ಕೊಡಗು ನೆರೆ ನಿರಾಶ್ರಿತರಿಗೆ ಮಳೆಗಾಲ ಆರಂಭಕ್ಕೂ ಮುನ್ನ ಮನೆಗಳ ಹಸ್ತಾಂತರ ಜಿಲ್ಲಾಧಿಕಾರಿಗಳ ಭರವಸೆ

ಮಡಿಕೇರಿ: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಳೆಗಾಲ ಆರಂಭಕ್ಕೆ ಮೊದಲು ಮನೆ ಗಳನ್ನು ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭರವಸೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮದೆ ಮತ್ತು ಕರ್ಣಂಗೇರಿಯಲ್ಲಿ 55 ಮನೆಗಳ ಕಾಮಗಾರಿ ಮೇಲ್ಛಾವಣಿ ಹಂತ ತಲುಪಿದೆ.

ಪ್ರಥಮ ಹಂತದಲ್ಲಿ 840 ನಿರಾಶ್ರಿತ ರನ್ನು ಗುರುತಿಸಲಾಗಿತ್ತು, ಬಳಿಕ ಕೆಲವರ ಹೆಸರು ಕೈಬಿಟ್ಟಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಕೈಬಿಟ್ಟಿರುವವರನ್ನು ಸೇರ್ಪಡೆ ಮಾಡಲು ಕ್ರಮಕೈಗೊಳ್ಳಲಾ ಗಿದೆ. ಈಗಾಗಲೇ ಜಂಬೂರು, ಮದೆ, ಕರ್ಣಂಗೇರಿ ಮತ್ತಿತರ ಕಡೆಗಳ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಸಂತ್ರಸ್ತರಿಗೆ ಮನೆ ನಿರ್ಮಿಸಲಾಗುತ್ತದೆ. ಎರಡನೇ ಹಂತದಲ್ಲಿ ಸಂತ್ರಸ್ತರು ಸ್ವತಃ ಮನೆ ಕಟ್ಟಿಕೊಳ್ಳಲು ಮುಂದೆ ಬಂದಗೆ ಹಣ ಪಾವತಿಸಲಾಗುತ್ತದೆ. ಮೂರನೇ ಹಂತದಲ್ಲಿ ಸಂತ್ರಸ್ತರ ಜಾಗದಲ್ಲಿ ಏಜೆನ್ಸಿ ಗಳ ಮೂಲಕ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರಿ ಭೂಮಿ ಯಲ್ಲಿ ಕೆಲ ಸಂಸ್ಥೆಗಳಿಂದ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಈಗಾಗಲೇ ಇನ್ಫೋ ಸಿಸ್ ಮತ್ತು ಪಿಟ್ಟೂಸ್ ಸಂಸ್ಥೆಗಳು ಇದಕ್ಕೆ ಮುಂದೆ ಬಂದಿವೆ. ಇನ್ಫೋಸಿಸ್ ಸಂಸ್ಥೆಗೆ ಜಂಬೂರಿನಲ್ಲಿ ಜಾಗ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪರಿಹಾರಕ್ಕೆ ಸಂಬಂಧಿಸಿದಂತೆ, ಈಗಾ ಗಲೇ ಜೀವ ಹಾನಿಯಾದ 19 ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಗಿದೆ. ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ 4,564 ಕುಟುಂ ಬದವರಿಗೆ ಮೊದಲ ಕಂತಿನಲ್ಲಿ 3,800 ರೂ. ನಂತೆ 173 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಜೋಡುಪಾಲದಲ್ಲಿ ಜಲ ಪ್ರಳಯದ ಸಂದರ್ಭ ನಾಪತ್ತೆಯಾಗಿ, ಮೃತದೇಹವೂ ದೊರಕದೇ ಇರುವ ಮಂಜುಳಾ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವ ಜನಿಕರಿಂದ ಸಾಕಷ್ಟು ಪರಿಹಾರ ಸಾಮಗ್ರಿ ಗಳು ಕೊಡಗು ಜಿಲ್ಲೆಗೆ ಹರಿದುಬಂದಿತ್ತು. ಈಗಾಗಲೇ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಒದಗಿಸಲಾಗಿದೆ. ಉಳಿದಂತೆ ಗೋದಾಮಿ ನಲ್ಲಿ ಇರುವ ಸಾಮಗ್ರಿಗಳನ್ನು ಎರಡು ವಾರದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಕೃತಿ ವಿಕೋಪದಿಂದಾಗಿ 29,266 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಈಗಾ ಗಲೇ 14,609 ಹೆಕ್ಟೇರ್ ಪ್ರದೇಶಕ್ಕೆ ಪರಿ ಹಾರ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.
ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಆವೃ ತ್ತವಾಗಿದ್ದು ಭೂಕುಸಿತ ಉಂಟಾಗುವ ಪ್ರದೇ ಶಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂಬ ಹಿನ್ನೆಲೆಯಲ್ಲಿ ಭಾರ ತೀಯ ಭೂವಿಜ್ಞಾನ ಸಂಸ್ಥೆಯು ಜಿಲ್ಲೆಯ ನಾನಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀ ಲನೆ ನಡೆಸುತ್ತಿದೆ. ಮಾರ್ಚ್ 30ರೊಳಗೆ ವರದಿ ನೀಡಲಿದೆ ಎಂದು ತಿಳಿಸಿದರು.