಲ ದೊರೆಯಲಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿ ಸ್ವಕ್ಷೇತ್ರ ವರುಣಾ ಅಭಿ ವೃದ್ಧಿಗೆ ನಾಂದಿ ಹಾಡಿದ್ದರು. ಆ ಬಳಿಕ ಡಾ. ಯತೀಂದ್ರ ಕೂಡ ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡಿದ್ದರು. ಹೀಗಾಗಿ ಈ ಕ್ಷೇತ್ರದ ವಿಚಾರ ದಲ್ಲಿ ಅತಿಯಾದ ಆತ್ಮವಿಶ್ವಾಸ ನಮ್ಮಲ್ಲಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಮತಗಳು ಬರಲಿಲ್ಲ ಎಂದು ವಿಷಾದಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಕೇವಲ ಒಂದು ಸೀಟು ಗೆದ್ದಿದ್ದು, ಈ ಮಟ್ಟದ ಹಿನ್ನಡೆ ಎಂದೂ ಆಗಿರಲಿಲ್ಲ. ಹೀಗಾಗಿ ಸೋಲಿನ ಕಾರಣ ತಿಳಿಯಲು ಸಮಿತಿ ರಚಿಸಿದ್ದು, ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯ. ಈಗಾಗಲೇ ರಾಜ್ಯದ 18 ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಪೂರ್ಣ ಗೊಳಿಸಲಾಗಿದೆ. ಗುಲ್ಬರ್ಗದಲ್ಲಿ ಮಲ್ಲಿ ಕಾರ್ಜುನ ಖರ್ಗೆ ಉತ್ತಮವಾಗಿ ಕೆಲಸ ಮಾಡಿದ್ದರೂ ಪರಾಜಿತರಾದರು. ಅವರ ಪುತ್ರ ಪ್ರಿಯಾಂಕ ಖರ್ಗೆ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಹಿನ್ನಡೆ ಯಾಯಿತು ಎಂದು ಧ್ರುವನಾರಾಯಣ್ ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಎರಡು ಬಾರಿ ಸಂಸದರಾಗಿ ಧ್ರುವನಾರಾ ಯಣ್ ಜನರ ನಡುವೆ ಇದ್ದು ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಆದರೂ ಈ ಬಾರಿ ಸೋಲು ಕಾಣಬೇಕಾಯಿತು. ಸ್ಥಳೀಯ ಮುಖಂಡರ ಆಂತರಿಕ ಭಿನ್ನಾಭಿ ಪ್ರಾಯ, ಜಾತಿ ವಿಷಯ, ದಲಿತ ಸಮು ದಾಯದ ಯುವಜನರು ಬಿಎಸ್‍ಪಿಯತ್ತ ಒಲವು ತೋರಿದ್ದು ಸೇರಿದಂತೆ ಹತ್ತು ಹಲವು ಕಾರಣಗಳು ಇರಬಹುದು ಎಂದರು.

ರಾಜ್ಯದಲ್ಲಿ ಬಿಜೆಪಿ ಅಪಪ್ರಚಾರದಿಂದ 25 ಸೀಟು ಗೆದ್ದಿದೆ. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಆರ್ಥಿಕ ಪ್ರಗತಿ ಯಲ್ಲಿ ದೇಶ 3ನೇ ಸ್ಥಾನದಲ್ಲಿತ್ತು. ಆದರೆ ಈಗ 7 ಸ್ಥಾನಕ್ಕೆ ಕುಸಿದಿದೆ. ಮಾಹಿತಿ ಹಕ್ಕು ಕಾಯ್ದೆ ದುರ್ಬಲಗೊಳಿಸಲಾಗಿದೆ. ದೇಶ ದಲ್ಲಿ ಕೋಮುದ್ವೇಷ ವ್ಯಾಪಿಸುತ್ತಿದೆ. ಮೋದಿ ಸರ್ಕಾರ ದೇಶವನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿದರು. ವಿಧಾನ ಪರಿ ಷತ್ ಸದಸ್ಯ ಆರ್.ಧರ್ಮಸೇನ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಎಸ್.ಸಿ. ಬಸವರಾಜು, ಗುರುಪಾದಸ್ವಾಮಿ, ರಂಗ ಸ್ವಾಮಿ ಸೇರಿದಂತೆ ವರುಣಾ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.