ಸೇವಾನುಭವ ಕಡೆಗಣನೆ: ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ

ಹಾಸನ, ಜೂ.29(ಸೋಮೇಶ್)- ವಿದ್ಯಾ ರ್ಹತೆ ಹಾಗೂ ಸೇವಾನುಭವ ಹೊಂದಿ ದ್ದರೂ ಕೂಡ ಅದನ್ನು ಪರಿಗಣಿಸದೇ ಕಡೆಗಣಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆಯಲ್ಲಿ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಕೆಲಕಾಲ ಪ್ರತಿ ಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಒಂದರಿಂದ ಏಳನೇ ತರಗತಿಗೆ ನೇಮಕವಾಗಿ 2005 ರಿಂದ 8ನೇ ತರಗತಿ ಪ್ರಾರಂಭಿಸಿದಾಗಿನಿಂದಲೂ 6 ಮತ್ತು 8ನೇ ತರಗತಿಗಳ ಸೇವೆಯಲ್ಲಿರುವ ಪದವೀ ಧರ ಶಿಕ್ಷಕರು ಬೋಧಿಸುತ್ತಾ ಬಂದಿದ್ದೇವೆ. ನಾವುಗಳು ಪದವಿ ಹಾಗೂ ವಿದ್ಯಾರ್ಹತೆ, ಸೇವಾನುಭವ ಹೊಂದಿದ್ದರೂ ಕೂಡ ನಮ್ಮನ್ನು ಪರಿಗಣಿಸದೇ ಅನ್ಯಾಯ ಮಾಡ ಲಾಗಿದೆ. ನಮಗೆ ನ್ಯಾಯ ದೊರೆಯು ವವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರು 1-5 ಆದೇಶದಂತೆ 1 ರಿಂದ 5ನೇ ತರ ಗತಿಗಳ ವಿಷಯಗಳನ್ನು ಮಾತ್ರ ಬೋಧಿ ಸುವುದಾಗಿ ಹೇಳಿದರು. 2019ರ ಜು.1, 6 ರಿಂದ 7 ಮತ್ತು 8ನೇ ತರಗತಿಗಳ ಬೋಧನಾ ಕಾರ್ಯವನ್ನು ಬಹಿಷ್ಕರಿಸು ವುದಾಗಿ ಎಚ್ಚರಿಸಿದರು. ಜೊತೆಗೆ ಇನ್ನು ಮುಂದೆ ಇಲಾಖೆ ಆಯೋಜಿಸುವ 6 ರಿಂದ 8ನೇ ತರಗತಿಗಳಿಗೆ ಸಂಬಂಧಿಸಿ ದಂತೆ ಎಲ್ಲಾ ತರಗತಿಗಳನ್ನು ಸಂಪೂರ್ಣ ವಾಗಿ ಬಹಿಷ್ಕರಿಸಲು ನಿರ್ಧರಿಸಲಾಗಿದೆ. ನಮ್ಮನ್ನು ಯಾವುದೇ 6-8ರ ತರಬೇತಿಗೆ ನಿಯೋಜಿಸಬಾರದು. ನ್ಯಾಯಯುತ ವಾದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ, ಅಧ್ಯಕ್ಷ ಎ.ಟಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಉಪಾಧ್ಯಕ್ಷ ಡಿ.ವಿಶ್ವನಾಥ್, ಸಹ ಕಾರ್ಯದರ್ಶಿ ಮಹೇಶ್ ಇತರರಿದ್ದರು.