ಬಿಎಸ್‍ಎನ್‍ಎಲ್‍ಗೆ 4ಜಿ ಸೇವೆ ನೀಡಿ, ಖಾಸಗೀಕರಣ ನಿಲ್ಲಿಸುವಂತೆ ಆಗ್ರಹಿಸಿ ರಸ್ತೆ ಜಾಥಾ

ಹಾಸನ: 4ಜಿ ಸೇವೆಯನ್ನು ಬಿಎಸ್ ಎನ್‍ಎಲ್‍ಗೆ ನೀಡಿ, ಖಾಸಗೀಕರಣವನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಸಮಸ್ತ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಮಧ್ಯಾಹ್ನ ರಸ್ತೆ ಜಾಥಾ ನಡೆಸಿ ಒತ್ತಾಯಿಸಿದರು.

ನಗರದ ಬಿಎಸ್‍ಎನ್‍ಎಲ್ ಕಚೇರಿ ಯಿಂದ ಹೊರಟ ಜಾಥಾ ಬಿ.ಎಂ. ರಸ್ತೆ ಮೂಲಕ ಎನ್.ಆರ್. ವೃತ್ತದಿಂದ ವಾಪಸ್ ಕಚೇರಿಗೆ ಬಂದ ಅವರು, ದೂರ ಸಂಪರ್ಕ ಇಲಾಖೆಗೆ ಸಮಾರು 150 ವರ್ಷಗಳ ಇತಿಹಾಸವಿದೆ. ದೇಶದ ಪ್ರಗತಿಗೆ ತನ್ನದೇ ಆದ ಸೇವೆಯ ಮೂಲಕ ಶ್ರಮಿಸುತ್ತಿದ್ದು, ವೈಜ್ಞಾನಿಕ ಬೆಳವಣಿಗೆಗೆ ಅನುಗುಣವಾಗಿ ತನ್ನನ್ನು ಹೊಂದಿಸಿಕೊಂಡು ಸೇವೆ ಸಲ್ಲಿ ಸುತ್ತಾ ವಿಶೇಷವಾಗಿ ಯುದ್ಧ ಮತ್ತು ನೈಸ ರ್ಗಿಕ ವಿಕೋಪಗಳ ಸಮಯದಲ್ಲಿ ಮುಂಚೂಣಿ ಯಲ್ಲಿರುವ ಸಂಸ್ಥೆಯಾಗಿದೆ ಎಂದರು. ಬಿಎಸ್‍ಎನ್‍ಎಲ್ ಶೇ.100ರಷ್ಟು ಸರಕಾರಿ ಸೌಮ್ಯದ ಕಂಪನಿಯಾಗಿದ್ದು, ಪ್ರತಿಯೊಂದು ನೀತಿ, ನಿರ್ಧಾರಗಳು ಕೇಂದ್ರ ಸರ್ಕಾರದ ಆಣತಿಯಂತೆ ನಡೆಯುತ್ತದೆ ಎಂದು ಹೇಳಿದರು.

