ಬಡ್ತಿ ಮೀಸಲಾತಿ ಕಾಯ್ದೆ-2017 ಜಾರಿಗೆ ಆಗ್ರಹ : ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಚಾಮರಾಜನಗರ: ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆ ವಿಸ್ತರಿಸುವ ಕಾಯ್ದೆ-2017 ಅನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ಶನಿವಾರ ಕರ್ನಾ ಟಕ ರಾಜ್ಯ ಸರ್ಕಾರಿ ಎಸ್‍ಸಿ, ಎಸ್‍ಟಿ ನೌಕ ರರ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿ ಹಾಗೂ ದಲಿತಪರ ಸಂಘಟನೆಗಳ ಪದಾ ಧಿಕಾರಿಗಳು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಮುಂಭಾಗ ಸಮಾ ವೇಶಗೊಂಡ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಬಳಿಕ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯಿತ್ರಿ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬಿ.ಕೆ.ಪವಿತ್ರ ಪ್ರಕರಣದಲ್ಲಿ ನ್ಯಾಯಾಲಯವು ಕೋರಿದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡುವಲ್ಲಿ ವಿಫಲವಾಗಿದೆ. ಈ ಕಾರಣದಿಂದ ಸುಪ್ರೀಂ ಕೋರ್ಟ್ ತೀರ್ಪಿನಿಂದ ತೊಂದರೆಗೆ ಸಿಲುಕಿದ ಎಸ್‍ಸಿ, ಎಸ್‍ಟಿ ಅಧಿಕಾರಿ, ನೌಕರರ ಹಿತ ಕಾಯಲು ಬಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಉದ್ದೇ ಶದಿಂದ ರೂಪಿಸಿರುವ 2017ರ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರವು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಆದರೆ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕಾಯ್ದೆಯನ್ನು ಅನುಷ್ಠಾನಗೊಳಿಸದೆ ನ್ಯಾಯಾಲಯದಲ್ಲಿ ನಿಂದನಾ ಅರ್ಜಿ ಬಾಕಿ ಇದೆ ಎಂದು ಹೇಳಿ ದಲಿತ ವರ್ಗದ ಅಧಿಕಾರಿ, ನೌಕರರ ಬಗ್ಗೆ ದಮನಕಾರಿ ನೀತಿ ಅನುಸರಿಸುತ್ತಿರುವುದು ಖಂಡನೀಯ. ಕೂಡಲೇ ರಾಜ್ಯ ಸರ್ಕಾರ ಕಾಯ್ದೆಯನ್ನು ಅನುಷ್ಠಾನಗೊಳಿಸಿ ಎಸ್‍ಸಿ, ಎಸ್‍ಟಿ ಅಧಿಕಾರಿ, ನೌಕಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ತೀರ್ಪಿನ ಹಿನ್ನೆಲೆಯಲ್ಲಿ ಪರಿಷ್ಕರಿಸಿರುವ ಎಲ್ಲಾ ಜೇಷ್ಠತಾ ಪಟ್ಟಿಗಳು ರದ್ದಾಗುವುದರಿಂದ ಸದರಿ ಜೇಷ್ಠತೆ ಆಧರಿಸಿ ನೀಡ ಲಾಗಿರುವ ಎಲ್ಲಾ ಮುಂಬಡ್ತಿಗಳನ್ನು ಮತ್ತು ಹಿಂಬಡ್ತಿಗಳನ್ನು ಕೂಡಲೇ ರದ್ದುಪಡಿಸು ವುದು. ಬಡ್ತಿ ಮೀಸಲಾತಿ ಹಾಗೂ ಜೇಷ್ಠತೆ ಯನ್ನು ಸಂರಕ್ಷಿಸುವ 2017ರ ಕಾಯ್ದೆ ಪ್ರಕಾರ ಎಲ್ಲಾ ಇಲಾಖೆಗಳು 1978 ಮೀಸ ಲಾತಿ ಆದೇಶದ ಅನ್ವಯ ಬಡ್ತಿ ನೀಡಿರು ವುದನ್ನು ರದ್ದುಪಡಿಸಿಕೊಳ್ಳಲು ಜೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಿ ಪುನರ್ ಪ್ರಕ ಟಿಸಲು ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಬಿ.ಕೆ.ಪವಿತ್ರ ಪ್ರಕರಣದಲ್ಲಿ ನ್ಯಾಯಾ ಲಯದ ಆದೇಶ ಹಾಗೂ ಸರ್ಕಾರದ ಆದೇಶ ಉಲ್ಲಂಘಿಸಿ ಜೇಷ್ಠತೆ ಪರಿಷ್ಕರಿಸಿ ಹಿಂಬಡ್ತಿ ನೀಡಲು ಕಾರಣವಾಗಿರುವ ಅಧಿಕಾರಿ, ನೌಕಕರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿ ಯಾವುದೇ ನಿಂದನಾ ಅರ್ಜಿ ಇಲ್ಲದಿ ದ್ದರೂ ರಾಷ್ಟ್ರಪತಿಗಳು ಅಂಕಿತ ಹಾಕಿರುವ ಕಾಯ್ದೆಯನ್ನು ಜಾರಿ ಮಾಡಲು ಬೇಡ ಎಂದು ಅಭಿಪ್ರಾಯ ನೀಡುತ್ತಿರುವ ವಕೀಲ ರಾದ ಉದಯ್‍ಹೊಳ್ಳ ಅವರನ್ನು ಅಡ್ವೋ ಕೇಟ್ ಜನರಲ್ ಹುದ್ದೆಯಿಂದ ವಜಾ ಮಾಡ ಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೈ.ಕೆ.ಮೋಳೆಯ ಉರಿ ಲಿಂಗಿಪೆದ್ದಿ ಮಠರ ಉಪಶಾಖೆಯ ಮಹ ದೇವಸ್ವಾಮೀಜಿ, ಸಮನ್ವಯ ಸಮಿತಿ ಗೌರವ ಅಧ್ಯಕ್ಷ ಸಿ.ಮಹದೇವು, ಅಧ್ಯಕ್ಷ ಎ.ಶಿವಣ್ಣ, ಉಪಾಧ್ಯಕ್ಷ ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕೆ.ರಾಮಸ್ವಾಮಿ, ಕಾರ್ಯ ದರ್ಶಿ ಎ.ಎನ್.ಗಜೇಂದ್ರ, ಕೋಶಾಧ್ಯಕ್ಷ ರಾಜು, ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಚಂದ್ರು, ಶ್ರೀನಿವಾಸ, ಸಿ.ಎಂ.ಕೃಷ್ಣಮೂರ್ತಿ, ಆಲೂರು ನಾಗೇಂದ್ರ, ಕೆ.ಎಂ.ನಾಗರಾಜು, ಶಿವಣ್ಣ, ಪರ್ವತ್‍ರಾಜ್, ಸಿದ್ದರಾಜು, ಪ್ರಕಾಶ್, ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾ ಯಣ್, ಪಿ.ಸಂಘಸೇನಾ ಪಾಲ್ಗೊಂಡಿದ್ದರು.