ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ

ಮೈಸೂರು, ಜು.25(ಆರ್‍ಕೆಬಿ)- ಯಾವುದೇ ವಸ್ತು ಖರೀದಿಸುವ ಮುನ್ನ ಗ್ರಾಹಕರು ಆ ವಸ್ತುವಿನ ನಿರ್ದಿಷ್ಟತೆ, ಗುಣಮಟ್ಟ ಮತ್ತು ವಸ್ತುವಿನ ಆಯಸ್ಸಿನ (ಎಕ್ಸ್‍ಪೈರಿ) ದಿನಾಂಕ ಪರಿಶೀಲಿಸಬೇಕು. ಅಲ್ಲಿ ನಿಮಗೆ ಅನುಮಾನ ಬಂದರೆ ಅದನ್ನು ಪ್ರಶ್ನಿಸುವ ಹಕ್ಕು ನಿಮ್ಮದಾಗಿರುತ್ತದೆ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ತಿಳಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆ ಇಂಜಿನಿ ಯರುಗಳ ಸಂಸ್ಥೆ ಸಭಾಂಗಣದಲ್ಲಿ ನವ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆಯ ಮೈಸೂರು ಜಿಲ್ಲಾ ಘಟಕವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಹೋಟೆಲ್ ಗಳಲ್ಲಿ ಜಿಎಸ್‍ಟಿ ಜೊತೆಗೆ ಸೇವಾ ತೆರಿಗೆ (ಸರ್ವಿಸ್ ಟ್ಯಾಕ್ಸ್) ಯನ್ನು ಹಾಕುತ್ತಾರೆ. ಆದರೆ ಅದನ್ನು ಹಾಕುವಂತಿಲ್ಲ. ಏಕೆಂದರೆ ಜಿಎಸ್‍ಟಿಯೊಳಗೇ ಸೇವಾ ತೆರಿಗೆ ಒಳ ಗೊಂಡಿರುತ್ತದೆ. ಹಾಗಾಗಿ ಗ್ರಾಹಕರು ಅವೆಲ್ಲ ವನ್ನೂ ಪರಿಶೀಲಿಸಬೇಕು. ಎಲ್ಲಿಯವರೆಗೆ ಇವೆಲ್ಲವನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಗ್ರಾಹಕರು ಮೋಸ ಹೋಗುವುದು ತಪ್ಪು ವುದಿಲ್ಲ ಎಂದು ಸಲಹೆ ನೀಡಿದರು. ಕಾರ್ಯ ಕ್ರಮದಲ್ಲಿ ನವ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್, ವಕೀಲ ರಮೇಶ್, ದೇವರಾಜ ಅರಸು ನಿಗಮದ ನಿವೃತ್ತ ನಿರ್ದೇಶಕ ಚನ್ನಪ್ಪ, ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಬೋರೇಗೌಡ, ಮೈಸೂರು ಜಿಲ್ಲಾಧ್ಯಕ್ಷ ಎಸ್.ಎನ್.ಮಂಜುನಾಥ, ಬಿ.ಆರ್. ನಾರಾಯಣ ಇನ್ನಿತರರು ಉಪಸ್ಥಿತರಿದ್ದರು.