ಸಮುದಾಯಗಳ ಅಭಿವೃದ್ಧಿ ಸಂವಿಧಾನದ ಆಶಯ ಪ್ರಭಾರ ಅಪರ ಜಿಲ್ಲಾಧಿಕಾರಿ ಎಂ.ಆರ್.ರಾಜೇಶ್

ಮಂಡ್ಯ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನೆರವಾಗಲು ಇಂತಹ ವ್ಯಕ್ತಿಗಳ ಜಯಂತಿ ಉತ್ತಮ ವೇದಿಕೆಯಾಗಿದ್ದು, ಸಮುದಾಯಗಳ ಅಭಿವೃದ್ಧಿ ಸಂವಿಧಾನದ ಆಶಯ ವಾಗಿದೆ ಎಂದು ಪ್ರಭಾರ ಅಪರ ಜಿಲ್ಲಾಧಿಕಾರಿ ಎಂ.ಆರ್. ರಾಜೇಶ್ ತಿಳಿಸಿದರು.

ಮಂಗಳವಾರ ಜಿಲ್ಲಾಡಳಿತ, ಜಿಪಂ ಮತ್ತು ಕನ್ನಡ ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕಲಾಮಂದಿರ ದಲ್ಲಿ ನಡೆÀದ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಒಗ್ಗಟ್ಟಾಗಬೇಕು. ಎಲ್ಲಾ ವೃತ್ತಿಗಳನ್ನು ಸಮಾನವಾಗಿ ಗೌರವಿಸಬೇಕು ಎಂದರು.
ಮುಖ್ಯ ಶಿಕ್ಷಕ ರಾಮಮೂರ್ತಿ ಸವಿತ ಮಹರ್ಷಿ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಸವಿತಾ ಸಮಾಜದ ಮಹರ್ಷಿಗಳು ಶಿವನ ಬಲಗಣ್ಣಿನಿಂದ ಹುಟ್ಟಿ ದವರು. ನಯನಜ ಕ್ಷತ್ರಿಯನಾಗಿದ್ದು ಸವಿತಾ ಮಹರ್ಷಿ ಗಳು ವೃತ್ತಿಯಲ್ಲಿ ವಾದ್ಯ ಹಾಗೂ ಕ್ಷೌರಿಕ ವೃತ್ತಿ ಮಾಡು ತ್ತಿದ್ದರು. ಸಮಾಜದಲ್ಲಿ ಜಾತಿಯಿಂದ ಬರುವ ಗೌರವ ಶಾಶ್ವತವಲ್ಲ ಎಂದು ತಿಳಿದಿದ್ದ ಅವರು 12ನೇ ಶತಮಾನ ದಲ್ಲಿ ಹಡಪದ ಅಪ್ಪಣ್ಣ ಸವಿತಾ ಮಹರ್ಷಿ ತತ್ವ ಅಳವಡಿಸಿಕೊಂಡು ಬಸವಣ್ಣ ಅವರ ಗಮನ ಸೆಳೆದಿದ್ದರು ಎಂದು ತಿಳಿಸಿದ ಅವರು ಎಲ್ಲಾ ಸಮಾಜದ ಶ್ರೇಷ್ಠ ನಾಯಕರನ್ನು ಸರ್ಕಾರ ಗುರ್ತಿಸಿ ಜಯಂತಿ ಆಚರಿಸುತ್ತಿ ರುವುದು ನಮ್ಮ ಅದೃಷ್ಟ ಎಂದರು.

ಸವಿತಾ ಸಮಾಜದ ರಾಜ್ಯ ಸಂಚಾಲಕ ವಿ. ಅಂಜನಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ, ತಾಲೂಕು ಘಟಕದ ಅಧ್ಯಕ್ಷ ಮೂರ್ತಿ, ಮುಖಂಡ ರಾದ ಸಂದೇಶ್ ಸಿದ್ದಶೆಟ್ಟಿ ಹಾಗೂ ಸಮುದಾಯದ ಇತರೆ ಮುಖಂಡರು ಭಾಗವಹಿಸಿದ್ದರು.