ಹೊಸ ದೂರಸಂಪರ್ಕ ನೀತಿಯಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಲಾಯಿತು. ಖಾಸಗಿ ಕಂಪನಿಗಳಿಗೆ ವಿಶೇಷ ಉತ್ತೇಜನ ನೀಡಿ, ಬಿಎಸ್‍ಎನ್‍ಎಲ್‍ಗೆ ಆದ್ಯತೆ ಕಡಿಮೆ ಮಾಡಲಾಯಿತು. ಖಾಸಗಿ ಕಂಪನಿಗಳೊಂದಿಗೆ ಮುಕ್ತ ಪೈಪೋಟಿ ನೀಡಲು ಹೊಸ ತಂತ್ರಜ್ಞಾನ ಬಳಸಿಕೊಳ್ಳಲು, ನವೀನ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಅನುಮತಿಯನ್ನು ಸಕಾಲಕ್ಕೆ ನೀಡಲಿಲ್ಲ ಎಂದ ಅವರು ಪ್ರಾರಂಭದಲ್ಲಿ ಮೊಬೈಲ್ ಸೇವೆಗೆ ಖಾಸಗಿಯವರಿಗೆ ಮಾತ್ರ ಅವಕಾಶ ನೀಡಿ, ಬಿ ಬಿಎಸ್‍ಎನ್ ಎಲ್‍ಗೆ ಅನುಮತಿ ನಿರಾಕರಿಸಲಾಯಿತು ಎಂದು ದೂರಿದರು. ಖಾಸಗಿ ಕಂಪನಿ ಯವರು ಪ್ರಾರಂಭದಲ್ಲಿ ಹೊರ ಹೋಗುವ ಕರೆಗಳೀಗೆ 15 ರೂ ಮತ್ತು ಒಳ ಬರುವ ಕರೆಗೆ ರೂ 5 ಶುಲ್ಕ ವಿಧಿಸಿ ಲಾಭ ಮಾಡಿಕೊಂಡರು.

6 ವರ್ಷಗಳ ನಂತರ ಬಿಎಸ್‍ಎನ್ಎಲ್‍ಗೆ ಅನುಮತಿ ನೀಡಿದ ನಂತರ ದೇಶದ ಮೊಬೈಲ್ ಕ್ಷೇತ್ರದಲ್ಲಿ ಪೈಪೋಟಿ ಕಾಣಿಸಿ ಕೊಂಡು ಆತ್ಯಂತ ಅಗ್ಗದ ದರದಲ್ಲಿ ಮೊಬೈಲ್ ಸೇವೆ ಜನರಿಗೆ ಸಿಗುವಂತಾಯಿತು. ಆದರೆ ಬಿ.ಎಸ್.ಎನ್.ಎಲ್‍ಗೆ ಮೊಬೈಲ್ ಕ್ಷೇತ್ರದಲ್ಲಿ ಅಡ್ಡಗಾಲನ್ನು ಪದೇ ಪದೇ ಹಾಕಿ ಮೊಬೈಲ್ ಸೇವೆಯ ವಿಸ್ತರಣೆ ಯನ್ನು ತಡೆಹಿಡಿಯಲಾಯಿತು. 2ಜಿ ತರಂಗಾಂತರ ಹಂಚುವಿಕೆಯಲ್ಲಿ ಖಾಸಗಿ ಯವರಿಗೆ ಅತ್ಯಂತ ಕಡಿದು ದರದಲ್ಲಿ ನೀಡಿ, ಅವರಿಗೆ ಅನುಕೂಲಮಾಡಿಕೊಡಲಾಯಿತು. ಜಿ ತರಂಗಾಂತರ ಹಂಚುವಿಕೆಯ ಬಿ.ಎಸ್.ಎನ್.ಎಲ್‍ಗೆ ಯಾರಿಗೂ ಬೇಡವಾದ ತರಂಗಾತರಗಳನ್ನು ನೀಡಲಾಯಿತು ಎಂದರು.

