ವಿರಾಜಪೇಟೆ-ಮಾಕುಟ್ಟ ಮಾರ್ಗದಲ್ಲಿ ಮಿನಿಬಸ್ ಸಂಚಾರಕ್ಕೆ ಒತ್ತಾಯ

ಪೊನ್ನಂಪೇಟೆ:  ಕಳೆದ ಜೂನ್ ತಿಂಗಳಲ್ಲಿ ಸಂಭವಿಸಿದ ಮಹಾಮಳೆಯ ದುರಂತದಿಂದಾಗಿ ತೀವ್ರ ಹಾನಿಗೊಂಡು ಇದೀಗ ಭಾರಿ ವಾಹನಗಳ ಸಂಚಾರ ನಿಷೇದಿಸಿರುವ ವಿರಾಜಪೇಟೆ- ಮಾಕುಟ್ಟ ಮಾರ್ಗದಲ್ಲಿ ಜನರ ಅನುಕೂಲಕ್ಕಾಗಿ ಸರ ಕಾರಿ ಮಿನಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಬೇಟೋಳಿ ಗ್ರಾಪಂ ಮಾಜಿ ಉಪಾ ಧ್ಯಕ್ಷರಾದ ಮಂಡೇಡ ಎ. ಮೊಯ್ದು ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರಿ ವಾಹನ ಗಳ ಸಂಚಾರ ನಿಷೇದಿಸಿರುವ ಕಾರಣ ಈ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಉಭಯ ರಾಜ್ಯಗಳ ಸರಕಾರಿ ಬಸ್ಸು ಸೇರಿ ದಂತೆ ಖಾಸಗಿ ಬಸ್ಸುಗಳ ಸಂಚಾರ ಕೂಡ ಸ್ಥಗಿತಗೊಂಡು 3 ತಿಂಗಳು ಕಳೆದಿದೆ. ಇದರಿಂದ ಸಾಮಾನ್ಯ ಜನರಿಗೆ ಹೆಚ್ಚು ತೊಂದರೆಯಾಗುತ್ತಿದೆ. ದಕ್ಷಿಣ ಕೊಡಗಿನ ಬಹುಪಾಲು ಜನರು ವೈದ್ಯಕೀಯ ಚಿಕಿತ್ಸೆ ಗಾಗಿ ನೆರೆಯ ತಲ್ಲಚೇರಿ, ಕಣ್ಣಾನೂರು, ಪಯ್ಯನೂರು ಮೊದಲಾದ ನಗರಗಳನ್ನು ಹಿಂದಿನಿಂದಲೂ ಆಶ್ರಯಿಸುತ್ತಾ ಬಂದಿ ದ್ದಾರೆ. ಇದೀಗ ವಿರಾಜಪೇಟೆ-ಮಾಕುಟ್ಟ ಮಾರ್ಗದಲ್ಲಿ ಬಸ್ಸು ಸಂಚಾರ ಇಲ್ಲದಿರುವ ಹಿನ್ನೆಲೆಯಲ್ಲಿ ಜನರ ವೈದ್ಯಕೀಯ ಚಿಕಿ ತ್ಸೆಗೂ ತೊಂದರೆಯಾಗುತ್ತಿದೆ. ಅದರಲ್ಲೂ ಬಸ್ಸನ್ನೆ ಅವಲಂಬಿಸಿರುವ ಸಾವಿರಾರು ಬಡ ಜನರು ಕಳೆದ 3 ತಿಂಗಳಿನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.

ಈ ಮಾರ್ಗದಲ್ಲಿ ಬಸ್ ಸಂಚಾರವಿಲ್ಲ ದಿರುವುದನ್ನು ಬಂಡವಾಳವಾಗಿಸಿಕೊಂಡಿ ರುವ ಕೊಡಗು ಮತ್ತು ಕೇರಳದ ಕೆಲ ಜೀಪ್ ಚಾಲಕರು ಜನರಿಂದ ನಿಗದಿತ ದರ ಕ್ಕಿಂತಲೂ ಹೆಚ್ಚಿನ ಹಣವನ್ನು ಪಡೆದು ಸುಲಿಗೆ ಮಾಡುತ್ತಿದ್ದಾರೆ. ಹೆಚ್ಚಿನ ಹಣ ನೀಡಲು ಬಡ ಜನತೆಗೆ ತೊಂದರೆಯಾ ಗುತ್ತಿದೆ. ಈ ಸುಲಿಗೆಯಿಂದ ಬೇಸತ್ತಿರುವ ಕೆಲವರು ಮಾನಂದವಾಡಿ ಮಾರ್ಗವಾಗಿ ಕೇರಳಕ್ಕೆ ಬಸ್ಸಿನಲ್ಲಿ ತೆರಳುವಂತಾಗಿದೆ ಎಂದು ಅಪಾದಿಸಿರುವ ಮಂಡೇಡ ಎ. ಮೊಯ್ದು ಅವರು, ವಿರಾಜಪೇಟೆಯಿಂದ ಇರಿಟಿ, ಮಟ್ಟನೂರು ಕಡೆಗೆ ತೆರಳಲು ಕನಿಷ್ಠ ರೂ. 150 ಅನ್ನು ಜೀಪ್‍ಗಳಿಗೆ ಪಾವ ತಿಸುವುದು ಅನಿವಾರ್ಯವಾಗುತ್ತಿದೆ. ಒಂದೇ ಮನೆಯ 3-4 ಜನರು ಕೇರಳಕ್ಕೆ ತೆರಳು ವುದಾದರೆ ದೊಡ್ಡ ಮೊತ್ತದ ಅಗತ್ಯವಿದೆ. ಇದು ಬಡವರ ಮೇಲೆ ಹೆಚ್ಚಿನ ಹೊರೆ ಯಾಗುತ್ತಿದೆ ಎಂದು ಹೇಳಿದ್ದಾರೆ.

ಜೀಪ್ ದಂಧೆಗೆ ಕಡಿವಾಣ ಹಾಕಲು ಕೂಡಲೇ ಜಿಲ್ಲಾಡಳಿತ ವಿರಾಜಪೇಟೆ- ಮಾಕುಟ್ಟ ಮಾರ್ಗದಲ್ಲಿ ಸರಕಾರಿ ಮಿನಿ ಬಸ್ಸು ಸೌಲಭ್ಯವನ್ನು ಕಲ್ಪಿಸಿ ಜನರ ಸಮ ಸ್ಯೆಯನ್ನು ನೀಗಿಸಬೇಕು. ನಂತರ ವಿರಾಜ ಪೇಟೆಯಿಂದ ಕೂಟುಹೊಳೆವರೆಗಿನ ಹಾನಿಯಾದ ರಸ್ತೆ ಭಾಗವನ್ನು ಸರಿಪಡಿಸಿ ಭಾರಿ ವಾಹನಗಳ ಸಂಚಾರಕ್ಕೆ ಮುಕ್ತ ಗೊಳಿಸಬೇಕು ಎಂದು ಆಗ್ರಹಿಸಿರುವ ಮಂಡೇಡ ಎ. ಮೊಯ್ದು ಅವರು, ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಜನರ ಸಮಸ್ಯೆಗೆ ಕೂಡಲೇ ಅಗತ್ಯ ಪರಿಹಾರ ಒದಗಿಸಬೇಕು ಎಂಬ ಬೇಡಿಕೆ ಯೊಂದಿಗೆ ಜನರ ಪರವಾಗಿ ಜಿಲ್ಲಾಧಿಕಾ ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸ ಲಾಗುವುದು ಎಂದು ತಿಳಿಸಿದ್ದಾರೆ.