ವಿಕಲಚೇತನರ ತ್ರಿಚಕ್ರ ವಾಹನ ಜಾಥಾ

ಹಾಸನ: ನಗರದ ಸಾಹಿತ್ಯ ಪರಿಷತ್ ಆವರಣದಲ್ಲಿ ಬುಧವಾರ ಆಯೋಜಿ ಸಿದ್ದ ವಿಶೇಷ ಚೇತನರ ಮತದಾರರ ಜಾಗೃತಿ ಜಾಥಾ ಎಲ್ಲರ ಗಮನ ಸೆಳೆಯಿತು.

ಲೋಕಸಭಾ ಚುನಾವಣೆ-2019ರ ಜಿಲ್ಲಾ ರಾಯಭಾರಿಯಾಗಿ ಪ್ರಖ್ಯಾತ ರ್ಯಾಪ್ ಕಲಾವಿದರಾದ ಎಸ್.ಪಿ.ಚಂದನ್‍ಶೆಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹೆಚ್.ಸಿ.ಪುಟ್ಟಸ್ವಾಮಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ, ವಿಕಲಚೇತನ ಸಂಘದ ಅಧ್ಯಕ್ಷ ಚಂದ್ರ ರಾಜ್ ಅರಸ್ ಹಾಗೂ ಅಧಿಕಾರಿಗಳು ಹಾಜರಿದ್ದರು. ಜಾಥಾವು ಕನ್ನಡ ಸಾಹಿತ್ಯ ಪರಿಷತ್ ಭವನದಿಂದ ಹೊರಟು ಹೇಮಾವತಿ ಪ್ರತಿಮೆ ಮೂಲಕ ಜಿಲ್ಲಾ ಪಂಚಾಯಿತಿವರೆಗೂ ಮುಂದುವರೆದು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಟಿ.ಪಾಪಭೋವಿ, ನಿರೂಪಣಾಧಿಕಾರಿ ನಾಗರಾಜ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲೇಶ್, ಜಿಲ್ಲಾ ಪಂಚಾಯಿತಿ ಅಧಿಕಾರಿ ಗಳಾದ ಸುದರ್ಶನ್, ಲಕ್ಷ್ಮೀ, ಭಾನುಪ್ರಕಾಶ್ ಹಾಗೂ ಎಲ್ಲಾ ಎಂಆರ್‍ಡಬ್ಲ್ಯೂ, ಎಲ್ಲಾ ವಿಆರ್‍ಡಬ್ಲ್ಯೂ ಹಾಗೂ ನೂರಾರು ವಿಕಲಚೇತನರು ಜಾಥಾದಲ್ಲಿ ಪಾಲ್ಗೊಂಡಿದ್ದರು.