ಗ್ರಾಹಕರ ದಿನಾಚರಣೆ, ಹಕ್ಕುಗಳ ಕುರಿತು ಪ್ರಾತ್ಯಕ್ಷಿಕೆ

ಮೈಸೂರು: ಮೈಸೂರಿನ ವಿಪ್ರ ಸಹಾಯವಾಣಿ ಮತ್ತು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಶ್ವ ಗ್ರಾಹಕರ ದಿನವನ್ನು ಮೈಸೂರಿನ ವಿದ್ಯಾರಣ್ಯಪುರಂ ಅವನೀ ಶಂಕರ ಮಠದಲ್ಲಿ ಆಚರಿಸಲಾಯಿತು.

ನಿತ್ಯ ಬಳಕೆಯ ಅಗತ್ಯ ವಸ್ತುಗಳ ಕುರಿತು ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಅಡುಗೆ ಅನಿಲದ ಸುರಕ್ಷತೆ ಮತ್ತು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ವೇಣುಗೋಪಾಲ್ ಪ್ರಾತ್ಯಕ್ಷಿಕೆ ನೀಡಿದರು.

ನಂತರ ಗ್ರಾಹಕರ ಹಕ್ಕುಗಳ ಬಗ್ಗೆ ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಗ್ರಾಹಕರು ಪ್ರಜ್ಞಾವಂತರಾದರೆ ಮಾತ್ರ ಗ್ರಾಹಕ ಸಮುದಾಯದಲ್ಲಿ ಏಳ್ಗೆ ಸಾಧ್ಯ. ಜಾಹೀರಾತಿಗೆ ಮರುಳಾಗಿ ಅನಗತ್ಯ ವಸ್ತು ಖರೀದಿಸಿವ ಮೊದಲು ಆ ವಸ್ತುವಿನ ಸಂಪೂರ್ಣ ಮಾಹಿತಿ ತಿಳಿಯಬೇಕು. ಮೋಸ ಹೋಗಿದ್ದಲ್ಲಿ ಗ್ರಾಹಕ ಪಂಚಾಯತ್ ಕೇಂದ್ರದ ಸಹಾಯ ಪಡೆದು ಪ್ರಕರಣ ದಾಖಲಿಸಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಹಕರು ಹಕ್ಕುಗಳ ಕುರಿತ ಕರಪತ್ರ ಬಿಡುಗಡೆ ಮಾಡಿದ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತರೆ ಇಡೀ ಸಮಾಜವೇ ಅರಿತಂತೆ. ಆದ್ದರಿಂದ ಖರೀದಿಸುವ ಉತ್ಪನ್ನಗಳ ಮಾಹಿತಿಗಳನ್ನು ಇಂಟರ್‍ನೆಟ್ ಮೂಲಕ ತಿಳಿದುಕೊಳ್ಳಬೇಕು ಎಂದರು.

ಮಹಿಳಾ ಸಾಧಕರಾದ ಗ್ರಾಹಕ ಮಾಹಿತಿ ಕೇಂದ್ರದ ನಾಗರತ್ನಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ, ವಕೀಲರಾದ ವೀಣಾ ಪ್ರಸನ್ನ ಅವರನ್ನು ಸನ್ಮಾನಿಸ ಲಾಯಿತು. ಗ್ರಾಹಕ ಪಂಚಾಯತ್ ಉಪಾಧ್ಯಕ್ಷ, ಆರ್‍ಟಿಐ ಕಾರ್ಯಕರ್ತ ಜಿ.ಆರ್.ವಿದ್ಯಾ ರಣ್ಯ, ಭವಾನಿಶಂಕರ್, ಜಿ.ರಮೇಶ್, ರಂಗನಾಥ್, ಜಯಸಿಂಹ, ಸುಚೀಂದ್ರ, ತೇಜಸ್ ಶಂಕರ್, ಪ್ರಶಾಂತ್ ಭಾರದ್ವಾಜ್, ರಾಧಾ, ಲತಾ ಬಾಲಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.