ಬಿಎಸ್‍ಎನ್‍ಎಲ್ ನಷ್ಟವಾಗಲು ಪ್ರಮುಖ ಕಾರಣವಾದ ಗ್ರಾಮಾಂತರ ಸೇವೆಯನ್ನು ದೇಶದಲ್ಲಿ ನಿರ್ವಹಿಸಿ ಸರಕಾರದ ಸಾಮಾಜಿಕ ನ್ಯಾಯ ಹಾಗೂ ಸರಕಾರಿ ಪ್ರಾಯೋಜಿತ ಸೇವೆಗಳನ್ನು ನೀಡುವ ಪ್ರಮುಖ ಜವಾಬ್ದಾರಿ ಬಿಎಸ್‍ಎನ್‍ಎಲ್‍ಗೆ ನೀಡಿತ್ತು. 4ಜಿ ಸೇವೆಗೆ ವಿಶೇಷ ಧನ ಸಹಾಯವನ್ನು ಬಿಎಸ್‍ಎನ್‍ಎಲ್‍ಗೆ ಮಾತ್ರ ನೀಡಬೇಕಿತ್ತು ಆದರೆ ಸರ್ಕಾರ ಈ ಸಹಾಯವನ್ನು ಖಾಸಗಿ ಕಂಪನಿಗಳಿಗೆ ಹಂಚಿಕೊಡಲು ಆದೇಶಿಸಿತು. ಎಲ್ಲಾ ಖಾಸಗಿ ಕಂಪನಿಗಳಿಗೆ 4ಜಿ ಸೇವೆಗೆ ಅವಕಾಶ ನೀಡಲಾಗಿದ್ದರೂ, ಬಿಎಸ್ಎನ್‍ಎಲ್‍ಗೆ ಇದುವರೆಗೂ ಅವಶ್ಯಕವಾದ ತರಂಗಾಂತರವನ್ನು ನೀಡಲಿಲ್ಲ.

ದೇಶದಲ್ಲಿ ಅತ್ಯುನ್ನತ ಸೇವೆಯನ್ನು ಆತೀ ಕಡಿಮೆ ಬೆಲೆಗೆ ನೀಡಬೇಕೆಂದು ದೂರ ಸಂಪರ್ಕ ಅತಿ ಕಡಿಮೆ ಬೆಲೆಗೆ ನೀಡ ಬೇಕೆಂದು ದೂರಸಂಪರ್ಕ ನೀತಿಯಂತೆ ಬಿ.ಎಸ್.ಎನ್.ಎಲ್. ಕಾರ್ಯ ನಿರ್ವಹಿ ಸುತ್ತಿದೆ. ನೌಕರರೆ ಸ್ವಯಂ ಪ್ರೇರಿತವಾಗಿ ಆಡಳಿತ ವರ್ಗದ ಅನೇಕ ಸಹಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ದುಡಿಯುತ್ತಿದ್ದರೂ ಖಾಸಗಿ ಯವರ ಪೈಪೋಟಿಯನ್ನು ಎದುರಿಸ ಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಕೈಗೆಟಕುವ ರೀತಿಯಲ್ಲಿ ದೂರಸಂಪರ್ಕ ಸೇವೆ ಸಿಗಬೇಕಾದರೇ ಪ್ರಬಲ ಸರಕಾರಿ ಕಂಪನಿ ಅತ್ಯವಶ್ಯಕ ಎನ್ನುವುದನ್ನು ಜನತೆಗೆ ನಿವೇದಿಸಲು ನಾವು ಈ ರಸ್ತೆ ಜಾಥಾ ಮೂಲಕ ಹೊರಟಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಅಧಿಕಾರಿ ಮತ್ತು ಅಧಿಕಾರೇತರ ನೌಕರರ ಸಂಘಟನೆಗಳ ಒಕ್ಕೂಟ, ಆಲ್ ಯೂನಿ ಯನ್ಸ್ ಹಾಗೂ ಅಸೋಸಿಯೇಷನ್ಸ್ ಆಫ್ ಬಿಎಸ್‍ಎನ್‍ಎಲ್ ನೌಕರರ ಯೂನಿ ಯನ್ ಜಿಲ್ಲಾ ಕಾರ್ಯದರ್ಶಿ ಗೋವಿಂದೇ ಗೌಡ, ಎನ್.ಎಫ್.ಟಿ.ಇ. ಜಿಲ್ಲಾ ಕಾರ್ಯ ದರ್ಶಿ ರಾಜ, ಎಐಬಿಎಸ್‍ಎನ್‍ಎಲಿಎ ಕಾಂತ ರಾಜನ್, ಎನ್.ಎನ್.ಇ.ಎ. ಜಿಲ್ಲಾ ಕಾರ್ಯ ದರ್ಶಿ ರುದ್ರೇಶ್ ಇತರರು ಉಪಸ್ಥಿತರಿದ್ದರು.